ಬೆಳಾಲು ಶ್ರೀ ಅನಂತಪದ್ಮನಾಭ ದೇವಸ್ಥಾನ ಪ್ರತಿಷ್ಠಾ ವರ್ಧಂತ್ಯುತ್ಸವ

KannadaprabhaNewsNetwork |  
Published : May 18, 2026, 03:45 AM IST
 ಶ್ರೀದೇವರ ಉತ್ಸವ ಬಲಿ | Kannada Prabha

ಸಾರಾಂಶ

ಅನಂತೋಡಿ ಬೆಳಾಲು ಶ್ರೀ ಅನಂತಪದ್ಮನಾಭ ದೇವಸ್ಥಾನ ಪ್ರತಿಷ್ಠಾ ವರ್ಧಂತ್ಯುತ್ಸವ ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.

ಬೆಳ್ತಂಗಡಿ: ಅನಂತೋಡಿ ಬೆಳಾಲು ಶ್ರೀ ಅನಂತಪದ್ಮನಾಭ ದೇವಸ್ಥಾನ ಪ್ರತಿಷ್ಠಾ ವರ್ಧಂತ್ಯುತ್ಸವ ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.ಬೆಳಗ್ಗೆ ಶ್ರೀ ದೇವರಿಗೆ ಕಲಶಾಭಿಷೇಕ ಮಧ್ಯಾಹ್ನ ಮಹಾಪೂಜೆ ರಾತ್ರಿ ಪ್ರಸನ್ನ ರಂಗ ಪೂಜೆ ಮತ್ತು ಶ್ರೀದೇವರ ಉತ್ಸವ ಬಲಿ ನಡೆಯಿತು. ವಾರ್ಷಿಕ ಮಹಾಸಭೆ ಹಾಗೂ ಲೆಕ್ಕ ಪತ್ರ ಮಂಡಿಸಲಾಯಿತು . ಮಧ್ಯಾಹ್ನ ಹಾಗೂ ರಾತ್ರಿ ಸಾರ್ವಜನಿಕ ಅನ್ನ ಸಂರ್ಪಣೆ ನಡೆಯಿತು. ಮಧ್ಯಾಹ್ನ ದೇವಸ್ಥಾನದಲ್ಲಿ ಕುಮಾರಿ ಕೃಷ್ಣಪ್ರಿಯಾ ಆಚಾರ್ ಮುರುಳ್ಯ ಅವರಿಂದ ಸಂಗೀತ ಕಛೇರಿ ಹಾಗೂ ಸಮರ್ಥ್ ಪರ್ಲತ್ತಾಯ ಮಾಯಾ ಇವರಿಂದ ಕೊಳಲು ವಾದನ, ಸುಪ್ರೀತಾ ಕೋರ್ನಾಯ ಇವರಿಂದ ಪಿಟೀಲು ವಾದನ ವರ್ಚಸ್ ಕೋರ್ನಾಯ ಧರ್ಮಸ್ಥಳ ಇವರಿಂದ ಮೃದಂಗ ವಾದನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಅಸ್ರಣ್ಣರಾದ ಗಿರೀಶ್ ಭಾರಿತ್ತಾಯ ಪಾರಲ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಗೌಡ, ಉಪಾಧ್ಯಕ್ಷ ಮಮತಾ ದಿನೇಶ್ ಪೂಜಾರಿ ಉಪ್ಪಾರ್, ಪ್ರಧಾನ ಕಾರ್ಯದರ್ಶಿ ದುರ್ಗಾ ಪ್ರಸಾದ್ ಕೆಮ್ಮಣ್ಣಾಯ, ಕಾರ್ಯದರ್ಶಿ ಸತೀಶ್ ಗೌಡ ಎಳ್ಳುಗದ್ದೆ, ಮಹಿಳಾ ಸಮಿತಿ ಗೌರವಾಧ್ಯಕ್ಷ ವಿದ್ಯಾ ಶ್ರೀನಿವಾಸ್ ಗೌಡ, ಮಹಿಳಾ ಸಮಿತಿಯ ಅಧ್ಯಕ್ಷ ಹೇಮಲತಾ ಶ್ರೀನಿವಾಸ ಗೌಡ ಗಣಪನಗುತ್ತು, ಭಜನಾ ಮಂಡಳಿ ಅಧ್ಯಕ್ಷರಾದ ಹರೀಶ್ ಪೋಸೊಟ್ಟು, ಸಮಿತಿ ಹಿರಿಯ ಸದಸ್ಯರಾದ ಬೆಳಾಲು ಗುತ್ತು ಮನೆಯ ಹೇಮಲತಾ ಜೀವಂದರ್ ಕುಮಾರ್ ಜೈನ್, ಉದಿತ್ ಕುಮಾರ್ ಜೈನ್ ಕುಜುಂಬೊಟ್ಟು, ದೇಜಪ್ಪ ಗೌಡ ಅರಣೆಮಾರು , ಲಿಂಗಪ್ಪ ಪೂಜಾರಿ ಬನಂದೂರು, ಬಾಬು ಗೌಡ ಅಲಕ್ಕೆ ದಡ್ಡ, ಸರೋಜಿನಿ ಬೀಮಂಡೆ, ದೇವಸ್ಥಾನದ ಲೆಕ್ಕಪರಿಶೋಧಕ ನಾರಾಯಣಗೌಡ ಎಳ್ಳುಗದ್ದೆ, ಹಾಗೂ ಸದಸ್ಯರಾದ ಶ್ರೀನಿವಾಸ ಗೌಡ ಗಣಪನ ಗುತ್ತು, ಸುಂದರ ಎಂ ಕೆ ಬೆಳಾಲು, ಜಾರಪ್ಪ ಗೌಡ ಅರಣೆ ಮಾರು ಹಾಗೂ ಸಮಿತಿ ಸದಸ್ಯರು ಭಜನ ಮಂಡಳಿ ಸದಸ್ಯರು ಮಹಿಳಾ ಸಮಿತಿ ಸದಸ್ಯರು ಹಾಗೂ ಬೈಲುವಾರು ಸಂಚಾಲಕರು ಹಾಗೂ ಸಹ ಸಂಚಾಲಕರು ಊರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದು ಕಾರ್ಯಕ್ರಮ ಸಂಪನ್ನಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಕಳ: ಋಣಾನುಬಂಧ ವಧುವರರ ಸಮಾವೇಶ
ಕುಟುಂಬಗಳಿಂದಲೇ ಉತ್ತಮ ರಾಷ್ಟ್ರ ನಿರ್ಮಾಣ: ವಜ್ರದೇಹಿ ಶ್ರೀ