ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬಸವೇಶ್ವರ ಜಯಂತಿ

KannadaprabhaNewsNetwork |  
Published : May 10, 2024, 11:50 PM IST
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ  ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ  | Kannada Prabha

ಸಾರಾಂಶ

ಸಮಾನತೆಯ ಹರಿಕಾರ ಬಸವಣ್ಣ ೧೨ನೇ ಶತಮಾನದಲ್ಲಿಯೇ ಜಾತಿ ಪದ್ಧತಿ ಹಾಗೂ ಮೌಢ್ಯ, ಕಂದಚಾರಗಳ ವಿರುದ್ಧ ಹೋರಾಟ ಮಾಡಿದ ಮಹಾ ಪುರುಷರು ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಮಾನತೆಯ ಹರಿಕಾರ ಬಸವಣ್ಣ ೧೨ನೇ ಶತಮಾನದಲ್ಲಿಯೇ ಜಾತಿ ಪದ್ಧತಿ ಹಾಗೂ ಮೌಢ್ಯ, ಕಂದಚಾರಗಳ ವಿರುದ್ಧ ಹೋರಾಟ ಮಾಡಿದ ಮಹಾ ಪುರುಷರು ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಬಣ್ಣಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಇಂದಿನ ಸಂಸತ್ ಭವನ ಹಾಗೂ ವಿಧಾನಸೌಧ ಅಂದು ಬಸವಣ್ಣ ಹಾಕಿಕೊಟ್ಟ ಪರಿಕಲ್ಪನೆಯಾಗಿದೆ. ಅನುಭವ ಮಂಟಪವನ್ನು ಸ್ಥಾಪನೆ ಮಾಡಿ, ಎಲ್ಲಾ ಜಾತಿ ವರ್ಗಗಳಿಗೆ ಅವಕಾಶ ಕಲ್ಪಿಸಿಕೊಡುವ ಮೂಲಕ ಸಮ ಸಮಾಜ ನಿರ್ಮಾಣ ಮಾಡಲು ಶ್ರಮಿಸಿದರು. ಬಸವಣ್ಣ ಜಯಂತಿ ಆಚರಣೆ ಮಾಡುವ ಜೊತೆಗೆ ಅವರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಮೈಗೂಡಿಸಿಕೊಂಡು ಅವರ ಅಶಯದಂತೆ ನಡೆಯೋಣ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸವಣ್ಣ ವಿಶ್ವ ಮಾನವ, ಜಗತ್ತಿಗೆ ಸಮಸಮಾಜ ನಿರ್ಮಾಣ ಮಾಡುವ ಕನಸು ಕಂಡು ಅದರಂತೆ ನಡೆಯಲು ಮುಂದಾದರು. ಸ್ತ್ರೀಸಮಾನತೆ ಮತ್ತು ಮೌಢ್ಯದ ವಿರುದ್ಧ ಜಾಗೃತಿ ಮೂಡಿಸಿದರು. ಬಸವಾಧಿ ಶರಣರು ತಮ್ಮ ವಚನಗಳ ಮೂಲಕ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಹೊರಟವರು. ಸರಳವಾಗಿ ಎಲ್ಲರಿಗೂ ಅರ್ಥವಾಗಿ ಮಾದರಿಯಲ್ಲಿ ವಚನಳನ್ನು ರಚನೆ ಮಾಡಿ, ಜನರಲ್ಲಿ ಧರ್ಮ ಜಾಗೃತಿ ಮೂಡಿಸಿದರು. ಸರ್ವರಿಗೂ ಒಳ್ಳೆಯದನ್ನು ಬಯಸುವ ಧರ್ಮವನ್ನು ರಚನೆ ಮಾಡಿದರು. ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನಮ್ಮೆಲ್ಲರ ಪುಣ್ಯ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ್, ಆರ್.ಮಹದೇವ್, ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಮಹಮದ್ ಅಸ್ಗರ್, ಅರಕಲವಾಡಿ ಗುರುಸ್ವಾಮಿ, ಎಪಿಎಂಸಿ ಅಧ್ಯಕ್ಷ ಸೋಮೇಶ್, ನಿರ್ದೇಶಕ ಆಲೂರು ಪ್ರದೀಪ್, ಮುಖಂಡರಾದ ಅಯ್ಯನಪುರ ಶಿವಕುಮಾರ್, ನಾಗವಳ್ಳಿ ನಾಗಯ್ಯ, ಸೈಯದ್ ರಫಿ, ಶಿವಮೂರ್ತಿ, ಕಾಗಲವಾಡಿ ಚಂದ್ರು, ಚಾಮುಲ್ ನಿರ್ದೇಶಕ ರೇವಣ್ಣ, ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಅಫ್ಜಲ್ ಷರೀಪ್, ಸುಹೇಲ್ ಆಲಿ ಖಾನ್, ಸೇವಾದಳದ ಅಧ್ಯಕ್ಷ ಹೊಂಗನೂರು ಜಯರಾಜ್, ರವಿಗೌಡ, ಹೆಬ್ಬಸೂರು ರಂಗಸ್ವಾಮಿ, ವೀರಭದ್ರಸ್ವಾಮಿ, ಚಂಗುಮಣಿ, ಮಹದೇವಸ್ವಾಮಿ, ಪಿ.ಶೇಖರ್, ರೂಪೇಶ್, ಸಿ.ಕೆ. ರವಿಕುಮಾರ್, ಕುಮಾರ್, ಪ್ರಥ್ವಿ ಹಾಜರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ