ಕನ್ನಡಪ್ರಭ ವಾರ್ತೆ ಗಜೇಂದ್ರಗಡ
ಈ ವೇಳೆ ಕಟ್ಟಿಬಸವೇಶ್ವರ ಯುವಕ ಮಂಡಳಿ ಅಧ್ಯಕ್ಷ ಪ್ರಭು ಚವಡಿ ಮಾತನಾಡಿ, ದಸರಾ ವಿಜಯದ ಸಂಕೇತವಾಗಿದ್ದು, ಬನ್ನಿ ವಿನಿಮಯವು ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಸ್ನೇಹವನ್ನು ವೃದ್ಧಿಸುವ ಸಂಪ್ರದಾಯವಾಗಿದೆ. ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರೂ ಒಂದಾಗಿ ಹಬ್ಬಗಳನ್ನು ಆಚರಿಸುವುದರಿಂದ ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹೋದರತ್ವ ಬಲಗೊಳ್ಳುತ್ತದೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಶಾಂತಿ, ಸಾಮರಸ್ಯ ಹಾಗೂ ಭಾವೈಕ್ಯತೆಯನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದರು.
ಟಕ್ಕೇದ ದರ್ಗಾದ ಹಜರತ್ ನಿಜಾಮುದ್ದೀನ್ ಅಶ್ರಫಿ ಅವರ ಉಪಸ್ಥಿತಿಯಲ್ಲಿ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ದಸರಾ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು.ಈ ಸಂದರ್ಭ ಶಿವಪುತ್ರಯ್ಯ ಸರಗಣಾಚಾರಿ, ಮಾಸುಮಲಿ ಮದಗಾರ, ಪರಸಪ್ಪ ಹೊಸಮನಿ, ಶಿವಕುಮಾರ ಶಶಿಮಠ, ರವಿ ವಡಗೇರಿ, ಸಂಗಪ್ಪ ವಡಗೇರಿ, ಅಂಬರೀಶ ಚವಡಿ, ಬಸು ಎಸ್. ಸೇರಿದಂತೆ ಇತರರು ಇದ್ದರು.