ಮಾಹಿತಿ ಕದಿವ ‘ಪಿಂಕ್‌ ವಾಟ್ಸಾಪ್‌’ ಬಗ್ಗೆ ಎಚ್ಚರ

KannadaprabhaNewsNetwork |  
Published : Jan 25, 2024, 02:07 AM IST
Fake 1 | Kannada Prabha

ಸಾರಾಂಶ

ಗುಲಾಬಿ ಬಣ್ಣದ ವಾಟ್ಸಾಪ್‌ ಲಿಂಕ್‌ ಕಳುಹಿಸಿ ಮಾಹಿತಿ ಕದಿಯಲು ಸೈಬರ್‌ ವಂಚಕರು ಯತ್ನಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ವಂಚಿಸಲು ಸೈಬರ್ ಕ್ರಿಮಿನಲ್‌ಗಳು ಹೊಸ ಅಸ್ತ್ರ ಪ್ರಯೋಗಿಸಿದ್ದು, ಈಗ ಗುಲಾಬಿ ಬಣ್ಣದ ವಾಟ್ಸ್ ಆಪ್‌ ಲಿಂಕ್ ಕಳುಹಿಸಿ ಖಾಸಗಿ ಮಾಹಿತಿ ಕದಿಯಲು ಯತ್ನಿಸಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.‘ಗುಲಾಬಿ ಬಣ್ಣದ ವಾಟ್ಸ್‌ ಆಪ್ ಅಪಾಯಕಾರಿ ಎಚ್ಚರಿಕೆಯಿಂದಿರಿ. ಆಕರ್ಷಣೆಯ ಗುಲಾಬಿ ಬಣ್ಣದ ವಾಟ್ಸ್ ಆಪ್‌ ಬಳಸುವವರನ್ನು ಗುರಿಯಾಗಿಸಿ ಮೋಸಗಾರರು ಡೇಟಾ ಕದಿಯಲು ಇಲ್ಲವೆ ಆ್ಯಂಡ್ರಾಯ್ಡ್‌ ಮೊಬೈಲ್ ಹ್ಯಾಕ್ ಮಾಡಲು ಬಳಸಿಕೊಳ್ಳುತ್ತಾರೆ. ಜಾಗೃತೆಯಿಂದಿರಿ’ ಎಂದು ಎಕ್ಸ್‌ನಲ್ಲಿ ರಾಜ್ಯ ಪೊಲೀಸರು ಮನವಿ ಮಾಡಿದ್ದಾರೆ.ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ರಾಜ್ಯ ಪೊಲೀಸರು ಮನವಿ ಮಾಡಿದ್ದು, ಈ ಸಂಬಂಧ ‘ಎಕ್ಸ್‌’ ಹಾಗೂ ‘ಫೇಸ್‌ ಬುಕ್‌’ ತಾಣಗಳಲ್ಲಿ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿ ಜನರಿಗೆ ಪೊಲೀಸರು ವಿನಂತಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೂಪಾ ಮೌದ್ಗಿಲ್‌ ಮಾನಹಾನಿ ಕೇಸ್‌: ರೋಹಿಣಿ ಅರ್ಜಿ ವಜಾ
ವಿರೋಧದ ನಡುವೆ ಮದುವೆ : ಸಿಟ್ಟಲ್ಲಿ ಅಳಿಯನ ಮನೆಗೆ ಮಾವನಿಂದ ಬೆಂಕಿ!