ಬೆಳಗಾವಿಯಲ್ಲಿ ಬೆಲ್ಕಾನ್‌-2026 ಪ್ರದರ್ಶನ

KannadaprabhaNewsNetwork |  
Published : Feb 02, 2026, 03:00 AM IST
ಬೆಲ್ಕಾನ್‌ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಉತ್ತರ ಕರ್ನಾಟಕದ ನಿರ್ಮಾಣ ವಲಯದಲ್ಲಿ ಪ್ರಮುಖ ಉಪಕ್ರಮವೆಂದು ಗುರುತಿಸಲ್ಪಟ್ಟ ಬೆಲ್ಕಾನ್-2026 ಎಂಬ ಭವ್ಯ ನಿರ್ಮಾಣ ಮತ್ತು ವಸತಿ ಪ್ರದರ್ಶನವನ್ನು ಬೆಳಗಾವಿಯ ಕ್ರೆಡೈ ಮತ್ತು ಕಾರ್ಯಕ್ರಮ ಸಂಘಟಕರಾದ ಯಶ್ ಈವೆಂಟ್ಸ್ ಆಯೋಜಿಸುತ್ತಿವೆ ಎಂದು ಈವೆಂಟ್ ಅಧ್ಯಕ್ಷ ಪ್ರಶಾಂತ್ ವಂಡ್ಕರ್ ಮತ್ತು ಯಶ್ ಈವೆಂಟ್ಸ್ ನಿರ್ದೇಶಕ ಪ್ರಕಾಶ್ ಕಲ್ಕುಂದ್ರಿಕರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಉತ್ತರ ಕರ್ನಾಟಕದ ನಿರ್ಮಾಣ ವಲಯದಲ್ಲಿ ಪ್ರಮುಖ ಉಪಕ್ರಮವೆಂದು ಗುರುತಿಸಲ್ಪಟ್ಟ ಬೆಲ್ಕಾನ್-2026 ಎಂಬ ಭವ್ಯ ನಿರ್ಮಾಣ ಮತ್ತು ವಸತಿ ಪ್ರದರ್ಶನವನ್ನು ಬೆಳಗಾವಿಯ ಕ್ರೆಡೈ ಮತ್ತು ಕಾರ್ಯಕ್ರಮ ಸಂಘಟಕರಾದ ಯಶ್ ಈವೆಂಟ್ಸ್ ಆಯೋಜಿಸುತ್ತಿವೆ ಎಂದು ಈವೆಂಟ್ ಅಧ್ಯಕ್ಷ ಪ್ರಶಾಂತ್ ವಂಡ್ಕರ್ ಮತ್ತು ಯಶ್ ಈವೆಂಟ್ಸ್ ನಿರ್ದೇಶಕ ಪ್ರಕಾಶ್ ಕಲ್ಕುಂದ್ರಿಕರ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಅವರು, ಉತ್ತರ ಕರ್ನಾಟಕದ ಅತಿದೊಡ್ಡ ನಿರ್ಮಾಣ ಮತ್ತು ವಸತಿ ಪ್ರದರ್ಶನದ 8ನೇ ಆವೃತ್ತಿಯಾದ ಬೆಲ್ಕಾನ್ ಫೆ.5ರಿಂದ 8ರವರೆಗೆ ನಗರದ ಕ್ಲಬ್ ರಸ್ತೆಯ ಸಿಪಿಎಡ್ ಮೈದಾನದಲ್ಲಿ ನಡೆಯಲಿದೆ. ಪ್ರದರ್ಶನ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ನಡೆಯಲಿದೆ. ಸುಮಾರು 1 ಲಕ್ಷ ಚದರ ಅಡಿ ವಿಸ್ತೀರ್ಣದ ಮಂಟಪದಲ್ಲಿ 180 ಮಳಿಗೆಗಳನ್ನು ತೆರೆಯಲಾಗಿದ್ದು, ಬೆಳಗಾವಿ ನಗರದ 300 ಕ್ಕೂ ಹೆಚ್ಚು ರಿಯಲ್ ಎಸ್ಟೇಟ್ ಯೋಜನೆಗಳನ್ನು ಪ್ರದರ್ಶಿಸುತ್ತದೆ. ನಿರ್ಮಾಣ ಸಾಮಗ್ರಿಗಳು ಮತ್ತು ಗೃಹ ಹಣಕಾಸು/ ಬ್ಯಾಂಕಿಂಗ್ ಸೇವೆಗಳನ್ನು ನೀಡುವ ಪ್ರಸಿದ್ಧ ಕಂಪನಿಗಳು ಮತ್ತು ಹಣಕಾಸು ಸಂಸ್ಥೆಗಳಿಂದ 60 ಕ್ಕೂ ಹೆಚ್ಚು ಮಳಿಗೆಗಳು ಸಹ ಲಭ್ಯವಿರುತ್ತವೆ. ರಿಯಲ್ ಎಸ್ಟೇಟ್ ವಲಯದ ಪ್ರಮುಖ ಬಿಲ್ಡರ್‌ಗಳು, ವಾಸ್ತು ಶಿಲ್ಪಿಗಳು, ಎಂಜಿನಿಯರ್‌ಗಳು, ಬ್ಯಾಂಕರ್‌ಗಳು ಮತ್ತು ತಜ್ಞರು ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಾರ್ವಜನಿಕರು ವಿವಿಧ ಮನೆಗಳು, ಪ್ಲಾಟ್‌ಗಳು, ಫ್ಲಾಟ್‌ಗಳು, ವ್ಯವಹಾರಗಳಿಗೆ ವಾಣಿಜ್ಯ ಪ್ಲಾಟ್‌ಗಳು, ಸಂಕೀರ್ಣಗಳು, ಹೊಸ ನಿರ್ಮಾಣ ಸಾಮಗ್ರಿಗಳು ಮತ್ತು ಹೊಸ ಒಳಾಂಗಣ ವಿನ್ಯಾಸ ಮಾದರಿಗಳನ್ನು ಒಂದೇ ಸೂರಿನಡಿ ವೀಕ್ಷಿಸಿ ಇಷ್ಟಪಡುವುದನ್ನು ಖರೀದಿಸಬಹುದು. ಮನೆ ನಿರ್ಮಿಸಲು ಯೋಚಿಸುತ್ತಿರುವ ಜನರು ಸಮಗ್ರ ಮಾಹಿತಿ ಪಡೆಯುತ್ತಾರೆ. ವೇಗವಾಗಿ ಬೆಳೆಯುತ್ತಿರುವ ಬೆಳಗಾವಿ ನಗರದ ಜನರು ಮನೆ ಹೊಂದುವ ಕನಸನ್ನು ನನಸಾಗಿಸಲು ಇಂತಹ ಪ್ರದರ್ಶನಗಳು ಅತ್ಯಗತ್ಯ. ಇದು ರಾಜ್ಯಾದ್ಯಂತ ಮಹಾನಗರ ಪ್ರದೇಶದ ಬಗ್ಗೆ ಜಾಗೃತಿ ಮೂಡಿಸುತ್ತದೆ. ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ಬೆಲ್ಕಾನ್ ಪ್ರದರ್ಶನವನ್ನು ಪ್ರಿಯಾ ಶಕ್ತಿ ಸ್ಟೀಲ್, ಓರಿಯೋನಿಸ್ ಬಿಲ್ಡರ್ಸ್, ಜಿಎಂ ಎಲೆಕ್ಟ್ರಿಕ್ಸ್, ಶ್ರೀರಾಮ್ ಇನ್ನೋವೇಶನ್, ವಿಶಾಲ್ ಇನ್ಫ್ರಾ ಬಿಲ್ಡ್, ವಿವಾ ಡೆವಲಪರ್ಸ್, ಅಮರ್ ಕನ್‌ಸ್ಟ್ರಕ್ಷನ್‌, ಸಾಯಿ ರಾಜ್ ಬಿಲ್ಡರ್ಸ್, ಚೈತನ್ಯ ಪ್ರಾಪರ್ಟೀಸ್, ನುರಾನಿ ಡೆವಲಪರ್ಸ್, ಪಾರ್ವತಿ ಕನ್‌ಸ್ಟ್ರಕ್ಸನ್‌, ಕೋನಿ ಎಲಿವೇಟರ್ಸ್, ಯಶ್ ಪಾಲಿ, ವಿಜಯ್ ಧಮ್ನೇಕರ್, ಫ್ಯಾಬ್ ಟೆಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾಯೋಜಿಸುತ್ತಿವೆ ಎಂದು ಮಾಹಿತಿ ನೀಡಿದರು.ಬೆಲ್ಕಾನ್ ಪ್ರದರ್ಶನಕ್ಕೆ ಸುಮಾರು 1.5 ಲಕ್ಷ ಜನರು ಭೇಟಿ ನೀಡಲಿದ್ದಾರೆ ಎಂದು ಸಂಘಟಕರು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಕ್ರೆಡೈ ಅಧ್ಯಕ್ಷ ಯುವರಾಜ್ ಹುಳಜಿ, ಕಾರ್ಯಕ್ರಮದ ಅಧ್ಯಕ್ಷ ಪ್ರಶಾಂತ ಪಾಟೀಲ, ಖಜಾಂಚಿ ಸುಧೀರ ಪಾನಾರೆ, ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ಸಚಿನ ಬೈಲವಾಡ, ಉಪಾಧ್ಯಕ್ಷ ಆನಂದ ಕುಲಕರ್ಣಿ, ಜಂಟಿ ಕಾರ್ಯದರ್ಶಿಗಳಾದ ಸಚಿನ್ ಕಳ್ಳಿಮನಿ, ಜ್ಞಾನೇಶ್ವರ ಸಾಯನೇಕರ, ವೀರೇಶ ಶೆಟ್ಟಣ್ಣನವರ, ಸಾಲ್ ಶೀಕ ಮಳಿ, ರಾಜೇಶ ಶೆಟ್ಟಣ್ಣನವರ, ರಾಜೇಶ್ ಮಳಿಜಿ ಉಪಸ್ಥಿತರಿದ್ದರು. ಮುಖ್ಯಸ್ಥೆ ದೀಪಾ ವಂಡ್ಕರ್, ಕರುಣಾ ಹಿರೇಮಠ, ಸವಿತಾ ಸಾಯನೇಕರ್, ಯುವ ವಿಭಾಗದ ಮುಖ್ಯಸ್ಥ ಅಭಿಷೇಕ್ ಮುಟ್ಕೇಕರ್, ಜಯರಾಜ್ ಮಾಳಿ ಮತ್ತು ಯಶ್ ಇವೆಂಟ್ಸ್ ನಿರ್ದೇಶಕ ಅಜಿಂಕ್ಯ ಕಲ್ಕುಂದ್ರಿಕರ್, ವಿನಯ್ ಕದಂ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ