ಬನ್ನಡ್ಕ: ಅಕ್ಟೋಬರ್ 1, 2ರಂದು ಶಾರದೋತ್ಸವ ಕಾರ್ಯಕ್ರಮ

KannadaprabhaNewsNetwork |  
Published : Sep 30, 2025, 12:02 AM IST
ಬನ್ನಡ್ಕದಲ್ಲಿ ಶಾರದೋತ್ಸವ- ಅಕ್ಟೋಬರ್ 1,2ರಂದು ಕಾರ್ಯಕ್ರಮ | Kannada Prabha

ಸಾರಾಂಶ

ಶ್ರೀಕ್ಷೇತ್ರ ಬನ್ನಡ್ಕದ ಕಲಾಮಂದಿರದಲ್ಲಿ ಅ.1 ಹಾಗೂ 2ರಂದು 4ನೇ ವರ್ಷದ ಶಾರದೋತ್ಸವ ನಡೆಯಲಿದೆ

ಮೂಡುಬಿದಿರೆ: ಸಾರ್ವಜನಿಕ ಶ್ರೀ ಶಾರದೋತ್ಸವ ಟ್ರಸ್ಟ್ ಬನ್ನಡ್ಕ ಆಶ್ರಯದಲ್ಲಿ ಶ್ರೀಕ್ಷೇತ್ರ ಬನ್ನಡ್ಕದ ಕಲಾಮಂದಿರದಲ್ಲಿ ಅ.1 ಹಾಗೂ 2ರಂದು 4ನೇ ವರ್ಷದ ಶಾರದೋತ್ಸವ ನಡೆಯಲಿದೆ ಎಂದು ಅಧ್ಯಕ್ಷ ಎಂ.ದಯಾನಂದ ಪೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಂ.ಆರ್. ಅನಂತ ಪದ್ಮನಾಭ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಅ.1ರಂದು ಗಣಹೋಮ, ಮೂಡುಬಿದಿರೆ ಕನ್ನಡ ಭವನದಿಂದ ನಗರ ಮಾರ್ಗವಾಗಿ ಶ್ರೀಕ್ಷೇತ್ರ ಬನ್ನಡ್ಕಕ್ಕೆ ಮೆರವಣಿಗೆ ಮೂಲಕ ಶ್ರೀಶಾರದಾ ಮಾತೆಯನ್ನು ಬರಮಾಡಿಕೊಳ್ಳಲಾಗುವುದು, ಬೆಳಗ್ಗೆ 9.30ಕ್ಕೆ ಶಾರದಾಂಬೆಯ ಪ್ರತಿಷ್ಠಾಪನೆ, ಧ್ವಜಾರೋಹಣ, ಧಾರ್ಮಿಕ ಸಭೆ, ಭಜನಾ ಸಂಗೀರ್ತನೆ, ದುರ್ಗಾ ಹೋಮ, ಮಹಾಪೂಜೆ, ಮುದ್ದುಶಾರದೆ ಸ್ಪರ್ಧೆ, ಮೆಹಂದಿ ಸ್ಪರ್ಧೆ ನಡೆಯಲಿದೆ.ಬೆಳಗ್ಗೆ 9.30ಕ್ಕೆ ಉದ್ಯಮಿ ರಾಜೇಂದ್ರ ಜೈನ್ ಪ್ರತಿಷ್ಠಾಪನೆ ಮಾಡಲಿದ್ದಾರೆ. ಎಸ್‌ಕೆಎಫ್ ಎಲಿಕ್ಸರ್ ಆಡಳಿತ ನಿರ್ದೇಶಕ ರಾಮಕೃಷ್ಣ ಆಚಾರ್ಯ ಧ್ವಜಾರೋಹಣ ನೆರವೇರಿಸಲಿದ್ದಾರೆ. ಶಾರದೋತ್ಸವ ಸಮಿತಿ ಅಧ್ಯಕ್ಷ ದಯಾನಂದ ಪೈ, ಬನ್ನಡ್ಕ ಕ್ಷೇತ್ರದ ಆಡಳಿತ ಮೊಕ್ತೇಸರ ಸುಕುಮಾರ್ ಬಲ್ಲಾಳ್, ಆಡಳಿತ ಮೊಕ್ತೇಸರ ರಾಜೇಶ್ ಬಲ್ಲಾಳ್, ಚೌಟರ ಅರಮನೆಯ ಕುಲದೀಪ ಎಂ., ಸಂಸದ ಕ್ಯಾ.ಬ್ರಿಜೇಶ್ ಚೌಟ, ಉದ್ಯಮಿ ಸುದರ್ಶನ್ ಎಂ. ಸಹಿತ ಗಣ್ಯರು ಉಪಸ್ಥಿತರಿರುವರು.ರಾತ್ರಿ 8 ಗಂಟೆಯಿಂದ ಕಾಪು ರಂಗತರಂಗ ಕಲಾವಿದರಿಂದ ಕುಟ್ಯಣ್ಣನ ಕುಟುಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಅ.2ರಂದು ಬೆಳಗ್ಗೆ 8.30ರಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. 11 ಗಂಟೆಗೆ ಧಾರ್ಮಿಕ ಸಭೆ, ಬಹುಮಾನ ವಿತರಣೆ ನಡೆಯಲಿದೆ. ಟ್ರಸ್ಟ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಶ್ರೀಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮ ಶ್ರೀ ಈಶ ವಿಢಲದಾಸ ಸ್ವಾಮೀಜಿ ಆಶೀವರ್ಚನ ನೀಡಲಿರುವರು. ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವರಿಗೆ ‘ಬನ್ನಡ್ಕ ಶ್ರೀ ಶಾರದಾರತ್ನ ಪ್ರಶಸ್ತಿ-2025’ ಪ್ರದಾನ ಮಾಡಲಾಗುವುದು. ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಎಸ್‌ಸಿಡಿಸಿಸಿ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಸಹಿತ ಗಣ್ಯರು ಉಪಸ್ಥಿತರಿರುವರು.ಸಂಜೆ 5 ಗಂಟೆಗೆ ಮಹಾಪೂಜೆ, ವಿಸರ್ಜನಾ ಪೂಜೆ ನಡೆಯಲಿದ್ದು, 6 ಗಂಟೆಗೆ ವೈಭವದ ಶೋಭಾಯಾತ್ರೆ ನಡೆಯಲಿದೆ. ಶ್ರೀ ದೇವಿಯ ವಿಗ್ರಹವನ್ನು ಶ್ರೀಕ್ಷೇತ್ರ ಬನ್ನಡ್ಕದಿಂದ ಹೊರಟು ಅಲಂಗಾರು ಶ್ರೀ ಬಡಗು ಮಹಾಗಣಪತಿ ಮಾಹಲಿಂಗೇಶ್ವರ ದೇವರ ಮಾನಸ ಗಂಗೋತ್ರಿ ಸರೋವರದಲ್ಲಿ ಜಲಸ್ತಂಭನಗೊಳಿಸಲಾಗುವುದು ಎಂದು ದಯಾನಂದ ಪೈ ತಿಳಿಸಿದರು.ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಸೂರಜ್ ಜೈನ್ ಮಾರ್ನಾಡು, ಕಾರ್ಯದರ್ಶಿ ಸುಧಾಕರ್ ಆಚಾರ್ಯ, ಜೊತೆ ಕಾರ್ಯದರ್ಶಿ ಅಕ್ಷಯ್ ಕುಮಾರ್ ಬನ್ನಡ್ಕ ಸುದ್ದಿಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಲ್ಪೆ ಬಂದರಿನಲ್ಲಿ ಕಾರ್ಮಿಕರಿಗೆ ದೌರ್ಜನ್ಯ: ಪ್ರತಿಭಟನೆ
ಸವಣೂರು ಕ್ಷೇತ್ರದ ಅಭಿವೃದ್ಧಿಯೇ ಪ್ರಮುಖ ಗುರಿ: ಯಾಸೀರ ಅಹ್ಮದ ಖಾನ ಪಠಾಣ