ಗುಂಡ್ಲುಪೇಟೆಯಲ್ಲಿ ಸಂಭ್ರಮದ ಬಕ್ರೀದ್‌

KannadaprabhaNewsNetwork |  
Published : Jun 08, 2025, 04:08 AM ISTUpdated : Jun 08, 2025, 04:09 AM IST
ತ್ಯಾಗ,ಬಲಿದಾನದ ಸಂಕೇತವಾದ ಹಬ್ಬವಾದ ಬಕ್ರೀದ | Kannada Prabha

ಸಾರಾಂಶ

ಗುಂಡ್ಲುಪೇಟೆ: ತ್ಯಾಗ, ಬಲಿದಾನದ ಸಂಕೇತದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಮೆರವಣಿಗೆ ನಡೆಸಿ, ಪ್ರಾರ್ಥನೆ ಸಲ್ಲಿಸಿಸುವ ಮೂಲಕ ಪಟ್ಟಣದಲ್ಲಿ ಶನಿವಾರ ಸಂಭ್ರಮ, ಸಡಗರದಿಂದ ಆಚರಿಸಿದರು.

ಗುಂಡ್ಲುಪೇಟೆ: ತ್ಯಾಗ, ಬಲಿದಾನದ ಸಂಕೇತದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಮೆರವಣಿಗೆ ನಡೆಸಿ, ಪ್ರಾರ್ಥನೆ ಸಲ್ಲಿಸಿಸುವ ಮೂಲಕ ಪಟ್ಟಣದಲ್ಲಿ ಶನಿವಾರ ಸಂಭ್ರಮ, ಸಡಗರದಿಂದ ಆಚರಿಸಿದರು.

ಚಾಮರಾಜನಗರ ರಸ್ತೆಯಲ್ಲಿರುವ ಮಸೀದಿಯಿಂದ ಮುಸ್ಲಿಂ ಬಾಂಧವರು ಪಾದಯಾತ್ರೆಯಲ್ಲಿ ತೆರಳಿ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಹಬ್ಬದ ವಿಶೇಷವಾಗಿ ಕುಯ್ದ ಕುರಿಯ ಮಾಂಸವನ್ನು ೩ ಭಾಗಿ ಮಾಡಿ ಅವರ ನೆಂಟರಿಷ್ಟರಿಗೆ ನಂತರ ಉಳಿದ ೧ ಭಾಗವನ್ನು ಬಡವರಿಗೆ ಮಾಂಸವನ್ನು ದಾನ ಮೂಲಕ ಬಕ್ರೀದ್ ಹಬ್ಬ ಆಚರಿಸಿದರು. ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ ಸಮಯದಲ್ಲಿ ಮುಸ್ಲಿಂ ಜನಾಂಗ ಧರ್ಮಗುರು ಮೌಲಿಯೊಬ್ಬರು ಮಾತನಾಡಿ, ಹಬ್ಬ ತ್ಯಾಗ ಬಲಿದಾನದ ಪಾವಿತ್ರತೆ ಬಗ್ಗೆ ಹೇಳಿದರು.

ಜಾಮೀಯ ಮಸೀದಿ ಅಧ್ಯಕ್ಷ ಸರ್ದಾರ್, ಪುರಸಭೆ ಸದಸ್ಯ ಮಹಮ್ಮದ್ ಇಲಿಯಾಸ್, ಪುರಸಭೆ ಮಾಜಿ ಉಪಾಧ್ಯಕ್ಷ ಸೈಯದ್‌ ದಸ್ತಗೀರ್, ಪುರಸಭೆ ಮಾಜಿ ಸದಸ್ಯ ನೂರುಲ್ಲ, ಕಾಂಗ್ರೆಸ್ ಹಿಂದುಳಿದ ವರ್ಗಗಳ ಕಾರ್ಯದರ್ಶಿ ಮಹಮ್ಮದ್ ಶಾಫಿ, ಮುಖಂಡರಾದ ಸಗೀರ್ (ಶಾಮಿಯಾನ), ನವೀದ್‌ ಖಾನ್‌, ಅಕ್ರಂ(ಎಸ್‌ ಡಿಪಿಐ), ಸಾಹುಲ್, ಹಜರ್, ಮೈದೀನ್, ಮುನ್ನ, ಈರುಳ್ಳಿ ಲತೀಫ್, ಅಬ್ದುಲ್‌ ಎ ಮಾಲೀಕ್‌ ಸೇರಿದಂತೆ ಸಾವಿರಾರು ಮಂದಿ ಪ್ರಾರ್ಥನೆ ಸಲ್ಲಿಸಿದರು. ನಂತರ ಪಟ್ಟಣದ ಮುಸ್ಲಿಂ ಭಾಂದವರು ಪರಸ್ಪರ ಬಕ್ರೀದ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಬಕ್ರೀದ್‌ಗೆ ಶುಭಾಶಯ ಕೋರಿದ ಶಾಸಕ ಗಣೇಶ್:

ಬಕ್ರೀದ್ ಹಬ್ಬದ ಹಿನ್ನಲೆ ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಕ್ಷೇತ್ರದ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು. ಕ್ಷೇತ್ರದಲ್ಲಿ ಶಾಸಕರು ಇರದ ಕಾರಣ ಮುಸ್ಲಿಂ ಭಾಂದವರಿಗೆ ಸಂದೇಶ ನೀಡಿ, ಶುಭ ಕೋರಿದ್ದಾರೆ.

೭ಜಿಪಿಟಿ೫

ಗುಂಡ್ಲುಪೇಟೆ ಪಟ್ಟಣದ ಈದ್ಗಾ ಮೈದಾನದಲ್ಲಿ ಪಟ್ಟಣದ ಮುಸ್ಲಿಂ ಭಾಂದವರು ಬಕ್ರೀದ್ ಹಬ್ಬದ ಅಂಗವಾಗಿ ಪ್ರಾರ್ಥನೆ ಸಲ್ಲಿಸಿದರು.

ಬಾಕ್ಸ್.............

ಬೇಗೂರಲ್ಲೂ ಪ್ರಾರ್ಥನೆ:

ತಾಲೂಕಿನ ಬೇಗೂರಿನ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಬಕ್ರೀದ್ ಹಬ್ಬಆಚರಿಸಿದರು. ಬೇಗೂರು, ಸೋಮಹಳ್ಳಿ, ನಿಟ್ರೆ ಗ್ರಾಮದ ಮುಸ್ಲಿಂ ಜನಾಂಗದವರು ಸಾಮೂಹಿಕವಾಗಿ ಭಾಗವಹಿಸಿ, ಮೆರವಣಿಗೆ ಮಾಡಿ ಪ್ರಾರ್ಥನೆ ಸಲ್ಲಿಸಿದರು. ಗ್ರಾಪಂ ಮಾಜಿ ಸದಸ್ಯ ರಿಯಾಜ್ ಪಾಷಾ, ಮುಖಂಡರಾದ ಮಟನ್ ಬಾಬು, ಅಬ್ದುಲ್ ಜಬ್ಬಾರ್, ನಿಸಾರ್ ಅಹಮದ್, ಮೊಹಮ್ಮದ್ ಜಿಕ್ರಿಯ ಸಾಹೇಬ್, ಮೊಹಮ್ಮದ್ ಇಲಿಯಾಸ್, ಮುಬಾರಕ್, ನೂರ್ ಮೊಹಮ್ಮದ್, ಅಬ್ದುಲ್ ಖಾದರ್ (ಟೈಲರ್ ಬಾಬು), ಹೋಟೆಲ್ ಖಲೀಲ್ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

೧೭ಜಿಪಿಟಿ೫

ಗುಂಡ್ಲುಪೇಟೆ ತಾಲೂಕಿನ ಬೇಗೂರಲ್ಲಿ ಬಕ್ರೀದ್ ಹಬ್ಬದ ಹಿನ್ನಲೆ ಮುಸ್ಲಿಂ ಬಾಂಧವರು ಮೆರವಣಿಗೆ ನಡೆಸಿದರು.

೭ಜಿಪಿಟಿ೬

ಎಚ್.ಎಂ.ಗಣೇಶ್‌ ಪ್ರಸಾದ್‌

PREV

Recommended Stories

ಬಿಆರ್‌ಎಲ್ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಕಾಲ ಉಳಿಯುವ ಆಪ್ತಭಾವದ ಕವಿ
ದಸರಾ ವೇಳೆ ಬಾನುರಿಂದ 2023ರ ಘಟನೆ ಮರುಕಳಿಸಬಾರ್ದು : ಯದುವೀರ್‌