ಕನ್ನಡಪ್ರಭ ವಾರ್ತೆ ಶಿಕಾರಿಪುರ
ತಾಲೂಕಿನ ಚುರ್ಚಿಗುಂಡಿ ಗ್ರಾಮದಲ್ಲಿ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಶಿವಮೊಗ್ಗ. ಕೃಷಿ ವಿಜ್ಞಾನಗಳ ಮಹಾವಿದ್ಯಾಲಯದ ವತಿಯಿಂದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಆಹಾರ ಕಲಬೆರಕೆ ವಿಷಯದ ಬಗೆಗಿನ ಗುಂಪು ಚರ್ಚೆ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
ಇತ್ತೀಚಿನ ವರ್ಷದಲ್ಲಿ ಕಲಬೆರಕೆ ಆಹಾರ ಪದಾರ್ಥಗಳ ಸೇವನೆ, ಬಳಕೆ ಹೆಚ್ಚಾಗಿದ್ದು, ಅತ್ಯಂತ ಅಪಾಯಕಾರಿಯಾದ ಕಲಬೆರಕೆ ಆಹಾರ ಸೇವನೆಯು ನೇರವಾಗಿ ದೇಹದಲ್ಲಿ ದುಷ್ಪರಿಣಾಮ ಉಂಟು ಮಾಡಲಿದೆ, ಈ ದಿಸೆಯಲ್ಲಿ ನಿತ್ಯ ಬೀದಿ ಬದಿ ಆಹಾರ ಸೇವನೆಯ ಅಬ್ಯಾಸ ಸ್ಥಗಿತಗೊಳಿಸುವಂತೆ ತಿಳಿಸಿದರು.ಹೆಚ್ಚು ಕಲಬೆರಕೆ ಆಹಾರವನ್ನು ಸೇವಿಸುವವರಲ್ಲಿ ಅತಿಸಾರ, ಹೃದ್ರೋಗ, ಅಲರ್ಜಿ, ವರ್ಟಿಗೋ ಮಧುಮೇಹ ಮತ್ತಿತರ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿದ್ದು, ಆಹಾರದ ಕಲಬೆರಕೆ ಸಾಮಾನ್ಯ ಸಮಸ್ಯೆ ಎಂಬ ಮಟ್ಟಿಗೆ ಬೆಳೆದು ಇದೀಗ ಆರೋಗ್ಯವಂತ ಸಮಾಜಕ್ಕೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.ವಿದ್ಯಾರ್ಥಿಗಳು ಗ್ರಾಮಸ್ಥರಿಗೆ ಹಲವು ಪ್ರಾತ್ಯಕ್ಷಿಕೆಗಳ ಮೂಲಕ ಕಲಬೆರಕೆ ಪದಾರ್ಥಗಳನ್ನು ಗುರುತಿಸುವ ರೀತಿ ತೋರಿಸಿಕೊಟ್ಟರು.
ಹಣ್ಣು ಮತ್ತು ತರಕಾರಿ ಕಲಬೆರಕೆ ಬಗ್ಗೆ ಅನುಮಾನವಿದ್ದಲ್ಲಿ ಹತ್ತಿ ಉಂಡೆಯನ್ನು ನೀರು ಅಥವಾ ಎಣ್ಣೆಯಲ್ಲಿ ಅದ್ದಿ ತರಕಾರಿ ಅಥವಾ ಹಣ್ಣುಗಳ ಮೇಲೆ ಉಜ್ಜಿದಾಗ ಹತ್ತಿಯ ಬಣ್ಣ ಬದಲಾದರೆ ಕೃತಕ ಬಣ್ಣದ ಲೇಪನ ಮಾಡಲಾಗಿದೆ ಎಂಬುದು ಸಾಬೀತಾಗಲಿದೆ. ಲೋಟ ನೀರಿಗೆ ಕೆಲ ಹನಿ ಜೇನುತುಪ್ಪ ಸೇರಿಸಿದಾಗ ತಳ ಸೇರಿದಲ್ಲಿ ಶುದ್ಧವಾಗಿದೆ ಹಾಗೂ ಸಕ್ಕರೆ ಅಥವಾ ಬೆಲ್ಲದ ಪಾಕ ಸೇರಿಸಿದಲ್ಲಿ ನೀರಿನಲ್ಲಿ ಕರಗುತ್ತದೆ ಎಂದು ತಿಳಿಸಿಕೊಟ್ಟರು.ಗ್ರಾಮಸ್ಥರಾದ ಪ್ರತಿಮಾ, ಶುಭ, ಕುಸುಮಾ, ಲತಾ, ಪುಷ್ಪವತಿ, ಪ್ರೇಮ ಮತ್ತಿತರರು ಉಪಸ್ಥಿತರಿದ್ದರು.