ಇನ್ನೂ ಕೆರೆ ತುಂಬಿ ಕೋಡಿ ಹರಿದರೇ ಆ ನೀರು ಆಂಧ್ರಪ್ರದೇಶಕ್ಕೆ ಸೇರುತ್ತದೆ. ಕಳೆದ ಬಾರಿ ಕೆರೆಯ ನೀರನ್ನು ಕುಡಿಯಲು ಜಿಲ್ಲಾಡಳಿತದಿಂದ ಮೀಸಲು ಇಡಲಾಗಿತ್ತು. ಇದೀಗ ಕೆರೆ ತುಂಬಿ ಹರಿಯುತ್ತಿದ್ದು, ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಆ ನೀರನ್ನು ಕೃಷಿಗೆ ಬಳಸಲಾಗುವುದು.
ಕನ್ನಡಪ್ರಭ ವಾರ್ತೆ ಗುಡಿಬಂಡೆ
ಜಿಲ್ಲೆಯಾದ್ಯಂತ ಅ.21 ರ ರಾತ್ರಿ ಬಿದ್ದ ಭಾರಿ ಮಳೆಗೆ ಕೆರೆ ಕುಂಟೆಗಳು ತುಂಬಿದ್ದು, ಗುಡಿಬಂಡೆ ಹೊರವಲಯದ ಐತಿಹಾಸಿಕ ಹಿನ್ನೆಲೆಯ ಅಮಾನಿ ಬೈರಸಾಗರ ಕೆರೆ ತುಂಬಿ ಕೋಡಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಶಾಸಕ ಸುಬ್ಬಾರೆಡ್ಡಿ ಕುಟುಂಬ ಸಮೇತ ಆಗಮಿಸಿ ಬಾಗಿನ ಅರ್ಪಿಸಿದರು. ಈ ವೇಳೆ ಗುಡಿಬಂಡೆ ಕೆರೆ ಕೋಡಿಯ ಮೇಲ್ಸುತುವೆ ನಿರ್ಮಾಣ ಮಾಡಲು ಮತ್ತೊಮ್ಮೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.
ಕಳೆದ 2022 ನೇ ವರ್ಷದಲ್ಲೂ ಸಹ ಇದೇ ರೀತಿಯ ಮಳೆಯಾಗಿ ಗುಡಿಬಂಡೆ ತಾಲೂಕು ಸುಮಾರು ಒಂದು ತಿಂಗಳಕ್ಕೂ ಹೆಚ್ಚಿನ ಕಾಲ ಕೋಡಿ ಹರಿದು ಜನ ಜೀವನ ಅಸ್ತವ್ಯಸ್ಥಗೊಂಡಿತ್ತು. ಆ ಸಮಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿತ್ತು. ನಾನು ಗುಡಿಬಂಡೆ ಕೆರೆ ಕೋಡಿಯ ಬಳಿ ಮೇಲ್ಸುತುವೆ ನಿರ್ಮಾಣ ಮಾಡಲು ಬಿಜೆಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆ. ಕೆಲವೊಂದು ಕಾರಣಗಳಿಂದ ಪ್ರಸ್ತಾವನೆ ಮಂಜೂರಾಗಿಲ್ಲ ಎಂದರು.
ಕೃಷಿಗೆ ನೀರು ಬಳಸಲು ಕ್ರಮ
ಇನ್ನೂ ಕೆರೆ ತುಂಬಿ ಕೋಡಿ ಹರಿದರೇ ಆ ನೀರು ಆಂಧ್ರಪ್ರದೇಶಕ್ಕೆ ಸೇರುತ್ತದೆ. ಕಳೆದ ಬಾರಿ ಕೆರೆಯ ನೀರನ್ನು ಕುಡಿಯಲು ಜಿಲ್ಲಾಡಳಿತದಿಂದ ಮೀಸಲು ಇಡಲಾಗಿತ್ತು. ಇದೀಗ ಕೆರೆ ತುಂಬಿ ಹರಿಯುತ್ತಿದ್ದು, ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಆ ನೀರನ್ನು ಕೆರೆಯ ಅಚ್ಚುಕಟ್ಟು ವ್ಯಾಪ್ತಿಯ ರೈತರು ಬೆಳೆ ಬೆಳೆಯಲು ಅನುಕೂಲವಾಗುವಂತೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.
ಈ ವೇಳೆ ಪ.ಪಂ. ಅಧ್ಯಕ್ಷ ವಿಕಾಸ್, ಹಸಿಲ್ದಾರ್ ಸಿಗ್ಬತ್ತುಲ್ಲಾ, ಸರ್ಕಲ್ ಇನ್ಸ್ ಪೆಕ್ಟರ್ ನಯಾಜ್, ಸಣ್ಣ ನೀರಾವರಿ ಇಲಾಖೆಯ ಸುನೀಲ್, ಲೋಕೋಪಯೋಗಿ ಇಲಾಖೆಯ ಪ್ರದೀಪ್, ಪೂಜಪ್ಪ, ಪ.ಪಂ. ಮುಖ್ಯಾಧಿಕಾರಿ ಶ್ರೀನಿವಾಸ್, ಪ.ಪಂ ಸದಸ್ಯರು, ಮುಖಂಡರು ಸೇರಿದಂತೆ ಹಲವರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.