- ಜಾತಿಗಣತಿಯಲ್ಲಿ ಏನು ಬರೆಸಬೇಕೆಂಬ ಗೊಂದಲಕ್ಕೆ ಗುರು-ವಿರಕ್ತರು ತೆರೆ ಎಳೆಯಲಿ: ಸ್ವಾಮೀಜಿ - - -
ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಬಸವನ ಬಾಗೇವಾಡಿಯಿಂದ ಬೆಂಗಳೂರುವರೆಗೆ ಹಮ್ಮಿಕೊಂಡ ಬಸವ ಸಂಸ್ಕೃತಿ ಅಭಿಯಾನ ಸೆ.15ರಂದು ದಾವಣಗೆರೆಗೆ ಆಗಮಿಸಲಿದೆ. ಅದ್ಧೂರಿಯಾಗಿ ಅಭಿಯಾನ ನಡೆಸಲು ನಗರದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿದ್ದ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದರು.ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ ಮಾತನಾಡಿ, ಕೆಲವರು ವೀರಶೈವ, ಇನ್ನೂ ಕೆಲವರು ವೀರಶೈವ ಲಿಂಗಾಯತ ಎಂದು ಬರೆಸುವಂತೆ ಹೇಳುತ್ತಿದ್ದಾರೆ. ಲಿಂಗಾಯತ ಮಠಾಧೀಶರ ಒಕ್ಕೂಟದ ನಿಲುವು ಲಿಂಗಾಯತ ಎಂದೇ ಬರೆಸಲು ತೀರ್ಮಾನಿದೆ. ಅಖಿಲ ಭಾರತಿ ವೀರಶೈವ ಮಹಾಸಭಾ ಸರಿಯಾದ ತೀರ್ಮಾನ ಕೈಗೊಂಡರೆ ಸಮಸ್ಯೆ ಪರಿಹಾರವಾಗುತ್ತದೆ ಎಂದರು.
ಅಭಿಯಾನದ ಅಧ್ಯಕ್ಷ ಅಣಬೇರು ರಾಜಣ್ಣ ಮಾತನಾಡಿ, ಲಿಂಗಾಯತ ಕುರಿತು ಅರ್ಥಪೂರ್ಣ ಚರ್ಚೆ ಆಗಬೇಕಿದೆ. ಈ ವಿಚಾರ ಬಹುದಿನಗಳಿಂದ ಹೊಗೆಯಾಡುತ್ತಿದೆ. ಅಭಿಯಾನದ ಸಮಾರೋಪವಾದ ಅ.5ರಂದು ಬೆಂಗಳೂರಲ್ಲೇ ಅಂತಿಮ ತೀರ್ಮಾನವಾಗುವ ವಿಶ್ವಾಸವಿದೆ. ಪಂಚಪೀಠಗಳ ಸ್ವಾಮೀಜಿಗಳು ಅಂದು ಆಗಮಿಸಿದರೆ ಅನುಕೂಲ ಎಂದರು.
- - -
ಈ ಹಿಂದೆ ರಾಜ್ಯ ಸರ್ಕಾರ ಜಾತಿ ಗಣತಿ ನಡೆಸಿದಾಗ ಎಲ್ಲರೂ ಒಳಪಂಗಡದ ಹೆಸರು ಬರೆಸಿದ್ದರಿಂದ ರಾಜ್ಯದಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆ ತೋರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಡೆಸುವ ಜಾತಿಗಣತಿಯಲ್ಲಿ ವೀರಶೈವ ಲಿಂಗಾಯತರು ಎಂದು ಬರೆಸುವ ಬಗ್ಗೆ ಎಲ್ಲ ಮಠಾಧೀಶರೂ ಸೇರಿ ಚರ್ಚಿಸಿ, ಒಮ್ಮತದ ತೀರ್ಮಾನಕ್ಕೆ ಬರಬೇಕು.
- - -
ದಾವಣಗೆರೆಯಲ್ಲಿ ಮಂಗಳವಾರ ಶ್ರೀ ಶಿವಯೋಗಿ ಮಂದಿರದಲ್ಲಿ ಸಾಣೇಹಳ್ಳಿ ಶ್ರೀ ಸಾನಿಧ್ಯದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನ ಪೂರ್ವಭಾವಿ ಸಭೆಯಲ್ಲಿ ಬಸವ ಅನುಯಾಯಿಗಳು ಪಾಲ್ಗೊಂಡರು.