ಬೈರಶೆಟ್ಟಿಹಳ್ಳಿ ಡೇರಿ ಅಧ್ಯಕ್ಷ ಲಿಂಗೇಶ್ ಕುಮಾರ್

KannadaprabhaNewsNetwork |  
Published : Jan 18, 2024, 02:02 AM IST
ಪೊಟೋ೧೭ಸಿಪಿಟಿ೧:  ತಾಲೂಕಿನ ಬೈರಶೆಟ್ಟಿಹಳ್ಳಿ ಡೇರಿ ನೂತನ ಅಧ್ಯಕ್ಷ ಲಿಂಗೇಶ್ ಕುಮಾರ್ ಹಾಗೂ ಉಪಾಧ್ಯಕ್ಷ ನಾಗರಾಜು ಅವರನ್ನು ಮುಖಂಡರು ಅಭಿನಂದಿಸಿದರು. | Kannada Prabha

ಸಾರಾಂಶ

ಚನ್ನಪಟ್ಟಣ: ತಾಲೂಕಿನ ಬೈರಶೆಟ್ಟಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಸತತ ನಾಲ್ಕನೇ ಬಾರಿಗೆ ಎಸ್.ಲಿಂಗೇಶ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ನಾಗರಾಜು ಅವಿರೋಧ ಆಯ್ಕೆಯಾದರು.

ಚನ್ನಪಟ್ಟಣ: ತಾಲೂಕಿನ ಬೈರಶೆಟ್ಟಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಸತತ ನಾಲ್ಕನೇ ಬಾರಿಗೆ ಎಸ್.ಲಿಂಗೇಶ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ನಾಗರಾಜು ಅವಿರೋಧ ಆಯ್ಕೆಯಾದರು.

ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಬಯಸಿ ಎಸ್.ಲಿಂಗೇಶ್ ಕುಮಾರ್ ಹಾಗೂ ನಾಗರಾಜು ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಬಿ.ರಮ್ಯಶ್ರೀ ಇವರಿಬ್ಬರ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ನಿರ್ದೇಶಕರಾದ ಲೋಕೇಶ್ ಬಿ.ಪಿ.ಶಿವಣ್ಣ, ಬಿ.ನಾಗರಾಜು, ತಮ್ಮಯ್ಯ, ಎಂ.ದಿನೇಶ್, ಬಿ.ಪಿ.ಚಂದ್ರು, ಜಯಮ್ಮ, ಶಿವಮ್ಮ, ಉಮೇಶ್ ಹಾಗೂ ನಾಗರಾಜು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಸಮ್ಮತಿ ಸೂಚಿಸಿದರು.

ಅಭಿವೃದ್ಧಿಗೆ ಶ್ರಮಿಸುವೆ:

ನುತನ ಅಧ್ಯಕ್ಷ ಎಸ್.ಲಿಂಗೇಶ್‌ಕುಮಾರ್ ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಡೇರಿಗೆ ಒಂದು ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗುವುದೇ ಕಷ್ಟವಾಗಿದೆ. ಅಂತದ್ದರಲ್ಲಿ ನಮ್ಮೂರಿನ ಮುಖಂಡರು, ಡೇರಿ ನಿರ್ದೇಶಕರು ಸತತ ನಾಲ್ಕು ಬಾರಿ ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ. ಇವರು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ನಿರ್ವಹಿಸುವುದಾಗಿ ಭರವಸೆ ನೀಡಿದರು.

ಸಹಕಾರ ವಲಯದಲ್ಲಿ ನಾನು ಇಂದು ಏನಾದರೂ ಸೇವೆ ಮಾಡಿದ್ದರೆ, ಅದಕ್ಕೆ ನನ್ನೂರಿನ ಜನತೆಯ ಆಶೀರ್ವಾದ, ಋಣ ಸಾಕಷ್ಟಿದೆ. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನನ್ನೂರು ಬೈರಶೆಟ್ಟಿಹಳ್ಳಿಯ ಸಮಗ್ರ ಬೆಳವಣಿಗೆ ಹಾಗೂ ಡೇರಿ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಗ್ರಾಮದ ಮುಖಂಡರಾದ ಛೇರ್ಮನ್ ರಾಜು, ಗ್ರಾಪಂ ಸದಸ್ಯರಾದ ಪುಟ್ಟಸ್ವಾಮಿಗೌಡ, ಶಿವಲಿಂಗಮ್ಮ, ಮಾಜಿ ಗ್ರಾಪಂ ಸದಸ್ಯ ಪುಟ್ಟಸ್ವಾಮಿ, ಪುಟ್ಟ ರಾಜು, ಹೆಳಗಯ್ಯ, ಕೇಬಲ್ ಪುಟ್ಟಸ್ವಾಮಿ ಹಾಗೂ ಗ್ರಾಮದ ಅನೇಕ ಮುಖಂಡರು ಡೇರಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು. ಪೊಟೋ೧೭ಸಿಪಿಟಿ೧: ಚನ್ನಪಟ್ಟಣ ತಾಲೂಕಿನ ಬೈರಶೆಟ್ಟಿಹಳ್ಳಿ ಡೇರಿ ನೂತನ ಅಧ್ಯಕ್ಷ ಲಿಂಗೇಶ್ ಕುಮಾರ್ ಹಾಗೂ ಉಪಾಧ್ಯಕ್ಷ ನಾಗರಾಜು ಅವರನ್ನು ಮುಖಂಡರು ಅಭಿನಂದಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ