ಬಪ್ಪಳಿಕೆ ಅಂಬಿಕಾ ಕಾಲೇಜು ಶೇ. ೧೦೦, ನೆಲ್ಲಿಕಟ್ಟೆ ಸಂಸ್ಥೆ ಶೇ.99 ಫಲಿತಾಂಶ

KannadaprabhaNewsNetwork |  
Published : Apr 14, 2025, 01:18 AM IST
23 | Kannada Prabha

ಸಾರಾಂಶ

ನಗರದ ನಟ್ಟೋಜಾ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಂಸ್ಥೆಯ ಪದವಿ ಪೂರ್ವ ವಿದ್ಯಾಲಯ ಬಪ್ಪಳಿಗೆಯ (ವಸತಿಯುತ) ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. ೧೦೦ ಹಾಗೂ ನೆಲ್ಲಿಕಟ್ಟೆ ಕಾಲೇಜಿನ ವಿದ್ಯಾರ್ಥಿಗಳು ಶೇ. ೯೯.೧೨ ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ನಗರದ ನಟ್ಟೋಜಾ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಂಸ್ಥೆಯ ಪದವಿ ಪೂರ್ವ ವಿದ್ಯಾಲಯ ಬಪ್ಪಳಿಗೆಯ (ವಸತಿಯುತ) ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. ೧೦೦ ಹಾಗೂ ನೆಲ್ಲಿಕಟ್ಟೆ ಕಾಲೇಜಿನ

ವಿದ್ಯಾರ್ಥಿಗಳು ಶೇ. ೯೯.೧೨ ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದಾರೆ.

ವಿಜ್ಞಾನ ವಿಭಾಗದ ಅಜಿತ್ ಕುಮಾರ್ ಕೆ.ಎಸ್. ಮತ್ತು ಹಿಮಾನಿ ಎ.ಸಿ. ೫೯೪

ಅಂಕಗಳೊಂದಿಗೆ ತಾಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ ೬ನೇ ಸ್ಥಾನ ಪಡೆದಿದ್ದಾರೆ. ಅಂಬಿಕಾ ಪದವಿಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ವಿಜ್ಞಾನ ವಿಭಾಗದಲ್ಲಿ ೨೨೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ ೧೨೭ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, ೯೭ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಅಂಬಿಕಾ ಪದವಿಪೂರ್ವ ವಿದ್ಯಾಲಯ ಬಪ್ಪಳಿಗೆಯ ವಿಜ್ಞಾನ ವಿಭಾಗದಲ್ಲಿ ೧೭೭ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ೧೦೧ ವಿದ್ಯಾರ್ಥಿಗಳು ವಿಶಿಷ್ಟ

ಶ್ರೇಣಿಯಲ್ಲಿ ೭೫ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಓರ್ವ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಪುತ್ತೂರು ಚಿಕ್ಕಮುಡ್ನೂರಿನ ಶ್ರೀನಿವಾಸ ಬಡೆಕಿಲ್ಲಾಯ ಮತ್ತು ರೇಖಾ

ಕೆ.ವಿ. ದಂಪತಿ ಪುತ್ರ ಅಜಿತ್ ಕುಮಾರ್ ಕೆ.ಎಸ್. (೫೯೪), ಪುತ್ತೂರಿನ ಚಿದಾನಂದ ಪೂಜಾರಿ ಮತ್ತು ಶೋಭಾ ಎಂ. ದಂಪತಿಯ ಪುತ್ರಿ ಹಿಮಾನಿ ಎ.ಸಿ. (೫೯೪), ಪುತ್ತೂರು ಬಪ್ಪಳಿಗೆಯ ಬಿ.ಕೆ. ಸುರೇಶ್ ಮತ್ತು ಜಯಂತಿ ಎಸ್.

ದಂಪತಿಯ ಪುತ್ರಿ ಕೆ.ಎಸ್. ಮನೀಶಾ (೫೯೩), ಕಡಬ ಕಾಣಿಯೂರಿನ ಪದ್ಮನಾಭ ಜಿ. ಮತ್ತು ಹೇಮಾವತಿ ದಂಪತಿ ಪುತ್ರ ಉತ್ತಮ್ ಜಿ. (೫೯೩), ಕಡಬ ಕಾಣಿಯೂರಿನ ಪ್ರದೀಪ್ ಬಿ. ಮತ್ತು ವಿದ್ಯಾ ದಂಪತಿಯ ಪುತ್ರ ವಿಕಾಸ್ ಬಿ. (೫೮೯), ಕಡೇಶಿವಾಲಯದ ನರಸಿಂಹ ರಾವ್ ಮತ್ತು ಸಂಧ್ಯಾ ರಾವ್ ದಂಪತಿಯ ಪುತ್ರ ಆದಿತ್ಯ ಡಿ. ರಾವ್ (೫೮೯), ಕಡಬ ಸುಬ್ರಹ್ಮಣ್ಯದ ರಾಘವೇಂದ್ರ ಆಚಾರ್ ಮತ್ತು ಸುಧಾಮಣಿ ದಂಪತಿಯ ಪುತ್ರಿ ಅನ್ವಿತಾ ಕೆ. (೫೮೭), ಬಂಟ್ವಾಳ ಪೆರ್ನೆಯ ಚಂದ್ರಶೇಖರ್ ಎನ್. ಮತ್ತು ವನಿತಾ ದಂಪತಿಯ ಪುತ್ರ ವಿಷ್ಣುಪ್ರಸಾದ್ (೫೮೭), ಸುಳ್ಯ ಐವರ್ನಾಡಿನ ವಿಶ್ವನಾಥ ಎಸ್. ಮತ್ತು ಗೀತಾ ಕೆ. ದಂಪತಿಯ ಪುತ್ರಿ ದ್ವಿತಿ ಎಸ್. (೫೮೫), ಸುಳ್ಯ ಕನಕಮಜಲಿನ ಜಿ. ಮುರಲಿಕೃಷ್ಣ ಭಟ್ ಮತ್ತು ಶ್ವೇತಾ ಎಂ. ಭಟ್ ದಂಪತಿ ಪುತ್ರಿ ವೈಷ್ಣವಿ ಜಿ. ಭಟ್ (೫೮೫), ಪುತ್ತೂರು ಹೆಬ್ಬಾರಬೈಲಿನ ರಾಮಗೋಪಾಲ ನೂಜಾಜೆ ಮತ್ತು ಪೂರ್ಣಿಮಾ ನೂಜಾಜೆ ದಂಪತಿಯ ಪುತ್ರ ಶ್ರೀಶ ನಿಡ್ವಣ್ಣಾಯ (೫೮೫), ಪುತ್ತೂರು ಕಲ್ಲೇಗದ ಧರ್ಮಪಾಲ್ ಕೆ. ಮತ್ತು ಲತಾಕುಮಾರಿ ದಂಪತಿ ಪುತ್ರ ಅಕ್ಷಯ್ ಡಿ.ಎಲ್. (೫೮೫), ಸುಳ್ಯದ ಶ್ರೀಧರ ರಾವ್ ಎಚ್. ಮತ್ತು ರಾಜೇಶ್ವರಿ ಎಸ್. ರಾವ್ ದಂಪತಿ ಪುತ್ರಿ ಅಮೂಲ್ಯ ರಾವ್ (೫೮೫), ಪುತ್ತೂರಿನ ಶಿವರಾಮ್ ಆಳ್ವ ಮತ್ತು ಸೀಮಾ ಆಳ್ವ ದಂಪತಿ ಪುತ್ರಿ ವರ್ಷಿಣಿ ಆಳ್ವ (೫೮೪), ಸುಳ್ಯ ಪೆರುವಾಜೆಯ ಹೊನ್ನಪ್ಪ ಗೌಡ ಮತ್ತು ಆಶಾಲತಾ ದಂಪತಿ ಪುತ್ರಿ ಸಾನ್ವಿ ಜೆ. ಎಚ್. (೫೮೪), ಕಾಸರಗೋಡು ಮಂಜೇಶ್ವರದ ರಾಮಕೃಷ್ಣ ಭಟ್ ಎಂ. ಮತ್ತು ವೇದಾವತಿ ಎ. ದಂಪತಿಯ ಪುತ್ರಿ ಸಂಹಿತಾ ಎಂ. (೫೮೩), ಪುತ್ತೂರು ಬನ್ನೂರಿನ ಎಂ. ಕೇಶವ ಮತ್ತು ಪುಷ್ಪಲತಾ ದಂಪತಿ ಪುತ್ರಿ ಎಂ. ಮೃಣಾಲಿ (೫೮೩), ಕಡಬ ಬಳ್ಪದ ವಿಶ್ವೇಶ್ವರ ಬಿ. ಮತ್ತು ಪುಷ್ಪಲತಾ ಯು. ದಂಪತಿಯ ಪುತ್ರಿ ಮಹತಿ ಬಿ. (೫೮೩), ಬಂಟ್ವಾಳ ಪೆರ್ನೆಯ ಉಮೇಶ್ ನಾಯಕ್ ಮತ್ತು ಉಷಾ ದಂಪತಿ ಪುತ್ರ ಸಂಜಯ್ ಕುಮಾರ್ (೫೮೧), ಪುತ್ತೂರಿನ ಜೀವನ್ ಮತ್ತು ಜ್ಯೋತಿಲಕ್ಷ್ಮೀ ದಂಪತಿ ಪುತ್ರಿ ಜೋಶಿತಾ (೫೮೦), ಕಾಸರಗೋಡಿನ ರಮೇಶ್ ಭಟ್ ವೈ.ವಿ. ಮತ್ತು ಸವಿತ ದಂಪತಿ ಪುತ್ರ ಅನ್ವಿತ್ ಆರ್. ಭಟ್. (೫೮೦) ಉತ್ತಮ ಫಲಿತಾಂಶ ಸಾಧಿಸಿದ್ದಾರೆ.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ