ಬೆಂಗಳೂರು : 5,225 ಟೀ ಶಾಪ್‌, ಬಾರ್‌, ಪಿಜಿ ಲಾಡ್ಜ್‌ಗಳ ಮೇಲೆ ಸಿಸಿಬಿ ದಾಳಿ

KannadaprabhaNewsNetwork |  
Published : May 14, 2024, 02:00 AM ISTUpdated : May 14, 2024, 08:45 AM IST
ಸಾಂದರ್ಭಿಕ | Kannada Prabha

ಸಾರಾಂಶ

ಕಾನೂನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ 3,667 ಪ್ರಕರಣಗಳನ್ನು ದಾಖಲು ಮಾಡಲಾಗಿದೆ.

 ಬೆಂಗಳೂರು :  ಕಾನೂನು ಉಲ್ಲಂಘನೆ ಆರೋಪ ಹಿನ್ನಲೆಯಲ್ಲಿ ನಗರ ವ್ಯಾಪ್ತಿ ಮದ್ಯದಂಗಡಿಗಳು, ಪಿಜಿಗಳು, ಬಾರ್‌ ಅಂಡ್ ರೆಸ್ಟೋರೆಂಟ್‌, ಲಾಡ್ಜ್‌ಗಳು ಸೇರಿದಂತೆ ಇತರೆ ಸ್ಥಳಗಳ ಮೇಲೆ ಸಿಸಿಬಿ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದೆ.

ನಿಯಮ ಮೀರಿ ಅಕ್ರಮ ವಹಿವಾಟು ನಡೆಸಿದ ಆರೋಪದ ಮೇರೆಗೆ ನಗರ ಸರಹದ್ದಿನ 535 ಮದ್ಯದಂಗಡಿಗಳು, 838 ಬಾರ್ ಅಂಡ್ ರೆಸ್ಟೋರೆಂಟ್‌, 1823 ಟೀ ಸ್ಟಾಲ್‌ ಮತ್ತು ಬೇಕರಿ, 707 ಲಾಡ್ಜ್‌ಗಳು, 931 ಪಿಜಿಗಳು ಹಾಗೂ ಇತರೆ 526 ಸ್ಥಳಗಳು ಸೇರಿದಂತೆ 5,225 ವಾಣಿಜ್ಯ ಸ್ಥಳಗಳನ್ನು ಪರಿಶೀಲಿಸಲಾಯಿತು. ಈ ವೇಳೆ ಕಾನೂನು ಉಲ್ಲಂಘಿಸಿದ ಆರೋಪದಡಿ 3,667 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಿಸಿಬಿ ಹೇಳಿದೆ.

ಇದರಲ್ಲಿ ಅಪ್ರಾಪ್ತ ಮಕ್ಕಳಿಗೆ ತಂಬಾಕು ಉತ್ಪನ್ನಗಳ (ಸಿಗರೇಟು ಮತ್ತು ಗುಟ್ಕಾ) ಮಾರಾಟ ಹಾಗೂ ನಿಯಮ ಮೀರಿ ವಹಿವಾಟು ಸೇರಿದಂತೆ ಇತರೆ ಆರೋಪಗಳು ಸೇರಿವೆ. ಇನ್ನು ತಮ್ಮನಲ್ಲಿ ನೆಲೆಸಿರುವವರ ಪೂರ್ವಾಪರ ಮಾಹಿತಿ ಸಂಗ್ರಹಿಸದೆ ಪಿಜಿಗಳ ಮಾಲೀಕರು ನಿರ್ಲಕ್ಷ್ಯತನ ತೋರಿದ್ದಾರೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ನಿಯಮ ಮೀರಿ ಅಕ್ರಮ ವಹಿವಾಟು ನಡೆಸಿದ ಆರೋಪ ಕೇಳಿ ಬಂದ ಹಿನ್ನೆಲೆ ಪೊಲೀಸರು ದಿಢೀರ್‌ ದಾಳಿ ನಡೆಸಿ 535 ಮದ್ಯದಂಗಡಿ, 838 ಬಾರ್ ಅಂಡ್ ರೆಸ್ಟೋರೆಂಟ್‌, 1823 ಟೀ ಸ್ಟಾಲ್‌-ಬೇಕರಿ, 707 ಲಾಡ್ಜ್‌, 931 ಪಿಜಿ ಹಾಗೂ 526 ಇತರೆ ಸ್ಥಳಗಳ ಮೇಲೆ ರೇಡ್‌ ಮಾಡಿ ಕಾನೂನು ಉಲ್ಲಂಘಿಸಿದ ಆರೋಪದಡಿ 3,667 ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದಾರೆ. ಅಪ್ರಾಪ್ತ ಮಕ್ಕಳಿಗೆ ತಂಬಾಕು ಉತ್ಪನ್ನಗಳ ಮಾರಾಟ ಸೇರಿ ವಿವಿಧ ಆರೋಪ ಕೇಳಿಬಂದಿದ್ದು, ಪೂರ್ವಾಪರ ಮಾಹಿತಿ ಸಂಗ್ರಹಿಸದೆ ಪಿಜಿಗಳ ಮಾಲೀಕರ ನಿರ್ಲಕ್ಷ್ಯತನಕ್ಕೂ ಬಿಸಿ ಮುಟ್ಟಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ