ಬೀದರ್‌ನಲ್ಲಿ ಬಸವ ಜಯಂತಿಯ ಮೆರವಣಿಗೆ ಅದ್ಧೂರಿ

KannadaprabhaNewsNetwork |  
Published : May 10, 2024, 11:48 PM IST
ಚಿತ್ರ: 10ಬಿಡಿಆರ್29ಬೀದರ್‌ನಲ್ಲಿ ಝಗಮಗಿಸುವ ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ಅಶ್ವಾರೂಢ ಬಸವೇಶ್ವರ ಮೂರ್ತಿಯ ಎದುರು ವಚನ ಪಠಣ. | Kannada Prabha

ಸಾರಾಂಶ

ಬಸವ ಜಯಂತಿ ನಿಮಿತ್ತ ಬಸವೇಶ್ವರ ವೃತ್ತಕ್ಕೆ ವಿಶೇಷ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಟ್ರೆಸ್‌ ಹಾಕುವ ಮೂಲಕ ಬಸವಣ್ಣನ ಮೂರ್ತಿ ಕಂಗೊಳಿಸುವಂತೆ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ಬೀದರ್

ಝಗಮಗಿಸುವ ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ಅಶ್ವಾರೂಢ ಬಸವೇಶ್ವರ ಮೂರ್ತಿ, ಎಲ್ಲೆಡೆ ವಚನ ಪಠಣದ್ದೆ ಸದ್ದು, ಬಸವ ಧ್ವಜಗಳ ಹಾರಾಟ ಸಾವಿರಾರು ಜನರ ಭವ್ಯ ಮೆರವಣಿಗೆ ಈ ಬಾರಿಯ ಬಸವ ಜಯಂತಿ ಮೆರವಣಿಗೆಗೆ ಮೆರಗು ತಂದಿತ್ತು.

ಇಲ್ಲಿನ ಶಕ್ರವಾರ ಬಸವ ಜಯಂತಿ ನಿಮಿತ್ತ ಬಸವೇಶ್ವರ ವೃತ್ತಕ್ಕೆ ವಿಶೇಷ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಟ್ರೆಸ್‌ ಹಾಕುವ ಮೂಲಕ ಬಸವಣ್ಣನ ಮೂರ್ತಿ ಕಂಗೊಳಿಸುವಂತೆ ಮಾಡಲಾಗಿತ್ತು. ಪೌರಾಡಳಿತ ಸಚಿವ ರಹೀಮ್‌ ಖಾನ್‌ ಅವರು ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು. ಅಕ್ಕ ಗಂಗಾಂಬಿಕೆ ಅವರು ವಚನ ಪಠಣ ಮಾಡಿಸಿದರು.

ಪಕ್ಷ ಬೇಧ ಮರೆತು ಪಾಲ್ಗೊಂಡ ರಾಜಕೀಯ ನಾಯಕರು -ಪಕ್ಷ ಬೇಧ ಮರೆತು ರಾಜಕೀಯ ನಾಯಕರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವಚನ ಗಾಯನದ ಗೀತೆಗಳಿಗೆ ಭರ್ಜರಿ ಸ್ಟೆಪ್ಸ್‌ ಹಾಕಿದ ಪ್ರಮುಖರನ್ನು ಎತ್ತಿ ಕುಣಿದು ಬಸವ ಭಕ್ತರು ಸಂಭ್ರಮಿಸಿದರು. ಬಸವೇಶ್ವರ ವೃತ್ತದಿಂದ ಆರಂಭವಾದ ಭವ್ಯ ಮೆರವಣಿಗೆ ಚೌಬಾರಾ, ಗಾವಾನ್‌ ವೃತ್ತ, ಡಾ. ಅಂಬೇಡ್ಕರ್‌ ವೃತ್ತದ ಮಾರ್ಗವಾಗಿ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಸಮಾರೋಪಗೊಂಡಿತು.

ಹುಲಸೂರಿನ ಶಿವಾನಂದ ಮಹಾಸ್ವಾಮಿಗಳು, ನಗರಸಭೆ ಅಧ್ಯಕ್ಷ ಮಹ್ಮದ್‌ ಗೌಸ್‌, ಮುಖಂಡರಾದ ಗುರುನಾಥ ಕೊಳ್ಳೂರ, ಶಿವಶರಣಪ್ಪ ವಾಲಿ, ಡಾ. ರಜನೀಶ ವಾಲಿ, ಬಸವರಾಜ ಧನ್ನೂರ್‌, ಮಾರುತಿ ಬೌದ್ದೆ, ಶಿವಶಂಕರ ಟೋಕರೆ. ಶಶಿ ಹೊಸಳ್ಳಿ, ಪಂಡಿತ ಚಿದ್ರಿ, ಸೋಮಶೇಖರ ಪಾಟೀಲ್‌, ಬಸವರಾಜ ಪಾಟೀಲ್‌ ಹಾರೂರಗೇರಿ, ಬಸವಕಾಜ ಭತಮುರ್ಗೆ, ಬಾಬುರಾವ್‌ ದಾರಿ, ಶಿವಕುಮಾರ ಕಟ್ಟೆ, ಬಸವರಾಜ ಬಲ್ಲೂರ್‌, ಅಮೃತರಾವ್‌ ಚಿಮಕೋಡೆ ಆದೀಶ ವಾಲಿ, ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಸುರೇಶ ಚನಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿರುಪಾಕ್ಷ ಗಾದಗಿ, ವಿಜಯಕುಮಾರ ಸೋನಾರೆ ಕರ್ನಾಟಕ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರೂ ಆದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಜಯದೇವಿ ಯದಲಾಪೂರೆ, ಶಕುಂತಲಾ ಬೆಲ್ದಾಳೆ, ಗೀತಾ ಚಿದ್ರಿ, ಶ್ರೇಯಾ ಮಹೇಂದ್ರಕರ್‌, ಸ್ವರೂಪಾ ರಾಣಿ ಸೇರಿದಂತೆ ಮತ್ತಿತರರು ಇದ್ದರು.

ಶುಕ್ರವಾರ ಬಸವ ಜಯಂತಿ ನಿಮಿತ್ತ ಬೆಳಿಗ್ಗೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್‌ ಅವರುಗಳು ಬಸವೇಶ್ವರ ವೃತ್ತಕ್ಕೆ ಆಗಮಿಸಿ ಮಾಲಾರ್ಪಣೆ ಮಾಡಿದ್ದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?