ಶೈಕ್ಷಣಿಕ, ಸಾಮಾಜಿಕ ಸಮಾನತೆಯ ಹರಿಕಾರ ಬಸವಣ್ಣ: ಶಿವಾನಂದ ದೇವರು

KannadaprabhaNewsNetwork |  
Published : May 10, 2024, 11:48 PM IST
ಚಿತ್ರ: 10ಬಿಡಿಆರ್‌3ಹುಲಸೂರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವ ವಿಶ್ವ ಗುರು ಬಸವಣ್ಣನವರ ಜಯಂತಿಯ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದ ಶಿವಾನಂದ ದೇವರು ಹಾಗೂ ಬಸವ ಅನುಯಾಯಿಗಳು | Kannada Prabha

ಸಾರಾಂಶ

ಬಸವಣ್ಣನವರ 891ನೇ ಜಯಂತಿ ಆಚರಣೆ ಅಂಗವಾಗಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವ ವಿಶ್ವ ಗುರು ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪೂಜೆ

ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪೂಜೆ ಸಲ್ಲಿಸಿ ಆಶೀರ್ವಚನ

ಕನ್ನಡಪ್ರಭ ವಾರ್ತೆ ಹುಲಸೂರ

ಬಸವಣ್ಣನವರು ಧಾರ್ಮಿಕ ಸುಧಾರಕರಲ್ಲದೆ ಕಾಯಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಮಾನತೆ ತಂದುಕೊಟ್ಟ ಅಭಿವೃದ್ಧಿ ಹರಿಕಾರ ಎಂದು ಸಾಯಗಾಂವ್‌ ಗುರು ಬಸವೇಶ್ವರ ವಿರಕ್ತ ಮಠದ ಪೀಠಾಧಿಪತಿ ಶಿವಾನಂದ ದೇವರು ತಿಳಿಸಿದರು.

ಬಸವಣ್ಣನವರ 891ನೇ ಜಯಂತಿ ಆಚರಣೆ ಅಂಗವಾಗಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವ ವಿಶ್ವ ಗುರು ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಮಾತನಾಡಿ, 12ನೇ ಶತಮಾನದಲ್ಲಿ ಜಗತ್ತು ಅಂಧಕಾರದಲ್ಲಿ ಮುಳುಗಿತ್ತು ಆದರೆ ಭಾರತದಲ್ಲಿ ಜ್ಞಾನ ದೀವಿಗೆ ಬೆಳಗುವ ಮೂಲಕ ಬಸವಣ್ಣ ಹಾಗೂ ಸಮಕಾಲೀನ ಶರಣರು ವಚನ ಬರೆಯುವ ಮೂಲಕ ಜನರಲ್ಲಿ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದರು.ಬಡತನ ಹೋಗಲಾಡಿಸಲು ಕಾಯಕ ವ್ಯವಸ್ಥೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರ್ಥಿಕ ಸುಧಾರಣೆ ತಂದರು, ಜಾತಿ, ಲಿಂಗ ಭೇದ ಹೋಗಲಾಡಿಸಲು ಅಂತರ್ಜಾತಿ ವಿವಾಹ ಹಾಗೂ ಅನುಭವ ಮಂಟಪದಲ್ಲಿ ಮಹಿಳಾ ಸಮಾನತೆ ತಂದರು. ಹಸಿವೆಯಿಂದ ಯಾರೊಬ್ಬರು ಬಳಲಬಾರದೆಂದು ದಾಸೋಹ ವ್ಯವಸ್ಥೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರಯತ್ನಿಸಿದರು.

ಮೌಢ್ಯಾಚರಣೆ ಅಲ್ಲಗಳೆದು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಬಸವಣ್ಣನವರು ಮಾಡಿದರು ಎಂದು ಸಾಯಗಾಂವ್‌ ಗುರು ಬಸವೇಶ್ವರ ವಿರಕ್ತ ಮಠದ ಪೀಠಾಧಿಪತಿ ಶಿವಾನಂದ ದೇವರು ತಿಳಿಸಿದರು.

ಪಟ್ಟಣದ ಮುಖ್ಯ ರಸ್ತೆ, ಹಾಗೂ ಗಣೇಶ ನಗರದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಬಸವ ಜಯಂತಿ ಆಚರಣೆ ಅಂಗವಾಗಿ ಪ್ರಸಾದ ವ್ಯವಸ್ಥೆ ಮಾಡಿದರು.

ಬಸವರಾಜ ಡೋಣಗಾಂವಕರ್‌, ಜಾಗತಿಕ ಲಿಂಗಾಯತ ಮಹಾ ಸಭೆಯ ತಾಲೂಕು ಅಧ್ಯಕ್ಷ ಪ್ರವೀಣ್ ಕಾಡಾದಿ, ಕ.ಜಾ.ಪ ತಾಲೂಕು ಅಧ್ಯಕ್ಷ ಶಿವರಾಜ ಖಫಲೆ, ಆಕಾಶ ಖಂಡಾಳೆ, ಕಸಾಪ ನಗರ ಅಧ್ಯಕ್ಷ ಸಚಿನ ಕೌಟೆ, ದೇವಿಂದ್ರ ಭೊಪಳೆ, ಶ್ರೀಶೈಲ ಹಾರಕೂಡೆ, ಶಿವಾನಂದ ಪಟ್ನೆ, ಸಂತೋಷ ಪಟ್ನೆ, ರಾಜಕುಮಾರ ತೊಂಡಾರೆ, ಲೊಹಿತ, ದೇವಿಂದ್ರ ಪವಾರ್‌, ರಾಜಕುಮಾರ ಜಾಧವ್‌, ದಯಾನಂದ ನಿಮ್ಮಾಣೆ, ಲೋಕೇಶ ಧಬಾಲೆ, ಸಚಿನ ವಗ್ಗೆ, ನಾಗೇಶ ನಿಲಂಗೆ ರಮೇಶ ಭೊಪಳೆ, ದತ್ತು ರಾಘವ, ನಾಗರಾಜ ಕೊರೆ, ಆನಂದ, ಕಲ್ಯಾಣಿ ದಾನ, ವಿವೇಕ ಮುಸ್ತಾಪೂರೆ, ಶೇಖರ ಪಾಂಚಾಳ ಸೇರಿದಂತೆ ಬಸವ ಅನುಯಾಯಿಗಳು ಪಾಲ್ಗೊಂಡಿದ್ದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?