ಬೀದರ್: ಬಸವ ಜಯಂತಿ ಪ್ರಚಾರಾರ್ಥ ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ಸೋಮವಾರ ಬಸವ ನಡಿಗೆ ನಡೆಯಿತು.
ಇದಕ್ಕೂ ಮುನ್ನ ನಡಿಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಸುವರ್ಣಾ ಧನ್ನೂರ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಸುರೇಶ ಚನಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ ಗಾದಗಿ ಹಾಗೂ ಜಯದೇವಿ ಯದಲಾಪುರೆ ಅವರನ್ನು ಸನ್ಮಾನಿಸಲಾಯಿತು. ಬಿಕೆಡಿ ಫೌಂಡೇಷನ್ ವತಿಯಿಂದ ನೆನಪಿನ ಕಾಣಿಕೆ ನೀಡಲಾಯಿತು.
ನೀಲಮ್ಮ ರೂಗನ್, ಉಷಾ ಮಿರ್ಚೆ, ಕರುಣಾ ಶೆಟಕಾರ್, ಸ್ಫೂರ್ತಿ ಧನ್ನೂರ, ಸುಜಾತಾ ಕಾಮಶೆಟ್ಟಿ, ಉಮಾ ಗಾದಗೆ, ನಿರ್ಮಲಾ ಮಸೂದಿ, ಜ್ಞಾನದೇವಿ ಬಿ, ಜ್ಯೋತಿ ಗಂಗಶೆಟ್ಟಿ, ವಿಜಯಲಕ್ಷ್ಮಿ ಪಾಟೀಲ್, ಆರುಂಧತಿ ಹಳ್ಳಿಖೇಡೆ, ಅನುಸೂಯಾ ಶೆಟಕಾರ್, ರೂಪಾ ಪಾಟೀಲ್, ಸುನಿತಾ ಮಂಗಲಗಿ ಹಾಗೂ ಶ್ರೇಯಾ ಮಹೇಂದ್ರಕರ್ ಮತ್ತಿತರರು ಪಾಲ್ಗೊಂಡಿದ್ದರು.