ಕನ್ನಡಪ್ರಭ ವಾರ್ತೆ ಮೈಸೂರು
ರೇಷ್ಮೆ ಐಸಿರಿ ಎಂಬ ಕಾರ್ಯಕ್ರಮವು ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯು ಮೈಸೂರು ಆಕಾಶವಾಣಿ, ಸಹಯೋಗದೊಂದಿಗೆ ಜನವರಿ 2024 ರಿಂದ ಜನವರಿ 2025 ರವರೆಗೆ ಪ್ರತಿ ಮಂಗಳವಾರ ಸಂಜೆ 6:50 ಕ್ಕೆ ಕೃಷಿ ರಂಗದಲ್ಲಿ ಎಫ್ಎಂ 100.6 ರಲ್ಲಿ ಪ್ರಸಾರವಾಗಲಿದೆ. ರೇಷ್ಮೆ ಕೃಷಿಗೆ ಸಂಬಂಧಿಸಿದ ತಂತ್ರಜ್ಞಾನಗಳ ಸರಣಿ ಬಾನುಲಿ ಕಾರ್ಯಕ್ರಮವಾಗಿದೆ.ಸಿಎಸ್ಆರ್ಟಿಐ ನಿರ್ದೇಶಕ ಡಾ. ಎಸ್. ಗಾಂಧಿ ದಾಸ್ ಮಾತನಾಡಿ, ಮಂಡಳಿಯ ಅಮೃತ ಮಹೋತ್ಸವ ಆಚರಣೆಯ ಕಾರ್ಯಕ್ರಮಗಳ ಅಡಿಯಲ್ಲಿ ಪ್ರತಿ ಮಂಗಳವಾರ ಒಂದೊಂದು ತಂತ್ರಜ್ಞಾನವನ್ನು ಸಂಸ್ಥೆಯ ವಿಜ್ಞಾನಿಗಳು ಆಕಾಶವಾಣಿ ಮೂಲಕ ಒಂದು ವರ್ಷದವರೆಗೆ ನಡೆಸಿಕೊಡುವರು ಇದಕ್ಕೆ ಸಮ್ಮತಿಸಿದಕ್ಕೆ ಆಕಾಶವಾಣಿ ಸಂಸ್ಥೆಗೆ ಧನ್ಯವಾದಗಳು ಎಂದರು. ತಿಳಿಸಿದರು.
ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಎನ್.ಕೇಶವಮೂರ್ತಿ ಮಾತನಾಡಿ, ಚನ್ನರಾಯಪಟ್ಟಣದಲ್ಲಿ ಒಬ್ಬ ರೈತ 50 ಡಿಎಫ್ಎಲ್ಗೆ 50 ಕೆಜಿ ಬಿತ್ತನೆ ಗೂಡು ಬೆಳೆದಿದ್ದಾರೆ ಎಂದರು.ಪ್ರತಿ ಮಂಗಳವಾರ ಸಂಜೆ 6:50 ಕ್ಕೆ ಆಕಾಶವಾಣಿಯ ಕೃಷಿ ರಂಗ ಕಾರ್ಯಕ್ರಮದಲ್ಲಿ ರೇಷ್ಮೆ ಕೃಷಿಗೆ ಸಂಬಂಧಿಸಿದ ತಂತ್ರಜ್ಞಾನಗಳನ್ನು ಪ್ರಸಾರ ಮಾಡಲಾಗುತ್ತದೆ ಇದನ್ನು ತಾವು ಕೇಳಿಸಿಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಲ್ಯಾಬ್ ನಿಂದ ರೈತರಿಗೆ ತಂತ್ರಜ್ಞಾನಗಳನ್ನು ತಲುಪಿಸುವ ಮಾಧ್ಯಮವಾಗಿ ಆಕಾಶವಾಣಿ ಸಂಸ್ಥೆಯು ಸದಾ ಸಿದ್ಧವಾಗಿದೆ ಎಂದರು.ಕೇಂದರ ರೇಷ್ಮೆ ಮಂಡಳಿ ಸದಸ್ಯ ಕಾರ್ಯದರ್ಶಿ ಪಿ.ಶಿವಕುಮಾರ್ ಮಾತನಾಡಿ. ರೇಷ್ಮೆ ಕೃಷಿಗೆ ಸಂಬಂಧಿಸಿದ ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸಲು ಆಕಾಶವಾಣಿ ಸಂಸ್ಥೆಯು ಮಹತ್ವದಾಗಿದೆ ಎಂದರು.
ಮಣಿಪುರ ಕೇಂದ್ರೀಯ ಕೃಷಿ ವಿವಿ ವಿಶ್ರಾಂತ ಕುಲಪತಿ ಪದ್ಮಶ್ರೀ ಡಾ.ಎಸ್. ಅಯ್ಯಪ್ಪನ್ ಮಾತನಾಡಿ, ರೇಷ್ಮೆ ಕೃಷಿಯಿಂದ ಅಧಿಕ ಗಳಿಕೆ ಇದೆ. ಅಂತಾರಾಷ್ಟ್ರ ಮಟ್ಟದಲ್ಲಿ ಕಚ್ಚಾ ರೇಷ್ಮೆ ಉತ್ಪಾದನೆಯಲ್ಲಿ ಕೇಂದ್ರ ರೇಷ್ಮೆ ಮಂಡಳಿ ಜಾಗತಿಕ ನಾಯಕನಾಗಲು ಮಾಧ್ಯಮದ ಅವಶ್ಯಕತೆಯಿದೆ ಎಂದರು.ಮೈಸೂರು ಆಕಾಶವಾಣಿ ಸಹಾಯಕ ನಿರ್ದೇಶಕ .ಎಸ್.ಎಸ್.ಉಮೇಶ್ ಮಾತನಾಡಿ, ಸಿಎಸ್ಆರ್ಟಿಐ ಮೈಸೂರಿನ ರೇಷ್ಮೆಐಸಿರಿ ಕಾರ್ಯಕ್ರಮವನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಗಣ್ಯರು ರೇಷ್ಮೆ ಐಸಿರಿ ಎಂಬ ಎಂಬ ರೇಷ್ಮೆ ಕೃಷಿ ತಂತ್ರಜ್ಞಾನಗಳ ಕುರಿತು ಬಾನುಲಿ ಸರಣಿ ಕಾರ್ಯಕ್ರಮದ ಮಾಹಿತಿ ಕೈಪಿಡಿ ಬಿಡುಗಡೆ ಮಾಡಿದರು. ಈ ಕೈಪಿಡಿಯು ಒಂದು ವರ್ಷ ಆಕಾಶವಾಣಿಯಲ್ಲಿ ಪ್ರಕಟಗೊಳ್ಳುವ ಎಲ್ಲಾ ತಂತ್ರಜ್ಞಾನಗಳನ್ನು ಒಳಗೊಂಡಿದೆ.ವಿಜ್ಞಾನಿ - ಡಿ, ಡಾ.ಆರ್. ಭಾಗ್ಯ ವಂದಿಸಿದರು. ವಿಜ್ಞಾನಿ- ಸಿ ಡಾ. ಎಂ.ಎಸ್, ರಂಜನಿ ಕಾರ್ಯಕ್ರಮ ನಿರೂಪಿಸಿದರು. ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ಡಾ.ಕೆ.ಬಿ,ಚಂದ್ರಶೇಖರ್, ಡಾ.ರಘುನಾಥ್, ಡಾ.ಎಸ್.ಬಾಲಸರಸ್ವತಿ, ಡಾ.ಮೀನಾಲ್, ಸುಮಾರು 250 ಕ್ಕೂ ಹೆಚ್ಚು ರೈತರು, ವಿಜ್ಞಾನಿಗಳು, ಅಧಿಕಾರಿಗಳು, ಯೋಜನೆಯ ಸಹಾಯಕರು, ಕಾರ್ಮಿಕರು ಭಾಗವಹಿಸಿದ್ದರು.