ರೋಗಗಳು ಬರುವ ಮುನ್ನ ಎಚ್ಚರ ವಹಿಸಿ: ಡಾ. ಅನಿಲ್ ಎಸ್.ಮೆಹ್ತಾ

KannadaprabhaNewsNetwork |  
Published : Jul 07, 2025, 12:17 AM IST
5 ಬೀರೂರು 3ಬೀರೂರಿನ ತರಳಬಾಳು ಕಲ್ಯಾಣ ಮಂದಿರದಲ್ಲಿ ಶನಿವಾರ ಜೇಸಿಐ ಸಹಯೋಗದಲ್ಲಿ ಸೆರೆನ್ ಮೆಡ್ ಲೌಂಚ್ ಆಸ್ಪತ್ರೆ ಹಾಗೂ ಬೀರೂರು ಸಾರ್ವಜನಿಕ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಡಾ. ಅನಿಲ್ ಎಸ್.ಮೆಹ್ತಾ, ಡಾ.ಕಿಶೋರ್ ಮತ್ತಿತರರನ್ನು ಜೀಸಿಐ ವತಿಯಿಂದ ಗೌರವಿಸಲಾಯಿತು. | Kannada Prabha

ಸಾರಾಂಶ

ಬೀರೂರು, ರೋಗಗಳು ಬರುವ ಮುನ್ನ ಎಚ್ಚರ ವಹಿಸಿದರೆ ಆಸ್ಪತ್ರೆ ಮತ್ತು ಮಾತ್ರೆಗಳಿಂದ ದೂರವಿರಬಹುದು ಎಂದು ಬೆಂಗಳೂರಿನ ಸೆರೆನ್ ಮೆಡ್ ಲೌಂಚ್ ಆಸ್ಪತ್ರೆ ಸಂಸ್ಥಾಪಕ ಡಾ. ಅನಿಲ್ ಎಸ್.ಮೆಹ್ತಾ ಹೇಳಿದರು.

ಜೇಸಿಐ ಸಹಯೋಗದಲ್ಲಿ ತರಳಬಾಳು ಕಲ್ಯಾಣ ಮಂದಿರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕನ್ನಡಪ್ರಭ ವಾರ್ತೆ,ಬೀರೂರು

ರೋಗಗಳು ಬರುವ ಮುನ್ನ ಎಚ್ಚರ ವಹಿಸಿದರೆ ಆಸ್ಪತ್ರೆ ಮತ್ತು ಮಾತ್ರೆಗಳಿಂದ ದೂರವಿರಬಹುದು ಎಂದು ಬೆಂಗಳೂರಿನ ಸೆರೆನ್ ಮೆಡ್ ಲೌಂಚ್ ಆಸ್ಪತ್ರೆ ಸಂಸ್ಥಾಪಕ ಡಾ. ಅನಿಲ್ ಎಸ್.ಮೆಹ್ತಾ ಹೇಳಿದರು.ಪಟ್ಟಣದ ತರಳಬಾಳು ಕಲ್ಯಾಣ ಮಂದಿರದಲ್ಲಿ ಶನಿವಾರ ಜೇಸಿಐ ಸಹಯೋಗದಲ್ಲಿ ಸೆರೆನ್ ಮೆಡ್ ಲೌಂಚ್ ಆಸ್ಪತ್ರೆ ಹಾಗೂ ಬೀರೂರು ಸಾರ್ವಜನಿಕ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ಆರೋಗ್ಯವಾಗಿದ್ದರೆ, ಸುಖವಾಗಿ ಬಾಳಬಹುದು. ಇಲ್ಲವಾದಲ್ಲಿ ದುಡಿದ ಹಣ ಆಸ್ಪತ್ರೆಗೆ ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ ರೋಗದ ಲಕ್ಷಣಗಳು ಕಾಣುವ ಮುನ್ನವೇ ಆಗ್ಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆ ಪಾಲಿಸಬೇಕು. ನಮ್ಮ ಆಸ್ಪತ್ರೆ ಬಡವರ ಆರೋಗ್ಯದ ಕಾಳಜಿ ಇಟ್ಟು ಗ್ರಾಮೀಣ ಪ್ರದೇಶಗಳಿಂದ ಹಿಡಿದು ನಗರ ಪ್ರದೇಶದ ವರೆಗೂ ಆರೋಗ್ಯ ತಪಾಸಣೆ ಶಿಬಿರದ ಮೂಲಕ ಸೇವೆ ಸಲ್ಲಿಸುತ್ತಿದೆ. ಬೀರೂರು ಜೆಸಿಐ ಸಂಸ್ಥೆಯ ಆರೋಗ್ಯದ ಕಾಳಜಿಗೆ ಮನಸೋತು, ನಿಮ್ಮ ಪಟ್ಟಣದಲ್ಲೂ ನಿಮ್ಮ ಸೇವೆಗೆ ಅವಕಾಶ ನೀಡಿದ್ದಕ್ಕೆ ಇಲ್ಲಿಗೂ ಬಂದಿದ್ದೇವೆ. ತಜ್ಞ ವೈದ್ಯರ ಬಳಿ ನಿಮ್ಮ ಆರೋಗ್ಯ ತಪಾಸಣೆ ಮಾಡಿಕೊಂಡು ಸುಖ ಜೀವನಕ್ಕೆ ದಾರಿ ಇಡಿ ಎಂದರು.ಬೀರೂರು ಸಾರ್ವಜನಿಕ ಆಸ್ಪತ್ರೆಯ ಡಾ. ಕಿಶೋರ್ ಮಾತನಾಡಿ, ನಿಮ್ಮ ಅತ್ಯಮೂಲ್ಯ ಆಸ್ತಿ ನಿಮ್ಮ ಆರೋಗ್ಯ, ಅದನ್ನು ಕಾಪಾಡಿಕೊಳ್ಳಲು ನಿಯಮಿತ ಆರೋಗ್ಯ ತಪಾಸಣೆ ಅತ್ಯಗತ್ಯ. ಉಚಿತ ಆರೋಗ್ಯ ತಪಾಸಣಾ ಶಿಬಿರದಿಂದ ಬಡ ಜನರು ಆರೋಗ್ಯ ಸಮಸ್ಯೆ ಬಗೆಹರಿಸಿಕೊಳ್ಳಲು ಉತ್ತಮ ಅವಕಾಶ. ನಮ್ಮ ಪೂರ್ವಜರ ಕಾಲ ದಲ್ಲಿ ಯಾವುದೇ ಯಂತ್ರೋ ಪಕರಣಗಳು ಇರದೆ ಮಾಡುವ ಕಾಯಕದಲ್ಲೇ ದೇಹಕ್ಕೆ ವ್ಯಾಯಾಮವಾಗಿ ಅದು ಕಾಯಿಲೆ ಗಳಿಂದ ದೂರವಿಡುತ್ತಿತ್ತು. ಆದರೆ ಈಗ ಮನುಷ್ಯನ ದೇಹ ಜಡತ್ವಕ್ಕೆ ಸಿಲುಕಿ ಕಾಯಿಲೆ ಹುಡುಕಿ ಬರುವ ಪರಿಸ್ಥಿತಿ ಇದ್ದು ಹುಟ್ಟುವ ಮಗುವೂ ಮಧುಮೇಹಕ್ಕೆ ತುತ್ತಾಗುತ್ತಿದೆ ಎಂದರು.ಜೆಸಿಐ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಗುರಿಯೊಂದು ಇರಬೇಕು ಮುನ್ನಡೆಯಲು ಗುರುವಿನ ಅಣತಿಯಿರಬೇಕೆಂಬ ನೀತಿಯಂತೆ ಸಮಾಜ ಮುಖಿ ಚಿಂತನೆಗಳೀಂದ ಜೆಸಿಐ ಸಂಸ್ಥೆ ಕೆಲಸ ಮಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಜನರು ಕಾಯಿಲೆ ಗಳಿಗೆ ತುತ್ತಾಗಿ ತಮ್ಮವರ ಪ್ರಾಣ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಲವಾರು ಪ್ರಯತ್ನ ಮಾಡುವ ಜೊತೆ ಹಣ ಕಳೆದು ಕೊಳ್ಳುವವರ ಘಟನೆ ಹೆಚ್ಚಾಗಿ ಕಂಡು ಬರುವುದನ್ನು ಮನಗಂಡು, ಜೆಸಿಐ ಸಂಸ್ಥೆ ಸಾರ್ವಜನಿಕರ ಆರೋಗ್ಯಕ್ಕೆ ಒತ್ತು ನೀಡಿ ಈ ಶಿಬಿರ ಆಯೋಜಿಸಿದೆ. ನಾನು ಸಹ ಈ ಹಿಂದೆ ನನ್ನ ತಾಯಿ ಕ್ಯಾನ್ಸರ್ ಗೆ ತುತ್ತಾದ ಸಂದರ್ಭ ಆ ಆಸ್ಪತ್ರೆ ನೋವುಗಳನ್ನು ಅನುಭವಿ ಸಿದ್ದೇನೆ. ಅವರು ಮೃತರ ನೆನಪಿಗಾಗಿ ಈ ಶಿಬಿರ ಆಯೋಜಿಸಿದ್ದೇನೆ ಎಂದು ಕಂಬನಿ ಮಿಡಿದರು.ಉಚಿತ ಆರೋಗ್ಯ ಶಿಬಿರದಲ್ಲಿ ಜನರಲ್ ಸರ್ಜರಿ, ಇಎನ್.ಟಿ, ಕೀಲು ಮತ್ತು ಮೂಳೆ, ಜನರಲ್ ಫಿಜಿಷಿಯನ್, ಕಣ್ಣು ತಪಾಸಣೆಗೆ ಪಟ್ಟಣ ಸುತ್ತಮುತ್ತಲ ಸುಮಾರು 370ಕ್ಕೂ ಅಧಿಕ ರೋ ಗಿಗಳು ಶಿಬಿರದ ಪ್ರಯೋಜನ ಪಡೆದಿದ್ದಾರೆ ಎಂದು ವಲಯ ಉಪಾಧ್ಯಕ್ಷ ಬಿ.ಎಂ.ಮಲ್ಲಿಕಾರ್ಜುನ್ ತಿಳಿಸಿದರು.ಈ ಸಂದರ್ಭದಲ್ಲಿ ಡಾ.ಅನಿತಾ ಮೆಹ್ತಾ, ಡಾ.ಗೌರವ್, ಡಾ.ದ ರ್ಶನ್ ಕೆ.ಎಸ್., ಡಾ.ಆನಂದ್, ಅಭಯ್ ಕಣ್ಣಿನ ಆಸ್ಪತ್ರೆಯ ಡಾ.ದರ್ಶನ್, ಡಾ.ಅನಂತ ಪದ್ಮನಾಭ, ಕಾರ್ಯದರ್ಶಿ ವಿನೋದ್, ಜೆಸಿಐ ಮಲ್ಲಿಕಾ ರಾಘವೇಂದ್ರ, ಮಂಜುಳ ಜಯಣ್ಣ, ನಿಕಟಪೂರ್ವ ಅಧ್ಯಕ್ಷ ಅಯ್ಯೂಬ್ ಅಹಮದ್, ಹಿರಿಯ ಜೆಸಿಐ ಸದಸ್ಯರಾದ ಮಾರ್ಗದ ಮಧು, ಸವಿತಾ ರಮೇಶ್, ಸೇರಿದಂತೆ ಮತ್ತಿತರು ಸಾರ್ವಜನಿಕರು ಇದ್ದರು.5 ಬೀರೂರು 3ಬೀರೂರಿನ ತರಳಬಾಳು ಕಲ್ಯಾಣ ಮಂದಿರದಲ್ಲಿ ಶನಿವಾರ ಜೇಸಿಐ ಸಹಯೋಗದಲ್ಲಿ ಸೆರೆನ್ ಮೆಡ್ ಲೌಂಚ್ ಆಸ್ಪತ್ರೆ ಹಾಗೂ ಬೀರೂರು ಸಾರ್ವಜನಿಕ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಡಾ. ಅನಿಲ್ ಎಸ್.ಮೆಹ್ತಾ, ಡಾ.ಕಿಶೋರ್ ಮತ್ತಿತರರನ್ನು ಜೀಸಿಐ ವತಿಯಿಂದ ಗೌರವಿಸಲಾಯಿತು.

PREV