ತತ್ವ, ಸಿದ್ಧಾಂತದಿಂದ ಬಸವ ತತ್ವ ಗಟ್ಟಿ: ಡಾ.ಗಂಗಾಶ್ರೀ ಪಾಟೀಲ

KannadaprabhaNewsNetwork |  
Published : Apr 19, 2026, 03:15 AM IST
ಜಮಖಂಡಿ ಓಲೆಮಠದ ಜಾತ್ರಾಮಹೋತ್ಸವದಲ್ಲಿ ಶರಣೆ ಡಾ.ಗಂಗಾಶ್ರೀ ಪಾಟೀಲ ಮಾತನಾಡಿದರು. ಜ್ಯೋತಿ ಗಿರೀಶ, ಎ.ಆರ್. ಶಿಂಧೆ, ರಾಹುಲ ಕಲೂತಿ ಇತರರು ಇದ್ದಾರೆ. | Kannada Prabha

ಸಾರಾಂಶ

ಲಿಂಗತತ್ವ ಮತ್ತು ನಡೆ-ನುಡಿ ಸಿದ್ಧಾಂತದಿಂದಾಗಿ ಬಸವತತ್ವ ಗಟ್ಟಿಯಾಗಿ ನಿಲ್ಲುತ್ತದೆ. ಸೌಹಾರ್ದ ಸಮಾಜ ಬೆಳೆಸಬೇಕೆಂದು ಬಸವಣ್ಣನವರು ಲಿಂಗತತ್ವ ಪ್ರತಿಪಾದಿಸಿದರು. ಭಾರತೀಯ ಸಂಸ್ಕೃತಿ ಸೌಹಾರ್ದ ಸಂಸ್ಕೃತಿಯಾಗಿದೆ ಎಂದು ಗೋಠೆ ಗ್ರಾಮದ ಶರಣೆ ಡಾ.ಗಂಗಾಶ್ರೀ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಲಿಂಗತತ್ವ ಮತ್ತು ನಡೆ-ನುಡಿ ಸಿದ್ಧಾಂತದಿಂದಾಗಿ ಬಸವತತ್ವ ಗಟ್ಟಿಯಾಗಿ ನಿಲ್ಲುತ್ತದೆ. ಸೌಹಾರ್ದ ಸಮಾಜ ಬೆಳೆಸಬೇಕೆಂದು ಬಸವಣ್ಣನವರು ಲಿಂಗತತ್ವ ಪ್ರತಿಪಾದಿಸಿದರು. ಭಾರತೀಯ ಸಂಸ್ಕೃತಿ ಸೌಹಾರ್ದ ಸಂಸ್ಕೃತಿಯಾಗಿದೆ ಎಂದು ಗೋಠೆ ಗ್ರಾಮದ ಶರಣೆ ಡಾ.ಗಂಗಾಶ್ರೀ ಪಾಟೀಲ ಹೇಳಿದರು.

ಬಸವ ಜಯಂತಿ ನಿಮಿತ್ತ ಓಲೆಮಠದ ಆಶ್ರಯದಲ್ಲಿ ಜರುಗುತ್ತಿರುವ ಆರು ದಿನಗಳ ಓಲೆಮಠದ ಜಾತ್ರಾ ಮಹೋತ್ಸವದಲ್ಲಿ ಶುಕ್ರವಾರ ಸಂಜೆಯ ಕಾರ್ಯಕ್ರಮದಲ್ಲಿ ಅವರು ವಚನಗಳಲ್ಲಿ ಸೌಹಾರ್ದತೆಯ ನೆಲೆಗಳು ಕುರಿತು ವಿಶೇಷ ಉಪನ್ಯಾಸ ನೀಡಿದರು. ಲಿಂಗದಿಂದಾಚೆಗೆ ಬಸವ ಧರ್ಮವಿದೆ. ಆತ್ಮವೇ ಲಿಂಗಸ್ವರೂಪ. ಲಿಂಗ ಅರಿವಿನ ಕುರುಹು. ಬುದ್ಧಿಯನ್ನು ಹತೋಟಿಯಲ್ಲಿಡಲು ಲಿಂಗಪೂಜೆ ಮಾಡಬೇಕು. ತಮ್ಮನ್ನೇ ತಾವು ಸವಾಲಿಗಿಟ್ಟು ನಡೆದಂತೆ ನುಡಿಯುವುದು ನಿಜವಾದ ತತ್ವ ಎಂದು ಹೇಳಿದರು.

ಓಲೆಮಠದ ಆನಂದ ದೇವರು ನೇತೃತ್ವ ವಹಿಸಿ ಮಾತನಾಡಿ, ಸೌಹಾರ್ದತೆ ಎಂದರೆ ಪ್ರೀತಿ, ವಿಶ್ವಾಸ, ನಂಬಿಕೆ, ಗೌರವ. ಬಸವಾದಿ ಶಿವಶರಣರು ಪ್ರೀತಿ, ವಿಶ್ವಾಸದಿಂದ ಬದುಕಲು ತಿಳಿಸಿದ್ದಾರೆ. ದ್ವೇಷ ಬಿಟ್ಟು ಪ್ರೀತಿ ಮಾಡುವುದೇ ಸೌಹಾರ್ದತೆ ಎಂದು ಆಶೀರ್ವಚನ ನೀಡಿದರು. ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಹುಲ್‌ ಕಲೂತಿ ಮಾತನಾಡಿದರು. ಹಿರೇಪಡಸಲಗಿಯ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು, ಹುಲ್ಯಾಳ ಸಾರವಾಡ ಮಠದ ಕೃಷ್ಣಯ್ಯ ಸ್ವಾಮೀಜಿ, ಹುಲ್ಯಾಳದ ದುಂಡಯ್ಯಾ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಪೌರಾಯುಕ್ತ ಜ್ಯೋತಿ ಗಿರೀಶ, ಎಂಜಿನಿಯರ್ ಎ.ಆರ್. ಶಿಂಧೆ, ರಮೇಶ ಅಣ್ಣಿಗೇರಿ, ಉಮೇಶ ಶಿದರಡ್ಡಿ, ಡಿ.ಡಿ. ಜೋಗದಂಡೆ, ಮಹೇಶ ಮಡಿವಾಳರ, ಹನುಮಂತ ಮಗದುಮ್‌, ದಶರಥ ವಗ್ಗೆನ್ನವರ, ಪತ್ರಕರ್ತ ಕೇದಾರೆಪ್ಪ ರಾವಳೋಜಿ, ಅನಿತಾ ಪಾಟೀಲ, ಪ್ರತೀಕ್ಷಾ ಜಿರಲಿ, ಜ್ಯೋತಿ ಕಟಗಿ, ಗಿರಿಜಾ ಮೇತ್ರಿ, ಶ್ವೇತಾ ಬಣ್ಣದ, ಲಕ್ಷ್ಮೀ ನಾಯಕ, ಅನು ನಾಯಕ, ಮುತ್ತವ್ವ ಪೂಜಾರಿ ಇತರರು ಇದ್ದರು.

ಜೈನ ಸಮಾಜದ ದಯಾನಂದ ಶಿರಗಾರ, ಆರ್.ಪಿ. ನ್ಯಾಮಗೌಡ, ಶೀತಲ ನ್ಯಾಮಗೌಡ, ಕಿರಣ ದೇಸಾಯಿ, ವಿನಯ ಸಿದ್ದಾರ, ಬಸವರಾಜ ಆಲಗೂರ ಮಹಾಪ್ರಸಾದ ವ್ಯವಸ್ಥೆ ಮಾಡಿದ್ದರು. ಉಪನ್ಯಾಸಕಿ ಚಂದ್ರಕಲಾ ಜನಗೌಡ, ಬಸವ ಕೇಂದ್ರದ ಸದಸ್ಯ ಅಣ್ಣಾಸಾಹೇವ ಜಗದೇವ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಕ್ಕೇರಿ ಚಂದ್ರಶೇಖರ ಶ್ರೀಗೆ ಜೀವಮಾನ ಸಾಧನೆ ಪ್ರಶಸ್ತಿ
ಹಲ್ಮಿಡಿ ಶಾಸನದ ಪ್ರತಿಕೃತಿ ಮರುಸ್ಥಾಪನೆ ಮುಖಂಡರ ಸಲಹೆ