ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ತಾಲೂಕಿನ ಯಕ್ಸಂಬಾ ಗ್ರಾಮದ ಬೀರೇಶ್ವರ ಮುಖ್ಯ ಕಚೇರಿಯ ಸಭಾಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದಸ್ಯರ ಸಹಕಾರ ಹಾಗೂ ಸಿಬ್ಬಂದಿ ಕಠಿಣ ಪರಿಶ್ರಮದಿಂದ ಸಂಸ್ಥೆಯು ಪ್ರಗತಿಪಥದಲ್ಲಿ ಮುನ್ನಡೆದಿದೆ ಎಂದರು. ಸದಸ್ಯರಿಗೆ ಕಳೆದ ಸಾಲಿನ ಆರ್ಥಿಕ ವರ್ಷದಲ್ಲಿರುವ ಶೇರ ಮೊತ್ತ ₹33.01.28.900 ಮೇಲೆ ಶೇ.12ರಷ್ಟ್ರು ಲಾಭಾಂಶ ಸದಸ್ಯರ ಖಾತೆಗಳಿಗೆ ಜಮೆ ಮಾಡಲಾಗಿದೆ. ಅದರಂತೆ ನೌಕರರ ಬೋನಸ್ ವಾರ್ಷಿಕ ಒಟ್ಟು ಸಂಬಳದ ಮೇಲೆ ₹3.26 ಕೋಟಿ ಮೇಲೆ ಶೇ.10 ರಷ್ಟು 1408 ಸಿಬ್ಬಂದಿಗೆ ಬೋನಸ್ ಜಮೆ ಮಾಡಲಾಗಿದೆ ಎಂದರು.
ಸಹಕಾರಿಯು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದಲ್ಲಿ ಸುಮಾರು 228 ಶಾಖೆಗಳಿದ್ದು, 4.22 ಲಕ್ಷ ಸದಸ್ಯರಿದ್ದು, ₹35.78 ಕೋಟಿ ಶೇರು ಬಂಡವಾಳದೊಂದಿಗೆ ₹4573 ಕೋಟಿ ಠೇವು ಹೊಂದಿದೆ. ₹237.59 ಕೋಟಿ ಕಾಯ್ದಿಟ್ಟ ಹಾಗೂ ಇತರ ನಿಧಿಗಳು, ₹3507.54 ಕೋಟಿ ಸಾಲ ಮತ್ತು ಮುಂಗಡಗಳು, ₹1133.67 ಕೋಟಿ ಬ್ಯಾಂಕ್ ಠೇವು-ಗುಂತಾವಣೆಗಳು, ₹5232.83 ಕೋಟಿ ದುಡಿಯುವ ಬಂಡವಾಳ ಹೊಂದಿ ಪ್ರಸಕ್ತ ವರ್ಷದಲ್ಲಿ ₹45.35 ಕೋಟಿ ನಿವ್ವಳ ಲಾಭಗಳಿಸಿದೆ ಎಂದರು.ಜ್ಯೋತಿ ಸಹಕಾರಿಯ ನಿರ್ದೇಶಕ ರಮೇಶ ಚೌಗಲೆ ಮಾತನಾಡಿ, ಸದಸ್ಯರಿಗೆ ಕಳೆದ ಸಾಲಿನ ₹2.03.57.700 ಶೇರು ಮೊತ್ತದ ಮೇಲೆ ಶೇ.10ರಷ್ಟು ಲಾಭಾಂಶವನ್ನು ಅವರ ಖಾತೆಗಳಿಗೆ ಜಮೆ ಮಾಡಲಾಗಿದೆ. ನೌಕರರಿಗೆ ಒಟ್ಟಾರೆ ₹48.06 ಲಕ್ಷ ಮೊತ್ತದ ಬೋನಸ್ ಬಿಡುಗಡೆ ಮಾಡಲಾಗಿದೆ. ಸಹಕಾರಿಯು ಒಟ್ಟು 46,744 ಸದಸ್ಯರನ್ನು ಹೊಂದಿದ್ದು, ₹2.54 ಕೋಟಿ ಶೇರು ಬಂಡವಾಳ, ₹354.43 ಕೋಟಿ ಠೇವು, ₹12.5 ಕೋಟಿ ಕಾಯ್ದಿಟ್ಟ ನಿಧಿ, ₹180.76 ಕೋಟಿ ಸಾಲ ಹಾಗೂ ಮುಂಗಡ, ₹128.84 ಕೋಟಿ ಬ್ಯಾಂಕ್ ಠೇವು ಮತ್ತು ಹೂಡಿಕೆ, ₹371.13 ಕೋಟಿ ದುಡಿಯುವ ಬಂಡವಾಳ ಹೊಂದಿದೆ ಎಂದು ವಿವರಿಸಿದರು. ಅಲ್ಲದೆ, ಪ್ರಸಕ್ತ ವರ್ಷದಲ್ಲಿ ₹7.50 ಕೋಟಿ ಖರೀದಿ ಹಾಗೂ ₹8.48 ಕೋಟಿ ಮಾರಾಟ ನಡೆಸಿದ್ದು, ಒಟ್ಟಾರೆ ₹1.72 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದರು.