ಅಣ್ಣೂರು ಸತೀಶ್
ನೂರಕ್ಕೂ ಹೆಚ್ಚು ಸುತ್ತಮುತ್ತಲ ಗ್ರಾಮಗಳ ಜನರ ಆರೋಗ್ಯ ಕಾಪಾಡಲು ಇರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆಗೆ ವೈದ್ಯರ ಕೊರತೆ ಎದುರಾಗಿದೆ. ಮಾಹಿತಿ ಫಲಕವಿದ್ದರೂ ಸೌಲಭ್ಯವಿಲ್ಲದೆ ರೋಗಿಗಳು ಪರದಾಡುವಂತಾಗಿದೆ.
ಆರೋಗ್ಯ ಕೇಂದ್ರದಲ್ಲಿ ನೌಕರರಿದ್ದರೂ ಆವರಣದಲ್ಲಿ ಅಶುಚಿತ್ವವಿದೆ. ಹಳ್ಳಿಯ ಜನರು ಜ್ವರ, ಅಪಘಾತ ಹಾಗೂ ಇನ್ನಿತರ ಘಟನೆಗಳು ನಡೆದಾಗ ಕೂಡಲೇ ಆಸ್ಪತ್ರೆಗೆ ಬರುವುದು ಸಾಮಾನ್ಯ. ಆದರೆ, ಆಸ್ಪತ್ರೆಯಲ್ಲಿ ತಲೆ, ಮೈಕೈನೋವು, ಕೆಮ್ಮು, ನೆಗಡಿ ಸಣ್ಣಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದ್ದಾದರೂ ತುರ್ತು ಚಿಕಿತ್ಸೆಯ ಸೌಲಭ್ಯಗಳಿಲ್ಲ.1970ರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಆರಂಭಗೊಂಡ ಈ ಆಸ್ಪತ್ರೆಯಲ್ಲಿ, 2005ರಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೇಗೇರಿಸಲಾಯಿತು. ಆದರೆ, ಆಸ್ಪತ್ರೆಯಲ್ಲಿ ರಾತ್ರಿ ಪಾಳ್ಯದಲ್ಲಿ ವೈದ್ಯರ ಕೊರತೆ ಕಾಣುತ್ತಿದೆ.
ಹಳ್ಳಿಗಳಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಆಸ್ಪತ್ರೆ ಸಿಬ್ಬಂದಿ ತೆರಳಿ ಶುಚಿತ್ವದ ಜನರಿಗೆ ಹೇಳುತ್ತಿದ್ದಾರೆ. ಆದರೆ, ಆಸ್ಪತ್ರೆ ಮುಂಭಾಗವೇ ಗುಂಡಿಬಿದ್ದು ನೀರು ನಿಂತಿದ್ದರೂ ವೈದ್ಯರು ಗುಂಡಿ ಮುಚ್ಚಿಸುವ ಗೋಚಿಗೆ ಹೋಗಿಲ್ಲ. ಡಿ.ಗ್ರೋಪ್ ನೌಕರರಲ್ಲಿ 12 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಸರಿಯಾದ ಶುಚಿತ್ವವಿಲ್ಲ. ಫಾರ್ಮಸಿ ವಿಭಾಗದಲ್ಲೂ 4 ಮಂದಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದಾರೆ. ಎಲ್ಲಾ ವಿಭಾಗದಲ್ಲೂ ಸಿಬ್ಬಂದಿ ಕೊರತೆ ಎದುರಾಗಿ ರೋಗಿಗಳು ಚಿಕಿತ್ಸೆಗೆ ಪರದಾಡುವಂತಾಗಿದೆ.
ಹಗಲು ಮತ್ತು ರಾತ್ರಿ ಪಾಳ್ಯದಲ್ಲಿ ತಜ್ಞ ವೈದ್ಯರು (ಸರ್ಜನ್) ಇಲ್ಲದ ಕಾರಣ ಅಪಘಾತ, ಘರ್ಷಣೆಯಲ್ಲಿ ಗಾಯಗೊಂಡವರು ಹಾಗೂ ವಿಷ ಸೇವಿಸಿದ ರೋಗಿಗಳು ಆಸ್ಪತ್ರೆಗೆ ಕರೆದುಕೊಂಡು ಬಂದರೆ ಸಮರ್ಪಕ ತುರ್ತು ಚಿಕಿತ್ಸೆ ಸಿಗುತ್ತಿಲ್ಲ. ಸರ್ಕಾರ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ವರ್ಷಕ್ಕೆ ಲಕ್ಷಾಂತರ ರು. ನೀಡುತ್ತಿದ್ದು, ಈ ಹಣದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ. ಇದರಿಂದ ಸಮುದಾಯ ಆರೋಗ್ಯಕೇಂದ್ರ ಪ್ರಸ್ತುತ ರೋಗಗ್ರಸ್ಥವಾಗಿದೆ.
- ಡಾ.ಮೋಹನ್, ಡಿಎಚ್‌ಒ ಮಂಡ್ಯಆಸ್ಪತ್ರೆಯಲ್ಲಿ ಶುಚಿತ್ವದ ಬಗ್ಗೆ ಒಂದುವಾರ ಗಡುವು ಕೊಡಲಾಗಿತ್ತು. ಸ್ವಚ್ಛತೆ ಕಾಪಾಡದ ಹಿನ್ನೆಲೆಯಲ್ಲಿ ಸಂಬಂಧಿಸಿದವರ ಮೇಲೆ ಸೂಕ್ತ ಕ್ರಮಕೈಗೊಳ್ಳುತ್ತೇವೆ.