ದೊಡ್ಡಬಳ್ಳಾಪುರ: ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಗೆ ಜೂ.3 ರಂದು ಮತದಾನ ನಡೆಯಲಿದ್ದು, ಅರ್ಹ ಪದವೀಧರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಮೇ 6ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎನ್.ಶಿವಶಂಕರ್ ತಿಳಿಸಿದರು.
ಪದವೀಧರರ ಕ್ಷೇತ್ರದ ಅಂತಿಮ ಮತದಾರ ಪಟ್ಟಿಯಂತೆ 9378 ಪುರುಷ ಪದವೀಧರರು ಹಾಗೂ 8270 ಮಹಿಳಾ ಪದವೀಧರರು ಸೇರಿ ಒಟ್ಟು 17648 ಪದವೀಧರ ಮತದಾರರು ಪಟ್ಟಿಯಲ್ಲಿ ನೊಂದಾಯಿಸಿಕೊಂಡಿದ್ದಾರೆ.
ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿ:ಮತದಾರರ ನಿರಂತರ ನೋಂದಣಿ ಪ್ರಕ್ರಿಯೆಯು ಜಾರಿಯಲ್ಲಿರುತ್ತದೆ. ಈಗಾಗಲೇ 2023 ಡಿಸೆಂಬರ್ 31ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಚುರ ಪಡಿಸಲಾಗಿದೆ. ಹೊಸದಾಗಿ ನೋಂದಾಯಿಸಬೇಕಾದ ಮತದಾರರಿಗೆ ಮೇ 6ರ 4ರ ಸಂಜೆ 5.30 ರವರೆಗೆ ನೋಂದಣಿಗಾಗಿ ಅರ್ಜಿಯನ್ನು ಸ್ವೀಕರಿಸುವ ಪ್ರಕ್ರಿಯೆ ನಿರಂತರವಾಗಿ ಜಾರಿಯಲ್ಲಿರುತ್ತದೆ. ಕಾರಣ ಅರ್ಹರಿರುವ ಮತದಾರರು ನಿಗದಿ ಪಡಿಸಿದ ಕಾಲ ಮಿತಿಯೊಳಗೆ ನೋಂದಣಿ ಪ್ರಕ್ರಿಯೆಗಾಗಿ ತಮ್ಮ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ಮತದಾನ ಹಕ್ಕನ್ನು ಚಲಾಯಿಸಿ ಸುಭದ್ರವಾದ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಸೂಕ್ತ ಪಾತ್ರವಹಿಸಲು ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಹಾಯವಾಣಿ ಸಂಖ್ಯೆ-080-29902025, ಉಪವಿಭಾಗಾಧಿಕಾರಿ ಕಚೇರಿ (ದೊಡ್ಡಬಳ್ಳಾಪುರ ಉಪವಿಭಾಗ) ಸಹಾಯವಾಣಿ ಸಂಖ್ಯೆ- 080-27622037, ತಹಸೀಲ್ದಾರ್ ಕಚೇರಿ(ಹೊಸಕೋಟೆ ವಿಧಾನಸಭಾ ಕ್ಷೇತ್ರ) ಸಹಾಯವಾಣಿ ಸಂಖ್ಯೆ-080-27931237, ತಹಸೀಲ್ದಾರ್ ಕಚೇರಿ (ದೇವನಹಳ್ಳಿ ವಿಧಾನಸಭಾ ಕ್ಷೇತ್ರ) ಸಹಾಯವಾಣಿ ಸಂಖ್ಯೆ-080-22122999, ತಹಸೀಲ್ದಾರ್ ಕಚೇರಿ (ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ) ಸಹಾಯವಾಣಿ ಸಂಖ್ಯೆ-080-27622002, ತಹಸೀಲ್ದಾರ್ ಕಚೇರಿ (ನೆಲಮಂಗಲ ವಿಧಾನಸಭಾ ಕ್ಷೇತ್ರ) ಸಹಾಯವಾಣಿ ಸಂಖ್ಯೆ. 080-27722126 ಮೇಲಿನ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯು ಒಂದು ಅತ್ಯಂತ ಮಹತ್ವಪೂರ್ಣ ಹಾಗೂ ಪವಿತ್ರ ಕಾರ್ಯವಾಗಿರುತ್ತದೆ. ಕಾರಣ ಈ ಚುನಾವಣೆಯನ್ನು, ಮುಕ್ತ, ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತವಾಗಿ ಜರುಗುವಲ್ಲಿ ಪ್ರತಿಯೊಬ್ಬ ಮತದಾರರು ಹಾಗೂ ಎಲ್ಲಾ ರಾಜಕೀಯ ಪಕ್ಷದವರು ಹಾಗೂ ವರ್ಗದವರು ಸಕಾರತ್ಮಕವಾಗಿ ಕಾರ್ಯನಿರ್ವಹಿಸಿ ದೋಷರಹಿತ ಚುನಾವಣೆ ನಿರ್ವಹಿಸಬೇಕು ಎಂದು ಡಾ. ಶಿವಶಂಕರ್ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಸಂಗಪ್ಪ ಉಪಸ್ಥಿತರಿದ್ದರು.3ಕೆಡಿಬಿಪಿ1 - ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಡಾ.ಶಿವಶಂಕರ್ ಮಾತನಾಡಿದರು.