ಮಾಗಡಿ: ಬಿಡಿಸಿಸಿ ಬ್ಯಾಂಕ್ ಅಲ್ಪಸಂಖ್ಯಾತ ಮಹಿಳೆಯರಿಗೆ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಚ್.ಎನ್.ಅಶೋಕ್ ಹೇಳಿದರು.
ಮಾಗಡಿ: ಬಿಡಿಸಿಸಿ ಬ್ಯಾಂಕ್ ಅಲ್ಪಸಂಖ್ಯಾತ ಮಹಿಳೆಯರಿಗೆ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಚ್.ಎನ್.ಅಶೋಕ್ ಹೇಳಿದರು.
ಪಟ್ಟಣದ ಬಿಡಿಸಿಸಿ ಬ್ಯಾಂಕ್ ಸಭಾಂಗದಲ್ಲಿ ರಾಜ್ಯ ಸಹಕಾರ ಮಹಾಮಂಡಲಿ, ಬೆಂಗಳೂರು ದಕ್ಷಿಣ ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಸಹಕಾರ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಅಲ್ಪಸಂಖ್ಯಾತರ ಸಹಕಾರ ಸಂಘಗಳ ಪದಾಧಿಕಾರಿಗಳ ಮತ್ತು ಸಿಇಒಗಳಿಗೆ ವಿಭಾಗ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಲ್ಪಸಂಖ್ಯಾತರು ಸಹಕಾರ ಸ್ವಸಹಾಯ ಸಂಘಗಳನ್ನು ರಚಿಸಿಕೊಂಡರೆ ಆರ್ಥಿಕ ಬೆಳವಣಿಗೆಗೆ ಪೂರಕವಾಗುತ್ತದೆ. ಅಲ್ಪಸಂಖ್ಯಾತ ಮಹಿಳೆಯರು ಕನಿಷ್ಠ 10 ಗರಿಷ್ಠ 20 ಸದಸ್ಯರೊಳಗೊಂಡ ಗುಂಪುಗಳನ್ನು ರಚಿಸಿಕೊಂಡು ಬಿಡಿಸಿಸಿ ಬ್ಯಾಂಕ್‌ಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಸೊಸೈಟಿ 10 ಲಕ್ಷದವರೆಗೆ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡುತ್ತದೆ. ಅದರಿಂದ ಸ್ವಂತ ಉದ್ದಿಮೆ ಸ್ಥಾಪಿಸಿ ಆರ್ಥಿಕ ಸದೃಢರಾಗಬಹುದು ಎಂದು ಹೇಳಿದರು.
ಸಹಕಾರ ಸಂಘಗಳ ಜಿಲ್ಲಾ ನಿರ್ದೇಶಕ ಮೆಹುಬೂಬ್ ಮಾತನಾಡಿ, ಅಲ್ಪಸಂಖ್ಯಾತರ ಅನುಕೂಲಕ್ಕಾಗಿ ಬಿಡಿಸಿಸಿ ಬ್ಯಾಂಕ್ ಅತ್ಯಂತ ಕಾಳಜಿಯಿಂದ ಮುಂದೆ ಬಂದು ಸಾಲ ಸೌಲಭ್ಯ ನೀಡುವ ಸಂಕಲ್ಪ ಮಾಡಿದೆ. ಇದರ ಸದ್ಬಳಕೆ ಮಾಡಿಕೊಂಡು ಅರ್ಥಿಕವಾಗಿ ಮುಂದೆ ಬರಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳ ಜಿಲ್ಲಾ ಪ್ರತಿನಿಧಿ ಹಾಗೂ ಒಕ್ಕೂಟ ಅಧ್ಯಕ್ಷ ಎಂ.ಕೆ.ಧನಂಜಯ, ಪುರಸಭಾಧ್ಯಕ್ಷೆ ಶಿವರುದ್ರಮ್ಮ, ಟಿಎಪಿಎಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಬೆಂಗಳೂರು ದಕ್ಷಿಣ ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಎಂ.ಸಿ.ಎಚ್. ಮೆಹರೀಶ್, ಎಚ್.ಜೆ.ಪುರುಷೋತ್ತಮ್, ಸಿ.ಚಂದ್ರೇಗೌಡ, ಎ.ಬಿ.ಲೋಕೇಶ್, ಸಿ.ವಿ.ರಾಜಣ್ಣ, ಕೆ.ಪುಟ್ಟರಾಜ್, ವಿ.ಎಚ್.ಮಧುಕರ್, ಮೂರ್ತಿ, ಮಂಜುಳಾ, ಎಂ.ಶಿವಯ್ಯ, ಎಸ್.ಕೆ.ಕವಿತಾ, ಶಿಭಿರ್ಪಾಷಾ, ಪೈರೋಜ್ಖಾನ್, ಅಭಿದ್ಖಾನ್, ರಹಮತ್ ಮೇಲ್ವಿಚಾರಕ ರಾಮಯ್ಯ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.