ದುಡಿವ ಜನರ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಣ್ಣ

KannadaprabhaNewsNetwork |  
Published : May 01, 2025, 12:45 AM IST
50 | Kannada Prabha

ಸಾರಾಂಶ

ಮಾಜದಲ್ಲಿರುವ ಮೂಢನಂಬಿಕೆ ಅಸ್ಪೃಶ್ಯತೆ, ಜಾತಿ ವರ್ಗ ಹಾಗೂ ಚಾತುವರ್ಣ ಸಿದ್ದಾಂತ ವಿರೋಧಿಸಿ ಸಮಾನತೆಯ ಸಂದೇಶ ಸಾರಿದ ಬಸವಣ್ಣನವರು ವಿಶ್ವ ಗುರುವಾಗಿದ್ದು

ಕನ್ನಡಪ್ರಭ ವಾರ್ತೆ ಕೆ.ಆರ್. ನಗರಬಸವಣ್ಣನವರು ಕಾಯಕ ಸಿದ್ದಾಂತ ಭೋದಿಸಿ ದುಡಿಯುವ ಜನರ ಸಮಾಜ ನಿರ್ಮಾಣ ಮಾಡಲು ಶ್ರಮಿಸಿದ ಮಹಾನ್ ಪುರುಷ ಇವರ ತತ್ವ ಮತ್ತು ಆರ್ದಶಗಳನ್ನು ಯುವ ಜನತೆ ಮೈಗೂಡಿಸಿಕೊಂಡಾಗ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು. ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿರುವ ಬಸವಣ್ಣನವರ ದೇವಾಲಯದ ಆವರಣದಲ್ಲಿ ತಾಲೂಕು ಆಡಳಿತ, ತಾಪಂ ಮತ್ತು ಪುರಸಭೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕರ್ನಾಟಕ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜದಲ್ಲಿರುವ ಮೂಢನಂಬಿಕೆ ಅಸ್ಪೃಶ್ಯತೆ, ಜಾತಿ ವರ್ಗ ಹಾಗೂ ಚಾತುವರ್ಣ ಸಿದ್ದಾಂತ ವಿರೋಧಿಸಿ ಸಮಾನತೆಯ ಸಂದೇಶ ಸಾರಿದ ಬಸವಣ್ಣನವರು ವಿಶ್ವ ಗುರುವಾಗಿದ್ದು, 12ನೇ ಶತಮಾನದ ಅವರ ವಚನಗಳು ಮನುಕುಲಕ್ಕೆ ದಾರಿ ದೀಪವಾಗಿದ್ದು, ಇದನ್ನು ಜನತೆ ಅರಿತು ನಡೆಯಬೇಕೆಂದರು. ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿರುವ ದೇವಿರಮ್ಮ ಶಿಶುವಿಹಾರ ಮೈದಾನದಲ್ಲಿ ಹಿರಿಯ ನಾಗರೀಕರು ಮತ್ತು ಸಾರ್ವಜನಿಕರು ವಾಯುವಿಹಾರ ಮಾಡಿ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಅಭಿವೃದ್ದಿ ಪಡಿಸುವ ಸಲುವಾಗಿ ಪುರಸಭೆ ವತಿಯಿಂದ 50 ಲಕ್ಷ ರು. ಅನುದಾನವನ್ನು ಮೀಸಲಿರಿಸಲಾಗಿದೆ ಎಂದು ಮಾಹಿತಿ ನೀಡಿದರು. ಬಸವೇಶ್ವರ ಮಹಿಳಾ ಸ್ವ-ಸಹಾಯ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಅನುದಾನ ನೀಡುವಂತೆ ಸಂಘದವರು ಮನವಿ ಸಲ್ಲಿಸಿದ್ದು, ಮೊದಲ ಹಂತದಲ್ಲಿ ಶಾಸಕರ ನಿಧಿಯಿಂದ 5 ಲಕ್ಷ ಬಿಡುಗಡೆ ಮಾಡಲಾಗಿದೆ, ಬಡಾವಣೆಯ ಸವಾಂರ್ಗೀಣ ಅಭಿವೃದ್ದಿಗೆ ನೀಲಿ ನಕ್ಷೆ ತಯಾರು ಮಾಡಲಾಗಿದ್ದು, ಅಭಿವೃದ್ದಿ ಕೆಲಸ ಮಾಡಲು ಸ್ಥಳೀಯರು ಸಹಕಾರ ನೀಡಬೇಕು ಎಂದು ಕೋರಿದರು. ತಹಸೀಲ್ದಾರ್ ಜಿ. ಸುರೇಂದ್ರಮೂರ್ತಿ, ಪುರಸಭೆ ಅಧ್ಯಕ್ಷ ಶಿವುನಾಯಕ್, ವೀರಶೈವ ಮಹಾ ಸಭಾದ ಅಧ್ಯಕ್ಷ ಕೆಂಪರಾಜು ಮಾತನಾಡಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಹೇಶ್, ನಿರ್ದೇಶಕ ಸೈಯದ್ ಜಾಬೀರ್, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ. ರವಿಕುಮಾರ್, ಪುರಸಭೆ ಸದಸ್ಯರಾದ ಪ್ರಕಾಶ್, ಶಂಕರ್‌ ಸ್ವಾಮಿ, ಮಂಜುಳ ಚಿಕ್ಕವೀರು, ಮಾಜಿ ಸದಸ್ಯ ಕೆ. ವಿನಯ್, ಬಿಜೆಪಿ ಅಧ್ಯಕ್ಷ ಸಾ.ರಾ. ತಿಲಕ್, ಕಾಂಗ್ರೆಸ್ ನಗರಾಧ್ಯಕ್ಷ ಎಂ.ಜೆ. ರಮೇಶ್, ಮುಖಂಡರಾದ ತಿಮ್ಮಶೆಟ್ಟಿ, ರಾಜಶೇಖರ್, ಅರುಣ್ ಬಿ. ನರಗುಂದ್, ಚಂದ್ರಶೇಖರ್, ರೇಖಾರವೀಂದ್ರ, ಮನೋಹರಿ ನಾಗರಾಜ್, ಸಣ್ಣಲಿಂಗಪ್ಪ, ಎಂ.ಜೆ. ಕುಮಾರ್, ಕೆ.ಸಿ. ಹರೀಶ್, ಕೆ.ಟಿ. ರವೀಂದ್ರ, ಕೆ.ಎನ್.ಮಾದೇಶ್, ವೃಷಬೇಂದ್ರ, ಬಿಇಒ ಆರ್. ಕೃಷ್ಣಪ್ಪ, ಮುಖ್ಯಾಧಿಕಾರಿ ಬಿ.ವಿ. ವೆಂಕಟೇಶ್, ಸಮಾಜ ಕಲ್ಯಾಣಾಧಿಕಾರಿ ಶಂಕರ್‌ ಮೂರ್ತಿ ಇದ್ದರು. ----------------

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು