ಬಿಡಿಎ ಫ್ಲ್ಯಾಟ್‌ ಮೇಳ: 150 ಮನೆಗಳು ಮಾರಾಟ

KannadaprabhaNewsNetwork |  
Published : Jun 16, 2024, 01:48 AM ISTUpdated : Jun 16, 2024, 07:14 AM IST
ಬಿಡಿಎ | Kannada Prabha

ಸಾರಾಂಶ

ಬಿಡಿಎ ಫ್ಲ್ಯಾಟ್‌ ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. 150 ಫ್ಲ್ಯಾಟ್‌ ಮಾರಾಟ ಆಗಿದೆ.

 ಬೆಂಗಳೂರು :  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕೋನದಾಸಪುರ ವಸತಿ ಸಮುಚ್ಚಯದಲ್ಲಿ ಶನಿವಾರ ಆಯೋಜಿಸಿದ್ದ ‘ಫ್ಲ್ಯಾಟ್ ಮೇಳ’ಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, 150 ಮನೆಗಳು ಸ್ಥಳದಲ್ಲೇ ಮಾರಾಟವಾಗಿವೆ.

‘ಫ್ಲ್ಯಾಟ್ ಮೇಳ’ದಲ್ಲಿ ನಾಗರಬಾವಿ ಚಂದ್ರಾ ಬಡಾವಣೆಯಲ್ಲಿನ 3 ಬಿಎಚ್‍ಕೆ ಫ್ಲ್ಯಾಟ್‍ಗಳಲ್ಲಿ ಕೆಲವು ಫ್ಲ್ಯಾಟ್‍ಗಳು ಮಾತ್ರ ಹಂಚಿಕೆಗೆ ಲಭ್ಯವಿದ್ದು, ಉಳಿದ ಫ್ಲ್ಯಾಟ್‍ಗಳು ಮಾರಾಟವಾಗಿವೆ. ಕಣಿಮಿಣಿಕೆಯಲ್ಲಿನ 2 ಬಿಎಚ್‍ಕೆ ಫ್ಲ್ಯಾಟ್‍ಗಳು ಮತ್ತು ಕೋನದಾಸಪುರ ಹಂತ-2ರ (2 ಬಿಎಚ್‍ಕೆ) ‘ಎಫ್’ ಬ್ಲಾಕ್‍ನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮನೆಗಳು ಲಭ್ಯವಿದ್ದು, ಮೊದಲು ಬಂದವರಿಗೆ ಆದ್ಯತೆಯ ಮೇರೆಗೆ ಹಂಚಿಕೆ ಮಾಡಲಾಗಿದೆ.

ಮೇಳವು ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ನಡೆಯಿತು. ಪೂರ್ವಾಹ್ನದಲ್ಲಿಯೇ ಅತಿ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದು, ಫ್ಲ್ಯಾಟ್ ಮೇಳದಲ್ಲಿ ಒಟ್ಟಾರೆಯಾಗಿ 150 ಫ್ಲ್ಯಾಟ್‌ಗಳು ಸ್ಥಳದಲ್ಲಿಯೇ ಮಾರಾಟವಾಗಿವೆ. ಈ ಪೈಕಿ 75 ಹಂಚಿಕೆದಾರರು ಹಂಚಿಕೆ ಪತ್ರವನ್ನು ಸ್ವೀಕರಿಸಿದ್ದಾರೆ. ಬಾಕಿ 75 ಫ್ಲ್ಯಾಟ್‍ಗಳ ಖರೀದಿದಾರರು ತಾಂತ್ರಿಕ ಕಾರಣಗಳಿಂದ ಆನ್‍ಲೈನ್ ಮೂಲಕ ಹಣ ಪಾವತಿಸಲಾಗದೆ ಚೆಕ್ ನೀಡಿದ್ದಾರೆ. ಮುಂದಿನ ವಾರ ಕಚೇರಿ ಸಮಯದಲ್ಲಿ ಆನ್‍ಲೈನ್ ಮೂಲಕ ಹಣ ಪಾವತಿಸಿದವರಿಗೆ ಚೆಕ್ ಹಿಂದಿರುಗಿಸಿ ಹಂಚಿಕೆ ಪತ್ರ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಈ ಫ್ಲ್ಯಾಟ್ ಮೇಳದಲ್ಲಿ ಸುಮಾರು ಎಂಟು ಬ್ಯಾಂಕ್‍ಗಳು ಭಾಗವಹಿಸಿದ್ದು, ಪ್ರತಿ ಬ್ಯಾಂಕ್‍ಗೆ ಸಾಲ ಸೌಲಭ್ಯಕ್ಕಾಗಿ ಸುಮಾರು 15 ಅರ್ಜಿಗಳು ಸ್ವೀಕೃತಗೊಂಡಿವೆ. ಫೆಬ್ರವರಿ ತಿಂಗಳ ಫ್ಲ್ಯಾಟ್ ಮೇಳದಲ್ಲಿ ಮಾರಾಟವಾದ 50 ಫ್ಲ್ಯಾಟ್‍ಗಳಿಗೆ ಈಗಾಗಲೇ ಶುದ್ಧ ಕ್ರಯಪತ್ರವನ್ನು ನೋಂದಾಯಿಸಲಾಗಿದೆ ಎಂದು ಬಿಡಿಎ ಅಧಿಕಾರಿಗಳು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜ್ಞಾನದ ಭರಾಟೆಯಲ್ಲಿ ಸಾಗುತ್ತಿದೆ ಜಗತ್ತು
ಜಮಖಂಡಿ ತಾಲೂಕಿನಲ್ಲಿ 8818 ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳು