ಬಿಜೆಪಿಯಲ್ಲಿ 20 ಬಣಗಳಿದ್ದು, ಒಂದೊಂದು ಬಣವೂ ಪಾದಯಾತ್ರೆ ಮಾಡಿಕೊಳ್ಳಲಿ : ಎಂ.ಬಿ ಪಾಟೀಲ್

Published : Aug 12, 2024, 09:49 AM IST
MB Patil

ಸಾರಾಂಶ

ಬಿಜೆಪಿಯಲ್ಲಿ 20 ಬಣಗಳಿವೆ. ಆರ್.ಅಶೋಕ ಬಣ, ವಿಜಯೇಂದ್ರ ಬಣ, ಪ್ರಹ್ಲಾದ ಜೋಶಿ ಬಣ, ಸಂತೋಷ‌ ಬಣ, ಅಶ್ವತ್ಥ ನಾರಾಯಣ ಬಣ, ಯತ್ನಾಳ-ಜಾರಕಿಹೊಳಿ ಬಣ, ಸಿ.ಟಿ.ರವಿ ಬಣ... ಹೀಗೆ 20 ಬಣಗಳಿವೆ.

ವಿಜಪುರ :  ಬಿಜೆಪಿಯಲ್ಲಿ 20 ಬಣಗಳಿವೆ. ಆರ್.ಅಶೋಕ ಬಣ, ವಿಜಯೇಂದ್ರ ಬಣ, ಪ್ರಹ್ಲಾದ ಜೋಶಿ ಬಣ, ಸಂತೋಷ‌ ಬಣ, ಅಶ್ವತ್ಥ ನಾರಾಯಣ ಬಣ, ಯತ್ನಾಳ-ಜಾರಕಿಹೊಳಿ ಬಣ, ಸಿ.ಟಿ.ರವಿ ಬಣ... ಹೀಗೆ 20 ಬಣಗಳಿವೆ. 

ಒಂದೊಂದು ಬಣವೂ ಒಂದೊಂದು ಪಾದಯಾತ್ರೆ ಮಾಡಲಿ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ವ್ಯಂಗ್ಯವಾಡಿದ್ದಾರೆ. 

ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಕೊರೋನಾ ಕಾಲದ ₹2 ಸಾವಿರ ಕೋಟಿ ಹಣ ದುರುಪಯೋಗ, ಮಾರಿಷಸ್‌ನಲ್ಲಿ ₹10,000 ಕೋಟಿ ಇಟ್ಟಿರೋ ಹಗರಣ, ಭೋವಿ ನಿಗಮದ ಹಗರಣ, ತಾಂಡಾ ನಿಗಮದ ಹಗರಣ, ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಹಗರಣ, ಇಂತಹ 20 ಹಗರಣಗಳ ಕುರಿತು ಬಿಜೆಪಿಯವರು ಪಾದಯಾತ್ರೆ ಮಾಡಲಿ ಎಂದು ಸವಾಲು ಹಾಕಿದರು. 

ಬಿಜೆಪಿಯವರು ‘ಮೈಸೂರು ಚಲೋ’ ಪಾದಯಾತ್ರೆಯಲ್ಲಿ ಸುಳ್ಳು ಪ್ರಚಾರ ಮಾಡಿದರು. ಹೀಗಾಗಿ, ಜನಾಂದೋಲನ ಮೂಲಕ ಅದಕ್ಕೆ ತಕ್ಕ ಉತ್ತರ ನೀಡಿದ್ದೇವೆ. ಐತಿಹಾಸಿಕ ಜನಾಂದೋಲನ‌ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗಿದ್ದರು ಎಂದರು.

PREV

Recommended Stories

ಶರಣರ ವಚನಗಳಲ್ಲಿ ಸಾಮಾಜಿಕ ಚಿಂತನೆ ಅಡಗಿದೆ
ಮಕ್ಕಳ ದೌರ್ಜನ್ಯ ಪ್ರಕರಣ ಕಂಡುಬಂದರೆ ಎಫ್‌ಐಆರ್ ದಾಖಲಿಸಿ: ನ್ಯಾ. ರಾಜೇಶ್ ಎನ್.ಹೊಸಮನಿ