ಬೆಳ್ತಂಗಡಿ: ಆಧಾರ್‌ ನೋಂದಣಿ, ತಿದ್ದುಪಡಿ ಶಿಬಿರ

KannadaprabhaNewsNetwork |  
Published : Aug 14, 2025, 12:00 AM IST
ಶಿಬಿರ  | Kannada Prabha

ಸಾರಾಂಶ

ಆಧಾರ್‌ ನೋಂದಣಿ ಮತ್ತು ತಿದ್ದುಪಡಿ ಶಿಬಿರ ಬೆಳ್ತಂಗಡಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಬೆಳ್ತಂಗಡಿ: ತಾಲೂಕು ಪಂಚಾಯಿತಿ ಬೆಳ್ತಂಗಡಿ ಮತ್ತು ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಟಾನ ಸಮಿತಿ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ಸಹಯೋಗದಲ್ಲಿ ಆಧಾರ್‌ ನೋಂದಣಿ ಮತ್ತು ತಿದ್ದುಪಡಿ ಶಿಬಿರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಸಮಿತಿ ಸದಸ್ಯ ಭವಾನಿಶಂಕರ್‌, ಉಪಸ್ಥಿತಿಯಲ್ಲಿ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಬಿ.ಪದ್ಮನಾಭ ಸಾಲ್ಯಾನ್‌ ಶಿಬಿರವನ್ನು ಉದ್ಘಾಟಿಸಿದರು. ಬೆಸ್ಟ್‌ ಫೌಂಡೇಶನ್‌ ಅಧ್ಯಕ್ಷ ರಕ್ಷಿತ್‌ ಶಿವರಾಂ ಕಾರ್ಯಕ್ರಮಕ್ಕೆ ಶುಭಕೋರಿದರು.

ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಸಮಿತಿಯ ಉಪಾಧ್ಯಕ್ಷ ಶೇಖರ್‌ ಕುಕ್ಕೇಡಿ, ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಸುರೇಶ್‌ ವಿಟ್ಲ, ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗದ ಮಾರ್ಕೆಟಿಂಗ್‌ ಮ್ಯಾನೇಜರ್‌ ಗುರುಪ್ರಸಾದ್‌, ಯುವನಿಧಿ ಯೋಜನೆಯ ಜಿಲ್ಲಾ ತರಬೇತುದಾರ ಮಂಜೂಷಾ ಹಾಗೂ ಗ್ಯಾರಂಟಿ ಯೋಜನೆಯ ತಾಲೂಕು ಅನುಷ್ಟಾನ ಸಮಿತಿಯ ಸದಸ್ಯರಾದ ನೇಮಿರಾಜ ಕಿಲ್ಲೂರು, ಸೌಮ್ಯ ಲಾಯಿಲ, ಮರಿಟಾ ಪಿಂಟೋ, ಶರೀಫ್‌ ಸಬರಬೈಲು, ಸತೀಶ್‌ ಹೆಗ್ಡೆ ವೇಣೂರು, ವಿಜಯ ಗೌಡ, ವಂದನಾ ಭಂಡಾರಿ, ವೀರಪ್ಪ ಮೊಯ್ಲಿ, ಕೇಶವ ನಾಯ್ಕ, ತಾಲೂಕು ಪಂಚಾಯಿತಿ ಅಧೀಕ್ಷಕರಾದ ಪ್ರಶಾಂತ್‌ ಡಿ. ಬಳಂಜ ಮತ್ತು ನೋಡೆಲ್‌ ಅಧಿಕಾರಿಯಾದ ಹೆರಾಲ್ಡ್‌ ಸ್ವಿಕ್ವೇರಾ ಉಪಸ್ಥಿತರಿದ್ದರು.ಅಂಚೆ ಇಲಾಖೆಯ ಮೇಲಂತಬೆಟ್ಟು ಶಾಖಾ ಅಂಚೆ ಮೇಲ್ವಿಚಾರಕರಾದ ಚೈತ್ರ, ಕೊಯ್ಯೂರು ಶಾಖಾ ಅಂಚೆ ಮೇಲ್ವಿಚಾರಕರಾದ ಸಂತೃಪ್ತಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕಾರ್ಯವನ್ನು ನಡೆಸಿಕೊಟ್ಟರು.ಸುಮಾರು ನೂರಕ್ಕೂ ಅಧಿಕ ಮಂದಿ ಶಿಬಿರದಲ್ಲಿ ಭಾಗವಹಿಸಿ ಅಧಾರ್‌ ನೊಂದಣಿ ಮತ್ತು ತಿದ್ದುಪಡಿಯನ್ನು ಮಾಡಿಸಿಕೊಂಡು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ