ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘದಿಂದ ಕ್ಯಾಲೆಂಡರ್ ಬಿಡುಗಡೆ

KannadaprabhaNewsNetwork | Published : Dec 28, 2024 12:45 AM

ಸಾರಾಂಶ

Basavashri Employees' Cooperative Society releases calendar

-3 ಜಿಲ್ಲೆಗಳಲ್ಲಿ 11 ಶಾಖೆ ಪ್ರಾರಂಭ ಮಾಡಿ, ಎಲ್ಲಾ ಶಾಖೆಗಳು ಲಾಭದತ್ತ ಹೆಜ್ಜೆ

------

ಕನ್ನಡಪ್ರಭ ವಾರ್ತೆ ಹುಣಸಗಿ

ಪಟ್ಟಣದಲ್ಲಿ ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘ ಮಾನವಿ ಶಾಖೆ ಹುಣಸಗಿ ವತಿಯಿಂದ 2025ನೇ ಸಾಲಿನ ಕ್ಯಾಲೆಂಡರ್ ಅನ್ನು ಸದಸ್ಯ ಹಾಗೂ ಮುಖಂಡರಿಂದ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಶಾಖಾ ವ್ಯವಸ್ಥಾಪಕ ರುದ್ರಗೌಡ ಕಾಸರೆಡ್ಡಿ ಮಾತನಾಡಿ, 2002-03ರಲ್ಲಿ ಸಂಸ್ಥಾಪಕ ಅಧ್ಯಕ್ಷ ಡಾ. ಶಂಕರಗೌಡ ಎಸ್. ಪಾಟೀಲ್ ಅಧ್ಯಕ್ಷತೆಯಲ್ಲಿ ಸಂಘವು ಮೊದಲು ಸಮಾನ ಮನಸ್ಕರ ಸದಸ್ಯರೊಂದಿಗೆ ಪ್ರಾರಂಭಗೊಂಡು ಸಂಘವು ಸತತ 22 ವರ್ಷಗಳಿಂದ ಲಾಭದಲ್ಲಿದೆ. 2024ರ ನವೆಂಬರ್ 30ಕ್ಕೆ ಸಂಘವು 500 ಕೋಟಿ ವ್ಯವಹಾರ ಹೊಂದಿರುತ್ತದೆ. ಸಂಘವು 3 ಜಿಲ್ಲೆಗಳಲ್ಲಿ 11 ಶಾಖೆಗಳನ್ನು ಪ್ರಾರಂಭ ಮಾಡಿ, ಎಲ್ಲಾ ಶಾಖೆಗಳು ಲಾಭವನ್ನು ಹೊಂದಿರುತ್ತವೆ ಎಂದು ತಿಳಿಸಿದರು.

ನಮ್ಮ ಸಂಘವು ಪ್ರಾರಂಭದಿಂದ ಸದಸ್ಯರಿಗೆ ಹಾಗೂ ಗ್ರಾಹಕರಿಗೆ ತಮ್ಮ ದಿನಚರಿಯನ್ನು ತಿಳಿಯಲು ಸಂಘದ ಹೆಸರಿನ ಕ್ಯಾಲೆಂಡರ್ ಗಳನ್ನು ವಿತರಿಸಲಾಗುತ್ತದೆ. ಈ ವರ್ಷವು 12,000ಕ್ಕಿಂತ ಹೆಚ್ಚು ಕ್ಯಾಲೆಂಡರ್ ಮುದ್ರಿಸಿ, ಸಾರ್ವಜನಿಕರಿಗೆ ವಿತರಿಸಲಾಗುತ್ತದೆ ಅದರಂತೆ ಈ ವರ್ಷ ಹುಣಸಗಿ ಶಾಖೆಯಲ್ಲಿ ಸಂಘದ ಸದಸ್ಯರಿಂದ 2025ನೇ ಕ್ಯಾಲೆಂಡರ್ ಗಳನ್ನು ಸದಸ್ಯ ಹಾಗೂ ಮುಖಂಡರಿಂದ ಬಿಡುಗಡೆಗೊಳಿಸಲಾಯಿತು ಎಂದು ಹೇಳಿದರು.

ಬಿಜೆಪಿ ಮುಖಂಡ ಸಂಗಣ್ಣ ವೈಲಿ, ಗುರಣ್ಣಗೌಡ ಗುಳಬಾಳ, ಗೌಡಪ್ಪಗೌಡ, ಶಿವರಾಜ ಅಂಗಡಿ, ಚಂದ್ರಶೇಖರ್ ಕಲ್ಲದೇವನಹಳ್ಳಿ, ನಿಂಗಾರೆಡ್ಡಿ, ಸಂಗನಗೌಡ, ಮನೋಹರ ಪತ್ತಾರ, ಪರಶು, ಅಪ್ಪ ದೇಸಾಯಿ, ರಾಕೇಶ ಬಳೂರ್ಗಿ, ಸಂಗಮೇಶ ಹಿರೇಮಠ, ಪ್ರಾಣೇಶ ದೇಶಪಾಂಡೆ, ವಸಂತ ಪತ್ತಾರ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವೀರೇಶ ಹೊಸೂರ, ಸಿಬ್ಬಂದಿ ಶೇಖರಗೌಡ, ಶ್ರೀಕಾಂತ, ಪ್ರವೀಣ ಇದ್ದರು.

---

27ವೈಡಿಆರ್11: ಹುಣಸಗಿಯಲ್ಲಿ ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘ ನಿಯಮಿತ ಮಾನವಿ ಶಾಖೆ ಹುಣಸಗಿಯಿಂದ 2025ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

Share this article