ಬೀಳಗಿ ಶುಗರ್ಸ್‌ನಿಂದ 10 ಲಕ್ಷ ಟನ್‌ ಕಬ್ಬು ನುರಿಸುವ ಗುರಿ

KannadaprabhaNewsNetwork |  
Published : Nov 13, 2026, 03:00 AM IST
ಲೋಕಾಪುರ | Kannada Prabha

ಸಾರಾಂಶ

ಲೋಕಾಪುರ ಸಮೀಪದ ತಿಮ್ಮಾಪುರ ಗ್ರಾಮದ ಬೀಳಗಿ ಶುಗರ್‌ ಮಿಲ್‌ನಲ್ಲಿ ಯುನಿಟ್-೨(ರನ್ನನಗರ) ಸಂಸ್ಥೆಯಲ್ಲಿ ಮಂಗಳವಾರ ೨೦೨೬-೨೭ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಕೇನ್ ಕ್ಯಾರಿಯನ್ ಪೂಜಾ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಲೋಕಾಪುರ

ಲೋಕಾಪುರ ಸಮೀಪದ ತಿಮ್ಮಾಪುರ ಗ್ರಾಮದ ಬೀಳಗಿ ಶುಗರ್‌ ಮಿಲ್‌ನಲ್ಲಿ ಯುನಿಟ್-೨(ರನ್ನನಗರ) ಸಂಸ್ಥೆಯಲ್ಲಿ ಮಂಗಳವಾರ ೨೦೨೬-೨೭ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಕೇನ್ ಕ್ಯಾರಿಯನ್ ಪೂಜಾ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.

ಈ ಕಾರ್ಯಕ್ರಮದಲ್ಲಿ ಸಹಕಾರಿ ಧುರೀಣ, ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಸ್.ಆರ್.ಪಾಟೀಲ ಮಾತನಾಡಿ, ರೈತರು ಈ ಕಾರ್ಖಾನೆಯ ಶಕ್ತಿಯಾಗಿದ್ದಾರೆ. ಅಭಿವೃದ್ಧಿಯ ಮೂಲವಾಗಿದ್ದು, ಗುಣಮಟ್ಟದ ಕಬ್ಬನ್ನು ಪೂರೈಸುವಂತೆ ರೈತರಿಗೆ ಮನವಿ ಮಾಡಿದರು.

ರೈತರು ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ಕಬ್ಬು ಪೂರೈಸಿ ಕಾರ್ಖಾನೆ ಅಭಿವೃದ್ಧಿ ಮತ್ತು ಉತ್ಪಾದನೆ ಪ್ರಗತಿಯಲ್ಲಿ ಸಹಕಾರ ನೀಡಬೇಕು. ಪ್ರಸಕ್ತ ಸಾಲಿನಲ್ಲಿ ೧೦ಲಕ್ಷ ಟನ್ ಕಬ್ಬು ನುರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.

ಬಂದ್ ಆಗಿದ್ದ ಈ ಕಾರ್ಖಾನೆಯನ್ನು ಪುನಃ ಆರಂಭಿಸಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಷೇರುದಾರರ, ರೈತರ, ಕಬ್ಬು ಪೂರೈಕೆದಾರರ, ಕಾರ್ಮಿಕರ, ಸಹಕಾರ ಅತ್ಯಗತ್ಯವಾಗಿದೆ. ನಿಮ್ಮ ವಿಶ್ವಾಸ ಮತ್ತು ನಂಬಿಕೆಗೆ ಚ್ಯುತಿ ಬರದ ಹಾಗೆ ಕೆಲಸ ಮಾಡುವ ಮೂಲಕ ಕಬ್ಬು ಪೂರೈಕೆದಾರರ ಮತ್ತು ಕಾರ್ಮಿಕರ ಹಿತರಕ್ಷಣೆ ಮಾಡುವುದು ನನ್ನ ಮೊದಲ ಜವಾಬ್ದಾರಿಯಾಗಿದೆ. ನಮ್ಮ ಜಿಲ್ಲೆಯಲ್ಲಿಯೇ ಆದರ್ಶ ಸಕ್ಕರೆ ಕಾರ್ಖಾನೆಯನ್ನಾಗಿ ಮಾಡಲು ಎಲ್ಲರೂ ಸೇರಿ ಪ್ರಯತ್ನ ಮಾಡೋಣ, ಜಿಲ್ಲೆಯಲ್ಲಿ ಬೇರೆ ಸಕ್ಕರೆ ಕಾರ್ಖಾನೆಯವರು ನೀಡುವ ದರವನ್ನೇ ನಮ್ಮ ಸಕ್ಕರೆ ಕಾರ್ಖಾನೆಯಿಂದಲೂ ನೀಡಲಿದೆ ಎಂದು ಭರವಸೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಎಚ್.ಎಲ್.ಪಾಟೀಲ, ಮಂಜುನಾಥ ಅರಳಿಕಟ್ಟಿ, ತಿಮ್ಮಣ್ಣ ಬಟಕುರ್ಕಿ, ಗಿರೀಶ ಲಕ್ಷಾಣಿ, ರಾಜುಗೌಡ ಜಂಬಗಿ, ಲೋಕಣ್ಣ ಕತ್ತಿ, ವಿಠ್ಠಲ ತುಮ್ಮರಮಟ್ಟಿ, ವೆಂಕಣ್ಣ ಕಮಕೇರಿ, ಕೆ.ವೈ.ಬುದ್ನಿ, ವೈ.ಜಿ.ದಾಸರಡ್ಡಿ, ದುಂಡಪ್ಪ ದಾಸರಡ್ಡಿ, ಪಾಂಡುರಂಗ ಹೂವಣ್ಣವರ, ಕಾರ್ಮಿಕರ ಸಂಘದ ಅಧ್ಯಕ್ಷ ಉಮೇಶ ಬಡಿಗೇರ, ಉಪಾಧ್ಯಕ್ಷ ನಾಗಪ್ಪ ಕೆಳಗಡೆ, ಕಾರ್ಯದರ್ಶಿ ಪ್ರಕಾಶ ಕಬ್ಬೂರ, ಖಜಾಂಜಿ ಪಾಂಡು ಮುಳ್ಳೂರ, ಕಾಳಪ್ಪ ಕಂಬಾರ ಹಾಗೂ ಕಾರ್ಖಾನೆಯ ಆಡಳಿತ ಮಂಡಳಿಯ ಸದಸ್ಯರು, ಸಾವಿರಾರು ರೈತರು, ಕಾರ್ಮಿಕರು, ಕಬ್ಬು ಬೆಳೆಗಾರರು, ಸುತ್ತಮುತ್ತಲಿನ ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆ
ಚಲ್ಲಘಟ್ಟ ಮೆಟ್ರೋ ಡಿಪೋ ಬಳಿ ಅಂಡರ್‌ಪಾಸ್‌