ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನಲ್ಲಿ ಬಯಲು ಸೀಮೆ ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ, ತಾಲೂಕು ಕುರುಬ ಸಮಾಜದ ಕಾರ್ಯಾಧ್ಯಕ್ಷ ಧರ್ಮಪ್ಪ ನೇತೃತ್ವದಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ವಡ್ಡಿನಕೆರೆ ಹಳ್ಳಿದ ಪಕ್ಕದಲ್ಲಿರುವ ಸುಮಾರು 38 ಗುಂಟೆ ಜಾಗ ಉದ್ಯಾನಕ್ಕೆ ಕಾಯ್ದಿರಿಸಿದ್ದು ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟಿರುವ ಸಿ.ಎ. ಸೈಟ್‌ನಲ್ಲಿ ಕನಕಭವನ, ಶಿಕ್ಷಣ ಸಂಸ್ಥೆಗಳ ನಿರ್ಮಾಣಕ್ಕೆ ಕನಕ ಗುರುಪೀಠದ ಹೆಸರಿಗೆ ಮಂಜೂರು ಮಾಡುವಂತೆ, ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಅನುಮೋದನೆ ನೀಡಲು ಸರ್ಕಾರದ ಸದನ ಸಮಿತಿಗೆ ಪ್ರಸ್ತಾವನೆ ಸಲ್ಲಿಸಲು ಪುರಸಭೆ ಅಂದಿನ ಆಡಳಿತಾಧಿಕಾರಿ 2024ರ ಫೆಬ್ರವರಿ 16ರಂದೇ ಸಭಾ ನಡಾವಳಿ ಮಾಡಿದ್ದರು ಎಂದು ತಿಳಿಸಿದರುಆದರೆ ಇದೀಗ ಅದೇ ಜಾಗದಲ್ಲಿ ಏಕಾಎಕಿಯಾಗಿ ಹಾಲಿ ಶಾಸಕರ ಪುತ್ರರೊಂದಿಗೆ ಸೇರಿ ಬಸವಣ್ಣನವರ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿರುವುದರ ಉದ್ದೇಶವೇನು? ಎಂದು ಪ್ರಶ್ನಿಸಿದರು
ಬಯಲುಸೀಮೆ ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಈ ಹಿಂದೆ ಶಾಸಕ ಡಿ.ಜಿ.ಶಾಂತನಗೌಡರೇ ಪ್ರಸ್ತಾಪಿಸಿರುವಂತೆ ಗೊಲ್ಲರಹಳ್ಳಿ ವೃತ್ತ ಅಥವಾ, ತಾಲೂಕು ಕಚೇರಿ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಸಮೀಪ ಬಸವಣ್ಣನ ಪುತ್ಥಳಿ ನಿರ್ಮಿಸಲಿ ಇದಕ್ಕೆ ನಾವೂ ಕೂಡ ಕೈ ಜೋಡಿಸುತ್ತೇವೆ ಎಂದರು.
ಸಮಾಜದ ಕಾರ್ಯಾಧ್ಯಕ್ಷ ಆರುಂಡಿ ಪ್ರಕಾಶ್, ಉಪಾಧ್ಯಕ್ಷ ಕೆ.ಪುಟ್ಟಪ್ಪ,ಬೆನಕಪ್ಪ,ಮೂಲಿ ರೇವಣಸಿದ್ದಪ್ಪ, ಖಜಾಂಚಿ ನರಸಿಂಹಪ್ಪ,ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ರಾಘವೇಂದ್ರ, ಗ್ಯಾರಂಟಿ ಸಮಿತಿ ಸದಸ್ಯ ಮಂಜುನಾಥ ಮಾಳಕ್ಕಿ,ಅಶೋಕ್, ಸತ್ತಿಗೆ ರಾಜಪ್ಪ,ಎಚ್.ಬಿ.ಅಣ್ಣಪ್ಪ ಇತರರು ಇದ್ದರು.