ಸಹಕಾರ ಶಿರೋಮಣಿ ಪ್ರಭಾಕರ ಪ್ರಭುಗೆ ಕುಕ್ಕಿಪಾಡಿ ಗ್ರಾ.ಪಂ. ಅಭಿನಂದನೆ

KannadaprabhaNewsNetwork |  
Published : Feb 11, 2026, 03:00 AM IST
 ಅಭಿನಂದನೆ | Kannada Prabha

ಸಾರಾಂಶ

ಸಹಕಾರ ಕ್ಷೇತ್ರದಲ್ಲಿ ಸಾಧಿಸಿದ ಸಾರ್ಥಕ ಸಾಧನೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿದ ಜನಪರ ಸಮಾಜ ಸೇವೆ ಗುರುತಿಸಿ ಪ್ರತಿಷ್ಠಿತ ದಿನ ಪತ್ರಿಕೆ "ಕನ್ನಡಪ್ರಭ ಹಾಗೂ ಏಷಿಯಾನೆಟ್ ಸುವರ್ಣ ನ್ಯೂಸ್ ನಿಂದ ಕೊಡಮಾಡುವ ರಾಜ್ಯ ಮಟ್ಟದ "ಕರ್ನಾಟಕ ಸಹಕಾರ ಶಿರೋಮಣಿ

ಬಂಟ್ವಾಳ: ಸಹಕಾರ ಕ್ಷೇತ್ರದಲ್ಲಿ ಸಾಧಿಸಿದ ಸಾರ್ಥಕ ಸಾಧನೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿದ ಜನಪರ ಸಮಾಜ ಸೇವೆ ಗುರುತಿಸಿ ಪ್ರತಿಷ್ಠಿತ ದಿನ ಪತ್ರಿಕೆ "ಕನ್ನಡಪ್ರಭ ಹಾಗೂ ಏಷಿಯಾನೆಟ್ ಸುವರ್ಣ ನ್ಯೂಸ್ ನಿಂದ ಕೊಡಮಾಡುವ ರಾಜ್ಯ ಮಟ್ಟದ "ಕರ್ನಾಟಕ ಸಹಕಾರ ಶಿರೋಮಣಿ 2025 " ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾಗಿ ಪ್ರಶಸ್ತಿ ಪಡೆದಿರುವ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಪ್ರಭಾಕರ ಪ್ರಭು ಅವರನ್ನು ಕುಕ್ಕಿಪಾಡಿ ಗ್ರಾ.ಪಂ. ವತಿಯಿಂದ ಅಭಿನಂದಿಸಲಾಯಿತು.ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷರಾದ ಶೇಖರ್ ಶೆಟ್ಟಿ, ಉಪಾಧ್ಯಕ್ಷೆ ಬೇಬಿ ಪೂಜಾರಿ ದೇವಸ, ಸದಸ್ಯರಾದ ಲಿಂಗಪ್ಪ ಪೂಜಾರಿ, ಯೋಗೀಶ್ ಆಚಾರ್ಯ, ದಿನೇಶ್ ಸುಂದರ ಶಾಂತಿ, ಚಂದ್ರ ಪೂಜಾರಿ, ಸುಜಾತಾ ಪೂಜಾರಿ, ಪ್ರತಿಭಾ ಶೆಟ್ಟಿ, ಶೋಭಾ ಕುಲಾಲ್, ಪುಷ್ಪ, ಗೀತಾ ನಾಯ್ಕ್, ಪೂರ್ಣಿಮಾ ರವಿರಾಜ್, ಕಾರ್ಯದರ್ಶಿ ಪ್ರೇಮಾ ನಾಯ್ಕ್, ಸಿ. ಎ. ಬ್ಯಾಂಕ್ ನಿರ್ದೇಶಕ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮಾ ನಾಯ್ಕ್ ಸ್ವಾಗತಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಯಾಳುವಿಗೆ ಕೆಜಿ ಭೋಪಯ್ಯ ಸಾಂತ್ವನ
ನೀರಿನ‌ ಮಿತ ಬಳಕೆ ಎಲ್ಲರ ಜವಾಬ್ದಾರಿ: ರಾಜೇಶ್ ನಾಯ್ಕ್