ಬಂಟ್ವಾಳ: ಕೆಸರ್ ಡ್ ಒಂಜಿ‌ದಿನ ಕಾರ್ಯಕ್ರಮ

KannadaprabhaNewsNetwork |  
Published : Aug 18, 2025, 12:01 AM IST
ವಕೀಲರ ಸಂಘ (ರಿ), ಬಂಟ್ವಾಳ ಇದರ ವತಿಯಿಂದ ' ಕೆಸರ್ ಡ್ ಒಂಜಿ ದಿನ'... | Kannada Prabha

ಸಾರಾಂಶ

: ಬಂಟ್ವಾಳ‌ ವಕೀಲರ ಸಂಘದ ಆಶ್ರಯದಲ್ಲಿ 6 ನೇ ವರ್ಷದ ಕೆಸರ್ ಡ್ ಒಂಜಿ‌ದಿನ ಕಾರ್ಯಕ್ರಮ ಆ.16 ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದ ಆವರಣದ ಗದ್ದೆಯಲ್ಲಿ ನಡೆಯಿತು.

ಬಂಟ್ವಾಳ : ಬಂಟ್ವಾಳ‌ ವಕೀಲರ ಸಂಘದ ಆಶ್ರಯದಲ್ಲಿ 6 ನೇ ವರ್ಷದ ಕೆಸರ್ ಡ್ ಒಂಜಿ‌ದಿನ ಕಾರ್ಯಕ್ರಮ ಆ.16 ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದ ಆವರಣದ ಗದ್ದೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘ ಬಂಟ್ವಾಳದ ಅಧ್ಯಕ್ಷರಾದ ರಿಚರ್ಡ್ ಕೋಸ್ತ ಎಂ. ವಹಿಸಿದ್ದರು. ಈ ಸಂದರ್ಭಮಾತನಾಡಿದ ಅವರು, ಹಿರಿಯರ ಕಷ್ಟಕರವಾಗಿದ್ದ ಬದುಕಿನ ಬಗ್ಗೆ, ನಮ್ಮ ಅರಿವಿದೆ. ಆಟಿ ತಿಂಗಳು ಮಾತ್ರವಲ್ಲದೆ ವರ್ಷಪೂರ್ತಿ ಪ್ರಕೃತಿಗೆ ಪೂರಕವಾದ ತಿಂಡಿ ತಿನಿಸುಗಳನ್ನು ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳುವಂತೆ ಕರೆ ನೀಡಿದರು. ಮುಖ್ಯ ಅತಿಥಿ ಬಂಟ್ವಾಳ ಪ್ರಧಾನ ಸಿವಿಲ್‌ ಮತ್ತು ಜೆಎಂಎಫ್ ಸಿ ನ್ಯಾಯಾಧೀಶರಾದ ಕೃಷ್ಣಮೂರ್ತಿಯವರು ಮಾತನಾಡಿ, ಯುವಜನಾಂಗ ಇತಿಹಾಸವನ್ನು ಮರೆಯಬಾರದು, ಸಂಸ್ಕೃತಿಯನ್ನು ಕಾಪಾಡುವ ಹೊಣೆಗಾರಿಕೆ ಯುವಪೀಳಿಗೆಯದ್ದು ಎಂದ ಅವರು, ತುಳುನಾಡಿನ ಪ್ರತಿಯೊಂದು ತಿಂಡಿತಿನಸುಗಳಿಗೂ ವೈದ್ಯಕೀಯ ಸಂಬಂಧವಿದೆ ಎಂಬುದನ್ನು ನಾನು ದ.ಕ.ಜಿಲ್ಲೆಗೆ ಬಂದ ಬಳಿಕ ಚೆನ್ನಾಗಿ ತಿಳಿದುಕೊಂಡಿದ್ದೇನೆ ಎಂದು ಅವರು ಹೇಳಿದರು.ಬಂಟ್ವಾಳದ ಹೆಚ್ಚುವರಿ ಸಿವಿಲ್ ಮತ್ತು ಜೆ. ಎಮ್. ಎಫ್. ಸಿ ನ್ಯಾಯಾಧೀಶರಾದ ರಾಜೇಂದ್ರ ಪ್ರಸಾದ್ ಕೆ.ಎಸ್ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಶಿಕ್ಷಿ, ಬರಹಗಾರ್ತಿ ರೇಣಿಕಾ‌ಕಾಣಿಯೂರು ಅವರು ಆಟಿಯ ವಿಶೇಷತೆ ಕುರಿ ಮಾತನಾಡಿ, ವಕೀಲರ‌ ಈ‌ ಕೂಟವು ತುಳು ನಾಡಿನ ಮರೆಯಾಗುತ್ತಿರುವ ಕಲೆ, ಸಂಸ್ಕೃತಿಗೆ ಸ್ಪರ್ಶ ಕೊಟ್ಟಿದೆ. ತುಳುನಾಡಿನ ಪ್ರತಿಯೊಂದು ಆಚಾರ ವಿಚಾರಗಳನ್ನು ವೈಜ್ಞಾನಿಕ ನೆಲೆಯಲ್ಲಿ ನೋಡಿಕೊಂಡು ಹೋದಾಗ ಮುಂದಿನ ಕಾಲಕ್ಕೂ ಉಳಿಯಬಹುದು ಎಂಬ ನಂಬಿಕೆ ನನ್ನದು ಎಂದು ಹೇಳಿದರು. ತುಳುನಾಡಿನ ಸಂಸ್ಕೃತಿಯ ಬಗ್ಗೆ ಮೂಡನಂಬಿಕೆ ಎಂಬ ತಾತ್ಸರ ಬೇಡ ಮೂಲನಂಬಿಕೆ ಎಂಬ ವಿಶ್ವಾಸದ ಪ್ರತೀಕವಾಗಲಿ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಚಾರ್ಟರ್ಡ್‌ ಅಕೌಂಟಿಂಟ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನ ದಲ್ಲೇ ತೇರ್ಗಡೆಯಾದ ವಿದ್ಯಾರ್ಥಿನಿ ವಕೀಲರಾದ ಸದಾಶಿವ ನಾಯಕ್ ರವರ ಮಗಳು ವಿಘ್ನೇಶ್ವರಿ ನಾಯಕ್ ಅವರನ್ನು ಗೌರವಿಸಲಾಯಿತು.ಕೆಸರಡೊಂಜಿ ದಿನ ಕಾರ್ಯಕ್ರಮದಲ್ಲಿ ಬೆಲ್ಲ ನೀರು, ಪಾನಕ, ಕಲಸೆ ಭತ್ತ ಸೇರು, ಕಂಬಳದ ಕೋಣ ಹಾಗೂ ಅಂಕದ ಕೋಳಿಗಳು ವಿಶೇಷ ಮೆರಗು ನೀಡಿತು. ಆಟಿ ತಿಂಗಳ ತುಳುನಾಡಿನ ವಿವಿಧ ಬಗೆಯ ತಿಂಡಿ ತಿನಸುಗಳು ಖಾಧ್ಯಗಳು ಊಟದ ಜೊತೆ ನೀಡಲಾಗಿತ್ತು.ಸಭಾ ಕಾರ್ಯಕ್ರಮದ ಬಳಿತ ವಕೀಲ ಮಿತ್ರರಿಗೆ ಕೆಸರಿನ ಗದ್ದೆಯಲ್ಲಿ ವಿವಿಧ ಕ್ರೀಡಾಕೂಟಗಳು ನಡೆಯಿತು.ಸಂಘದ ಕಾರ್ಯದರ್ಶಿ ನರೇಂದ್ರನಾಥ್ ಭಂಡಾರಿ ಸ್ವಾಗತಿಸಿ, ಸುಂದರ ಬಾಚಕೆರೆ ವಂದಿಸಿದರು. ವಕೀಲರಾದ ದೀಪಕ್ ಪೆರಾಜೆ ಹಾಗೂ ಅಭಿನಯ ಚಿದಾನಂದ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌