ನಾಳೆ ಬಸವನ ಬಾಗೇವಾಡಿಯಿಂದ ಬಸವಜ್ಯೋತಿ ಪಾದಯಾತ್ರೆ

KannadaprabhaNewsNetwork |  
Published : Apr 18, 2026, 02:45 AM IST
ಏಪ್ರಿಲ್ 19ರಂದು ಬಸವನ ಬಾಗೇವಾಡಿಯಿಂದ ಬಸವಜ್ಯೋತಿ ಪಾದಯಾತ್ರೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸಮಾನತೆಯ ಹರಿಕಾರ, ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸಣ್ಣನವರ ಜಯಂತಿ ನಿಮಿತ್ತ ಜನ್ಮಸ್ಥಳ ಬಾಗೇವಾಡಿಯಿಂದ ವಿಜಯಪುರದ ವರೆಗೆ ವಿಜಯಪುರ ಸೈಕ್ಲಿಂಗ್ ಗ್ರುಪ್ ಸಹಯೋಗದಲ್ಲಿ ಬಸವಜ್ಯೋತಿ ಪಾದಯಾತ್ರೆ ಏ.19 ಭಾನುವಾರ ರಾತ್ರಿ 7 ಗಂಟೆಗೆ ಆರಂಭಿಸಲಾಗುವುದು ಎಂದು ಆಯೋಜಕ ಬಿ.ಬಿ.ಪಾಟೀಲ ತಿಳಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಮಾನತೆಯ ಹರಿಕಾರ, ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸಣ್ಣನವರ ಜಯಂತಿ ನಿಮಿತ್ತ ಜನ್ಮಸ್ಥಳ ಬಾಗೇವಾಡಿಯಿಂದ ವಿಜಯಪುರದ ವರೆಗೆ ವಿಜಯಪುರ ಸೈಕ್ಲಿಂಗ್ ಗ್ರುಪ್ ಸಹಯೋಗದಲ್ಲಿ ಬಸವಜ್ಯೋತಿ ಪಾದಯಾತ್ರೆ ಏ.19 ಭಾನುವಾರ ರಾತ್ರಿ 7 ಗಂಟೆಗೆ ಆರಂಭಿಸಲಾಗುವುದು ಎಂದು ಆಯೋಜಕ ಬಿ.ಬಿ.ಪಾಟೀಲ ತಿಳಿಸಿದರು.

ನಗರದಲ್ಲಿ ಬಸವಜ್ಯೋತಿ ಪಾದಯಾತ್ರೆ ನಿಮಿತ್ತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ವಿಶಿಷ್ಟ ರೀತಿಯಲ್ಲಿ ಬಸವ ಜಯಂತಿ ಆಚರಿಸಲಾಗುವುದು. ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ಪಾದಯಾತ್ರಿಗಳು ಸಂಜೆ 6 ಗಂಟೆಗೆ ಹಾಜರಿರುವುದು. ಸಂಜೆ 6.30ಕ್ಕೆ ಪೂಜೆ ಸಲ್ಲಿಸಿದ ನಂತರ ರಾತ್ರಿ 7ಕ್ಕೆ. ಬಸವಜ್ಯೋತಿ ಪಾದಯಾತ್ರೆಗೆ ಬಸವನ ಬಾಗೇವಾಡಿ ವಿರಕ್ತಮಠದ ಪ.ಪೂ. ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.ಈ ಯಾತ್ರೆ ಮಸಬಿನಾಳ, ಉಕ್ಕಲಿ, ಉಕುಮನಾಳ ಮಾರ್ಗವಾಗಿ ಶಿವಗಿರಿ ತಲುಪಲಿದೆ. ನಂತರ ಏ.20ರಂದು ಬೆಳಗ್ಗೆ ನಗರದ ಬಸವೇಶ್ವರ ವೃತ್ತದಲ್ಲಿ ಮುಕ್ತಾಯಗೊಳ್ಳಲಿದೆ. 50 ಕಿ.ಮೀ ಮಾರ್ಗದೂದ್ದಕ್ಕೂ ಪಾದಯಾತ್ರಿಗಳಿಗೆ ಅಲ್ಪೋಪಹಾರ ಮತ್ತು ಲಘುಪಾನಿಯ ವ್ಯವಸ್ಥೆ ಕಲ್ಪಿಸಲಾಗುವುದು. ಸ್ವಯಂ ಪ್ರೇರಿತರಾಗಿ 150ಕ್ಕೂ ಹೆಚ್ಚು ಬಸವಾನುಯಾಯಿಗಳು ನೋಂದಣಿ ಮಾಡಿಕೊಂಡಿದ್ದು ಪಾದಯಾತ್ರೆಯಲ್ಲಿ ಭಾಗವಹಿಸಿದವರಿಗೆ ಟಿ-ಶರ್ಟ್, ಪದಕ ಮತ್ತು ಪ್ರಮಾಣ ಪತ್ರ ನೀಡಲಾಗುವುದು ಎಂದು ಆಯೋಜಕ ಬಿ.ಬಿ.ಪಾಟೀಲ ತಿಳಿಸಿದರು.

ಕೋಟಿವೃಕ್ಷ ಅಭಿಯಾನ ಸಂಚಾಲಕ ಡಾ.ಮುರುಗೇಶ ಪಟ್ಟಣಶೆಟ್ಟಿ, ವಿಸಿಜಿ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಕಾರ್ಯದರ್ಶಿ ಸೋಮಶೇಖರ ಸ್ವಾಮಿ, ಸದಸ್ಯರಾದ ಶಾಂತೇಶ ಕಳಸಗೊಂಡ, ಸಂತೋಷ ಔರಸಂಗ, ಡಾ.ರಾಜು ಯಲಗೊಂಡ, ಶಂಭು ಕರ್ಪೂರಮಠ, ಡಿ.ಕೆ.ತಾವಸೆ, ಗುರುಶಾಂತ ಕಾಪಸೆ, ಅಶ್ಪಾಕ ಮನಗೂಳಿ, ಸಿದ್ದು ನಾಯ್ಕೋಡಿ, ಸೋಮು ಮಠ, ವಿಜಯಕುಮಾರ ಕೋರೆ, ಅಮೀತ ಬಿರಾದಾರ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಕ್ಕು ಸಚಿವಾಲಯದ ಹಿಂದಿ ಸಲಹಾ ಸಮಿತಿಗೆ ಡಾ.ಸುನಿತಾ ಚವ್ಹಾಣ ನೇಮಕ
ರಸಗೊಬ್ಬರ ಕೃತಕ ಅಭಾವ ಸ್ಟಷ್ಟಿಸಿದರೆ ನಿರ್ದಾಕ್ಷಿಣ್ಯ ಕ್ರಮ