ಸಿದ್ದರಾಮಯ್ಯ ಸಮಯ ಸಿಕ್ಕಾಗ ಅಯೋಧ್ಯೆಗೆ ಹೋಗಲಿ: ಬಸನಗೌಡ ಪಾಟೀಲ ಯತ್ನಾಳ

KannadaprabhaNewsNetwork | Updated : Jan 14 2024, 05:12 PM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಯ ಸಿಕ್ಕಾಗ ಅಯೋಧ್ಯೆ ರಾಮ ಮಂದಿರಕ್ಕೆ ಹೋಗಲಿ. ಒಂದು ವೇಳೆ ನಾನು ಕಾಂಗ್ರೆಸ್‌ನಲ್ಲಿದ್ದರೆ ಹೈಕಮಾಂಡ್ ಆದೇಶ ಧಿಕ್ಕರಿಸಿ ಅಯೋಧ್ಯೆಗೆ ಹೋಗುತ್ತಿದ್ದೆ ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಯ ಸಿಕ್ಕಾಗ ಅಯೋಧ್ಯೆ ರಾಮ ಮಂದಿರಕ್ಕೆ ಹೋಗಲಿ. ಒಬ್ಬರಿಗೂ ಕಾಂಗ್ರೆಸ್‌ನವರಿಗೆ ಧೈರ್ಯವಿಲ್ಲ. ಒಂದು ವೇಳೆ ನಾನು ಕಾಂಗ್ರೆಸ್‌ನಲ್ಲಿದ್ದರೆ ಹೈಕಮಾಂಡ್ ಆದೇಶ ಧಿಕ್ಕರಿಸಿ ಅಯೋಧ್ಯೆಗೆ ಹೋಗುತ್ತಿದ್ದೆ ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶಿ ವಿಶ್ವನಾಥ, ಮಥುರಾ ಕೃಷ್ಣ ನಮ್ಮ ದೇಶದ ಸನಾತನ ಧರ್ಮದ ಮಹಾಪುರುಷರು. ರಾಮ ಮಂದಿರವನ್ನು ಬಿಜೆಪಿ, ಆರ್.ಎಸ್.ಎಸ್, ವಿಎಚ್‌ಪಿ ಯಾರು ಕಟ್ಟಿದ್ದಾರೆ ಎಂದು ನೋಡಬಾರದಿತ್ತು. ನೀವು ರಾಮನ ಭಕ್ತರಾಗಿದ್ದರೆ ಹೋಗುತ್ತಿದ್ದೀರಿ ಎಂದರು.

ನೀವು, ಕಪೀಲ್ ಸಿಬಲ್‌ ಸೇರಿ 25 ವಕೀಲರು ರಾಮ ಮಂದಿರ ನಿರ್ಮಾಣದ ವಿರುದ್ಧ ವಾದ ಮಾಡಿದ್ದೀರಿ. ರಾಮ ಕಾಲ್ಪನಿಕ, ರಾಮ ಹುಟ್ಟಿರಲಿಲ್ಲ. ರಾಮ ಎಂಬಾತ ಭೂಮಿಯ ಮೇಲೆ ಇರಲಿಲ್ಲ ಎಂದು ಹೇಳಿದ್ದೀರಿ. ಈಗ ರಾಮ ಇದ್ದಾನೆ. 

ನಾನೂ ರಾಮಭಕ್ತ, ನೀನೂ ರಾಮಭಕ್ತ ಎಂದು ಸ್ಪರ್ಧೆ ಮಾಡುತ್ತಿದ್ದೀರಿ.ರಾಮ ಈ ದೇಶದ ಮೂಲ ಪುರುಷ. ರಾಮನನ್ನು ಬಿಟ್ಟು ಭಾರತವಿಲ್ಲ. ಭಾರತ ಬಿಟ್ಟು ರಾಮನಿಲ್ಲ. ನಮ್ಮ ದೇಶದಲ್ಲಿ ಮಹಾಭಾರತದಲ್ಲಿ ಪಾಂಡವರು, ಕೌರವರು ಇದ್ದರು. ರಾಮಾಯಣದಲ್ಲಿ ರಾವಣ ಇದ್ದ. ಅದೇ ರೀತಿ ಕಾಂಗ್ರೆಸ್ಸಿಗರು ಈಗ ಕೌರವರ ಮತ್ತು ರಾವಣನ ಪಾತ್ರ ವಹಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಅಯೋಧ್ಯೆ ರಾಮಮಂದಿರ ಉದ್ಘಾಟನೆ ವಿಚಾರದಲ್ಲಿ ಶಂಕರಾಚಾರ್ಯ ಪೀಠಗಳ ವಿರೋಧ ವಿಚಾರ ಅವರವರಿಗೆ ಬಿಟ್ಟದ್ದು. ಒಂದು ತಿಳಿದುಕೊಳ್ಳಿ, ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಬಳಿಕ ದೇಶದಲ್ಲಿ ಹೊಸ ಹಿಂದು ಯುಗ ಪ್ರಾರಂಭವಾಗಲಿದೆ. 

ರಾಮ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿಶ್ವದಲ್ಲಿಯೇ ಹಿಂದು ಯುಗ ಪ್ರಾರಂಭವಾಗಲಿದೆ. ಜಗತ್ತೇ ಹಿಂದು ಧರ್ಮಮಯವಾಗಲಿದೆ. ಹಿಂದು ಧರ್ಮದ ವಿರೋಧಿಗಳಿಗೆ ರಾಮಜನ್ಮ ಭೂಮಿಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಉತ್ತರ ನೀಡಲಾಗುತ್ತದೆ ಎಂದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ ಬಗ್ಗೆ ಗೌರರವಿದೆ. ಇವರಿಂದ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದ ಕುರಿತು ನೀಡಿರುವ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ನಿಮಗೆ ಧೈರ್ಯವಿದ್ದರೆ ಕೆ.ಎಚ್.ಮುನಿಯಪ್ಪ ಅವರಂತೆ ಪ್ರತಿದಿನ ರಾಮನಾಮ ಜಪ ಮಾಡುತ್ತೇನೆ ಎಂದು ಹೇಳಬೇಕಿತ್ತು. 

ಅನೇಕರು ಅದೇ ರೀತಿ ಹೇಳಿದ್ದರು. ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವುದು ವೈಯಕ್ತಿದ ಮತ್ತು ಧಾರ್ಮಿಕ ಹಕ್ಕು. ಹಿಂದುಗಳೂ ನಿಮಗೆ ಮತ ಹಾಕಿದ್ದಾರೆ. ಅದನ್ನು ನೀವು ಪರಿಗಣಿಸಬೇಕಿತ್ತು. ಕಾಂಗ್ರೆಸ್ಸಿನ ಈ ನಿರ್ಧಾರ ಮೂರ್ಖತನದಿಂದ ಕೂಡಿದೆ. ಕಾಂಗ್ರೆಸ್ ಗುಲಾಮಗಿರಿಯ ಸಂಕೇತ ಎಂಬುದಕ್ಕೆ ಡಾ.ಜಿ.ಪರಮೇಶ್ವರ ಹೇಳಿಕೆ ಸಾಕ್ಷಿಯಾಗಿದೆ ಎಂದರು.

ನೀವು, ಕಪೀಲ್ ಸಿಬಲ್‌ ಸೇರಿ 25 ವಕೀಲರು ರಾಮ ಮಂದಿರ ನಿರ್ಮಾಣದ ವಿರುದ್ಧ ವಾದ ಮಾಡಿದ್ದೀರಿ. ರಾಮ ಕಾಲ್ಪನಿಕ, ರಾಮ ಹುಟ್ಟಿರಲಿಲ್ಲ. ರಾಮ ಎಂಬಾತ ಭೂಮಿಯ ಮೇಲೆ ಇರಲಿಲ್ಲ ಎಂದು ಹೇಳಿದ್ದೀರಿ. ಈಗ ರಾಮ ಇದ್ದಾನೆ. ನಾನೂ ರಾಮಭಕ್ತ, ನೀನೂ ರಾಮಭಕ್ತ ಎಂದು ಸ್ಪರ್ಧೆ ಮಾಡುತ್ತಿದ್ದೀರಿ. ರಾಮ ಈ ದೇಶದ ಮೂಲ ಪುರುಷ. ರಾಮನನ್ನು ಬಿಟ್ಟು ಭಾರತವಿಲ್ಲ. ಭಾರತ ಬಿಟ್ಟು ರಾಮನಿಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Share this article