ಪೌರಕಾರ್ಮಿಕರಿಂದ ಬಾರಕೋಲು ಚಳವಳಿ

KannadaprabhaNewsNetwork |  
Published : Jul 24, 2024, 12:19 AM IST
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ಪೌರಕಾರ್ಮಿಕರು ಬಾರಕೋಲು ಚಳುವಳಿ ನಡೆಸಿದರು. | Kannada Prabha

ಸಾರಾಂಶ

ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಬೇಡಿಕೆಗಳಿಗೆ ಸ್ಪಂದಿಸದೇ ನಕಾರಾತ್ಮಕವಾಗಿ ನಡೆದುಕೊಂಡಿದ್ದಾರೆ. ಸರ್ಕಾರದ ಆದೇಶಗಳ ಅನುಷ್ಠಾನಕ್ಕೆ ಮುಂದಾಗಿಲ್ಲ. ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ.

ಹುಬ್ಬಳ್ಳಿ:

ಇಲ್ಲಿನ ಮಹಾನಗರ ಪಾಲಿಕೆ ಕಚೇರಿ ಎದುರು ಕಳೆದ 6 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಪೌರ ಕಾರ್ಮಿಕರು ಮಂಗಳವಾರ ಬಾರಕೋಲು ಚಳವಳಿ ನಡೆಸಿದರು.

ಬಾರಕೋಲಿನಿಂದ ಮೈಮೇಲೆ ಹೊಡೆದುಕೊಂಡು ರಾಜ್ಯಸರ್ಕಾರ ಹಾಗೂ ಪಾಲಿಕೆ ಆಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಧರಣಿ ಸತ್ಯಾಗ್ರಹ ನಿರತರನ್ನು ಸೋಮವಾರ ಭೇಟಿ ಮಾಡಿದ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಬೇಡಿಕೆಗಳಿಗೆ ಸ್ಪಂದಿಸದೇ ನಕಾರಾತ್ಮಕವಾಗಿ ನಡೆದುಕೊಂಡಿದ್ದಾರೆ. ಸರ್ಕಾರದ ಆದೇಶಗಳ ಅನುಷ್ಠಾನಕ್ಕೆ ಮುಂದಾಗಿಲ್ಲ. ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಆಯುಕ್ತರನ್ನು ತಕ್ಷಣ ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಧಾರವಾಡ ಜಿಲ್ಲಾ ಎಸ್‌ಸಿ ಎಸ್‌ಟಿ ಪೌರ ಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ತಿಳಿಸಿದರು.

ಈ ವೇಳೆ ಪೌರಕಾರ್ಮಿಕರಾದ ಗಾಳೆಪ್ಪಾ ದ್ವಾಸಾಲಕೇರಿ, ಗಂಗಮ್ಮ ಸಿದ್ರಾಮಪುರ, ದತಪ್ಪ ಆಪುಸಪೇಟ್, ರಾಧಾ ಬಾಗಲಾಡ, ಶರಣಪ್ಪ ಅಮರಾವತಿ, ರೇಣುಕಾ ನಾಗರಾಳ, ಷಣ್ಮುಖ ಡಂಬಲದಿನ್ನಿ, ದುರಗವ್ವ ಯಮನಾಳ, ಯಮನವ್ವ ಬೆನಸಮಟ್ಟಿ, ಸತ್ಯಾನಂದ ಮಸರಕಲ್ ಸೇರಿದಂತೆ ನೂರಾರು ಪೌರಕಾರ್ಮಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?