ಕನ್ನಡಪ್ರಭ ವಾರ್ತೆ, ಚಾಮರಾಜನಗರ
ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಮೈಸೂರು ಪ್ರಾಂತೀಯ ಕಚೇರಿ ವತಿಯಿಂದ ಚಾಮರಾಜನಗರ ಜಿಲ್ಲಾ ಸೌಹಾರ್ದ ಸಹಕಾರಿಗಳಿಗಾಗಿ ನಗರದ ಮಹಾಮನೆಯಲ್ಲಿ ಹಮ್ಮಿಕೊಂಡಿದ್ದ ವಿಷಯಾಧಾರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು,
ಸೌಹಾರ್ದ ಸಂಯುಕ್ತಾ ಸಹಕಾರಿ ನಿಯಮಿತಗಳು ಮಿನಿ ಭಾರತ ಇದ್ದ ರೀತಿ ಎಲ್ಲಾ ಜಾತಿ ಧರ್ಮಗಳನ್ನೊಳಗೊಂಡಿವೆ, ಇಲ್ಲಿ ಸಮಾಜ ಸೇವೆಯೇ ಜೊತೆಗೆ ಆ ವ್ಯಾಪ್ತಿಯ ಆರ್ಥಿಕಾಭಿವೃದ್ದಿಗೆ ಒತ್ತು ಇದಕ್ಕಾಗಿ ನಮ್ಮ ಕರ್ತವ್ಯ ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿರಬೇಕು ಎಂದರು.ಕೆಲ ಒಂದು ಸಣ್ಣ ತಪ್ಪುಗಳನ್ನು ಬಿಟ್ಟರೆ ಇಂದು ದೇಶಾದ್ಯಂತ ಕೋಟ್ಯಾಂತರ ಸೌಹಾರ್ದ ಸಹಕಾರಿ ನಿಯಮಿತಗಳಿದ್ದು, ದೇಶದ ಆರ್ಥಿಕಾಭಿವೃದ್ದಿಗೆ ಹೆಚ್ಚಿನ ಒತ್ತು ನೀಡುತ್ತಿವೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯು ರಾಜ್ಯದ ಸೌಹಾರ್ದ ಸಹಕಾರಿಗಳ ಅಭಿವೃದ್ಧಿಗೆ ಪೂರಕವಾಗುವಂತಹ ಹಲವಾರು ತರಬೇತಿ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳುತ್ತಾ ಬಂದಿದ್ದು ಈ ಭಾಗದಲ್ಲಿ ಸೌಹಾರ್ದ ಸಹಕಾರಿಯನ್ನು ಉತ್ತೇಜಿಸಲು ಈ ವಿಷಯಾಧಾರಿತ ತರಬೇತಿಯನ್ನು ಹಮ್ಮಕೊಂಡಿದೆ ಎಂದರು.
ನಿಯಮಿತಗಳಿಗೆ ಎಂದೂ ಕೊನೆಯಿಲ್ಲ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು, ನಿಮ್ಮ ನಿಮ್ಮ ಅವಧಿಯಲ್ಲಿ ಮಾಡಿದ ಸಾಮಾಜಿಕ ಹಾಗೂ ಆರ್ಥಿಕಾಭಿವೃದ್ದಿಯ ಒಳ್ಳೆಯ ಕಾರ್ಯಕ್ರಮಗಳು ನಿಮ್ಮ ಮುಂದಿನ ಪೀಳಿಗೆಯವರು ನೆನಪಿಸಿಕೊಳ್ಳುತ್ತಾರೆ ಎಂದರು.ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ ೧೯೯೭ರ ಅಡಿಯಲ್ಲಿ ನೋಂದಾಯಿಸಲ್ಪಟ್ಟ, ಸದಸ್ಯರಿಂದಲೇ ನಿರ್ವಹಿಸಲ್ಪಡುವ ಸ್ವಾಯತ್ತ ಆರ್ಥಿಕ ಸಂಸ್ಥೆಗಳೇ ಸೌಹಾರ್ದ ಸಹಕಾರಿ ಸಂಘಗಳು. ಇವು ಸಣ್ಣ ರೈತರು, ಕುಶಲಕರ್ಮಿಗಳು ಮತ್ತು ಸಣ್ಣ ಉದ್ಯಮಿಗಳಿಗೆ ಸಾಲ ಸೌಲಭ್ಯ, ಠೇವಣಿ ಮತ್ತು ಆರ್ಥಿಕ ಸೇವೆಗಳನ್ನು ಒದಗಿಸುವುದರಿಂದ ಸೇವೆ ಪ್ರಾಮಾಣಿಕವಾಗಿರಬೇಕು ಎಂದರು.
ಆರ್ಥಿಕ ವ್ಯವಹಾರಗಳಲ್ಲಿ ಪಾರದರ್ಶಕತೆ ಮತ್ತು ಸದಸ್ಯರಿಗೆ ಸಮಂಜಸವಾದ ಲಾಭಾಂಶವನ್ನು ಹಂಚಿಕೆ ಮಾಡಬೇಕು, ಪ್ರತಿಯೊಬ್ಬ ಸದಸ್ಯನನ್ನು ಗೌರವದಿಂದ ಕಾಣಬೇಕು, ಸದಸ್ಯರು ಆಯ್ಕೆ ಮಾಡಿದ ಮಂಡಳಿಯಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದರಿಂದ ಪಾರದರ್ಶಕತೆ ಇರಬೇಕು ಎಂದರು.ಇಂತಹ ತರಬೇತಿ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಂಡು ನಿಮ್ಮ ನಿಮ್ಮ ಸಹಕಾರಿ ನಿಯಮಿತಗಳನ್ನು ಅಭಿವೃದ್ದಿಪಡಿಸಿಕೊಂಡು ಸಾಮಾಜಿಕ ಬದಲಾವಣೆಯ ಹರಿಕಾರರಾಗಿ ಎಂದರು.
ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ ಪ್ರಾಸ್ತಾವಿಸಿದರು. ಮುಖ್ಯ ಅತಿಥಿಗಳಾಗಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಕರ್ನಾಟಕ ಸೌಹಾರ್ದ ಸಹಕಾರಿ ನಿಯಮಿತ ಮಾಜಿ ನಿರ್ದೇಶಕ ಭಾಸ್ಕರ್ ಹೆಗಡೆ ಕಾಗೇರಿ ನಿರ್ದೇಶಕರ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ತಿಳಿಸಿಕೊಟ್ಟರು.ಅಭಿವೃದ್ದಿ ಅಧಿಕಾರಿ ಎನ್. ಬಲಮ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಭಾಗವಹಿಸಿದ್ದರು.