ಧಾರವಾಡ: ಇಲ್ಲಿಯ ಶಾಂತಿ ಸದನ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತಾಲೂಕು ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯದಲ್ಲಿ ವಿವಿಧ ಶಾಲೆಗಳು ಉತ್ತಮ ಸಾಧನೆ ಮಾಡಿವೆ.
ಮುಖ್ಯ ಅತಿಥಿಗಳಾಗಿ ಶಿಕ್ಷಣ ಇಲಾಖೆಯ ವಿಜಯಲಕ್ಷ್ಮಿ ಕಮ್ಮಾರ ಆಗಮಿಸಿ ಪಂದ್ಯದಲ್ಲಿ ಮಕ್ಕಳು ಸೋಲು-ಗೆಲುವು ಸಮಾನಾಂತರವಾಗಿ ಪಡೆಯಬೇಕು. ಸೋತವರು ಕುಗ್ಗದೇ ಗೆಲುವಿನತ್ತ ಚಿತ್ತಹರಿಸಬೇಕು, ಗೆದ್ದವರು ಮುಂದಿನ ಗೆಲುವಿಗಾಗಿ ಶ್ರಮ ಪಡಬೇಕು ಎಂದು ಹೇಳಿದರು.
ಸಾಯಿ ಸ್ಪೋರ್ಟ್ಸನ ಬಾಸ್ಕೆಟ್ ಬಾಲ್ ನಿವೃತ್ತ ತರಬೇತಿದಾರ ರಾಜು ಮುಖಾಶಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಯಾವಾಗಲೂ ಕ್ರೀಡಾ ಸ್ಫೂರ್ತಿ ಜಾಗೃತವಾಗಿರಬೇಕು ಎಲ್ಲ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದರು.ಶಾಂತಿಸದನ ಪ್ರೌಢಶಾಲೆಯ ವ್ಯವಸ್ಥಾಪಕರಾದ ಸಿಸ್ಟರ್ ಫಾತಿಮಾ, ಮುಖ್ಯೋಪಾದ್ಯಾಯರಾದ ಸಿಸ್ಟರ್ ಫಿಲೋಮೆನಾ, ವಿದ್ಯಾರ್ಥಿಗಳು ಪಾಠದ ಜೊತೆಗೆ ಆಟದಲ್ಲಿ ಭಾವಹಿಸಿ ರಾಷ್ಟ್ರಮಟ್ಟದಲ್ಲಿ ವಿಜೇತರಾಗಿ ಪಾಲಕರು ಹಾಗೂ ಶಾಲೆಯ ಹೆಸರು ತರಬೇಕೆಂದರು.
ದೈಹಿಕ ಶಿಕ್ಷಣ ಶಿಕ್ಷಕ ಡ್ಯಾನಿಯಲ್ ಕುಮಾರ, ಶಿವು ಬೊಂಗಾಳೆ, ಮಹಾಂತೇಶ ಪಾಟೀಲ, ಗಂಗಾಧರ ಕೊಲ್ಲೂರ, ಇಮಾನುವೆಲ್ ಚಲ್ಲಾ, ಸೈಮನ್ ಕ್ರಾಸ್ತಾ ಇದ್ದರು.ಅಕ್ಷತಾ ಬೆನ್ನೂರ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಪಟ್ಟಣದವರ ವಂದಿಸಿದರು.