ಬೀಳಗಿ ಶುಗರ್‌ ಮಿಲ್ಸ್ ಕೇನ್ ಕ್ಯಾರಿಯನ್ ಪೂಜೆ

KannadaprabhaNewsNetwork |  
Published : Nov 12, 2026, 02:45 AM IST
ಲೋಕಾಪುರ | Kannada Prabha

ಸಾರಾಂಶ

ಲೋಕಾಪುರ ಸಮೀಪ ತಿಮ್ಮಾಪುರ ಗ್ರಾಮದ ಬೀಳಗಿ ಶುಗರ ಮಿಲ್ಸ್ ಲಿ., ಯುನಿಟ್-೨ (ರನ್ನನಗರ) ಸಂಸ್ಥೇಯಲ್ಲಿ ಮಂಗಳವಾರ ೨೦೨೬-೨೭ ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಕೇನ್ ಕ್ಯಾರಿಯನ್ ಪೂಜಾ ಕಾರ್ಯಕ್ರಮ ಅಧ್ಯಕ್ಷ ಎಸ್.ಆರ್. ಪಾಟೀಲ ನೇತೃತ್ವದಲ್ಲಿ ಜರುಗಿತು.

ಕನ್ನಡಪ್ರಭ ವಾರ್ತೆ ಲೋಕಾಪುರ

ಸಮೀಪದ ತಿಮ್ಮಾಪುರ ಗ್ರಾಮದ ಬೀಳಗಿ ಶುಗರ್‌ ಮಿಲ್ಸ್ ಲಿ., ಯುನಿಟ್-೨ (ರನ್ನನಗರ) ಸಂಸ್ಥೆಯಲ್ಲಿ ಮಂಗಳವಾರ ೨೦೨೬-೨೭ ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಕೇನ್ ಕ್ಯಾರಿಯನ್ ಪೂಜಾ ಕಾರ್ಯಕ್ರಮ ಜರುಗಿತು.

ಸಹಕಾರಿ ಧುರೀಣ, ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಸ್.ಆರ್. ಪಾಟೀಲ ಮಾತನಾಡಿ, ಅವರು ರೈತರು ಕಾರ್ಖಾನೆಯ ಶಕ್ತಿ ಮತ್ತು ಅಭಿವೃದ್ಧಿಯ ಮೂಲವಾಗಿದ್ದು, ಗುಣಮಟ್ಟದ ಕಬ್ಬನ್ನು ಪೂರೈಸುವಂತೆ ಮನವಿ ಮಾಡಿದರು.

ರೈತರು ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ಕಬ್ಬು ಪೂರೈಸಿ ಕಾರ್ಖಾನೆ ಅಭಿವೃದ್ಧಿ ಮತ್ತು ಉತ್ಪಾದನೆ ಪ್ರಗತಿಯಲ್ಲಿ ಸಹಕಾರ ನೀಡಿ, ಪ್ರಸಕ್ತ ಸಾಲಿನಲ್ಲಿ ೧೦ ಲಕ್ಷ ಟನ್ ಕಬ್ಬು ನೂರಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಬಂದ್ ಆಗಿದ್ದ ಈ ಕಾರ್ಖಾನೆಯನ್ನು ಪುನರ ಆರಂಭಿಸಿ ಅಭಿವೃದ್ಧಿ ಪಥದತ್ತ ಕೊಂಡು ಒಯ್ಯಲು ಷೇರುದಾರರ, ರೈತರ, ಕಬ್ಬು ಪೂರೈಕೆದಾರರ, ಕಾರ್ಮಿಕರ, ಸಹಕಾರ ಅತ್ಯಗತ್ಯವಾಗಿದೆ. ನಿಮ್ಮ ವಿಶ್ವಾಸ ಮತ್ತು ನಂಬಿಕೆಗೆ ಚ್ಯುತಿ ಬರದ ಹಾಗೆ ಕೆಲಸ ಮಾಡಿ ಕಬ್ಬು ಪೂರೈಕೆದಾರರ ಮತ್ತು ಕಾರ್ಮಿಕರ ಹಿತರಕ್ಷಣೆ ಮಾಡುವುದು ನನ್ನ ಜವಾಬ್ದಾರಿಯಾಗಿದೆ, ನಮ್ಮ ಜಿಲ್ಲೆಯಲ್ಲೇ ಆದರ್ಶ ಸಕ್ಕರೆ ಕಾರ್ಖಾನೆಯನ್ನಾಗಿ ಮಾಡಲು ಎಲ್ಲರೂ ಸೇರಿ ಪ್ರಯತ್ನ ಮಾಡೋಣ ಎಂದು ತಿಳಿಸಿ, ಜಿಲ್ಲೆಯಲ್ಲಿ ಬೇರೆ ಸಕ್ಕರೆ ಕಾರ್ಖಾನೆಯವರು ನೀಡುವ ದರವನ್ನೇ ನಮ್ಮ ಸಕ್ಕರೆ ಕಾರ್ಖಾನೆ ನೀಡಲಿದೆ ಎಂದು ಭರವಸೆ ನೀಡಿದರು.

ಎಚ್.ಎಲ್. ಪಾಟೀಲ, ಮಂಜುನಾಥ ಅರಳಿಕಟ್ಟಿ, ತಿಮ್ಮಣ್ಣ ಬಟಕುರ್ಕಿ, ಗಿರೀಶ ಲಕ್ಷಾಣಿ, ರಾಜುಗೌಡ ಜಂಬಗಿ, ಲೋಕಣ್ಣ ಕತ್ತಿ, ವಿಠ್ಠಲ ತುಮ್ಮರಮಟ್ಟಿ, ವೆಂಕಣ್ಣ ಕಮಕೇರಿ, ಕೆ.ವಾಯ್.ಬುದ್ನಿ, ವೈ.ಜಿ.ದಾಸರಡ್ಡಿ, ದುಂಡಪ್ಪ ದಾಸರಡ್ಡಿ, ಪಾಂಡುರಂಗ ಹೂವಣ್ಣವರ, ಕಾರ್ಮಿಕರ ಸಂಘದ ಅಧ್ಯಕ್ಷ ಉಮೇಶ ಬಡಿಗೇರ, ಉಪಾಧ್ಯಕ್ಷ ನಾಗಪ್ಪ ಕೆಳಗಡೆ, ಕಾರ್ಯದರ್ಶಿ ಪ್ರಕಾಶ ಕಬ್ಬೂರ, ಖಜಾಂಜಿ ಪಾಂಡು ಮುಳ್ಳೂರ, ಕಾಳಪ್ಪ ಕಂಬಾರ ಹಾಗೂ ಕಾರ್ಖಾನೆ ಆಡಳಿತ ಮಂಡಳಿ, ಸಾವಿರಾರು ರೈತರು, ಕಾರ್ಮಿಕರು, ಕಬ್ಬು ಬೆಳೆಗಾರರು, ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌