ಇಸ್ಲಾಂ ಧರ್ಮ ಶ್ರೇಷ್ಠ ಹೇಳಿಕೆಯಿಂದಬಸವಣ್ಣಗೆ ಅಪಮಾನ: ಸಿ.ಟಿ. ರವಿ

KannadaprabhaNewsNetwork |  
Published : Sep 01, 2026, 01:30 AM IST
ಸಿ.ಟಿ. ರವಿ | Kannada Prabha

ಸಾರಾಂಶ

Basavanna is insulted by his statement that Islam is great: C.T. Ravi

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

‘ಇಸ್ಲಾಂ ಧರ್ಮವೇ ಶ್ರೇಷ್ಠ’ ಎಂದು ಹೇಳುವ ಮೂಲಕ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಬಸವಣ್ಣನವರಿಗೆ ಹಾಗೂ ಲಿಂಗಾಯತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸನಾತನ ಹಿಂದೂ ಧರ್ಮದ ಹೆಸರಿನಲ್ಲಿ ಜಗತ್ತಿನಲ್ಲೇ ಭಯೋತ್ಪಾದನೆ ನಡೆದಿಲ್ಲ. ಆದರೆ, ಇಸ್ಲಾಂ ಧರ್ಮವೇ ಶ್ರೇಷ್ಠ ಎಂದು ಹೇಳುವ ಮೂಲಕ ಬಸವಣ್ಣನವರ ತತ್ವಗಳಿಗೆ ಅಪಮಾನ ಮಾಡಲಾಗಿದೆ ಎಂದು ಟೀಕಿಸಿದರು.

ಬಸವಣ್ಣನವರು ‘ದಯೆಯೇ ಧರ್ಮದ ಮೂಲವಯ್ಯ, ದಯವಿಲ್ಲದ ಧರ್ಮವಾವುದಯ್ಯ’ ಎಂದು ಪ್ರಶ್ನಿಸಿದ್ದರು. ಹೀಗಿರುವಾಗ ಬಕ್ರೀದ್ ಆಚರಣೆ ಸೇರಿದಂತೆ ಕೆಲವು ವಿಚಾರಗಳಲ್ಲಿ ದಯೆಯ ಅಂಶ ಎಲ್ಲಿದೆ ಎಂದು ಪ್ರಶ್ನಿಸಿದ ಸಿ.ಟಿ.ರವಿ, ರಾಯರೆಡ್ಡಿ ಅವರು ಕುರಾನ್ ಅನ್ನು ನಿಜವಾಗಿಯೂ ಅಧ್ಯಯನ ಮಾಡಿದ್ದರೆ ತಮ್ಮ ಹೇಳಿಕೆಯನ್ನು ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದರು.

ಕುರಾನ್ ಅಧ್ಯಯನ ಮಾಡದೆ ಕೇವಲ ತೋರಿಕೆಗಾಗಿ ಇಂತಹ ಹೇಳಿಕೆ ನೀಡುವುದು ಅಜ್ಞಾನದ ಪರಾಕಾಷ್ಠೆ. ಇಂತಹ ಹೇಳಿಕೆ ನೀಡುವವರು ಉನ್ನತ ಶಿಕ್ಷಣ ಸಚಿವರಾಗಿರುವುದು ದುರಂತ ಎಂದು ಟೀಕಿಸಿದರು.

(ಸಿಟಿ ರವಿ ಫೋಟೋ ಬಳಸುವುದು)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿವ ನೀರಿನ ಸಮಸ್ಯೆ ನೀಗಿಸುವಂತೆ ಒತ್ತಾಯಿಸಿ ಪ್ರತಿಭಟನೆ
ಬಾಚೇನಹಳ್ಳಿ ಶಾಲೆಯನ್ನು ಕೆಪಿಎಸ್ ಶಾಲೆಯಾಗಿ ಅಭಿವೃದ್ಧಿ ಪಡಿಸಲು ಆಗ್ರಹ