ಪ್ರತಿ ನಿತ್ಯ ಗಣನೀಯ ಏರಿಕೆ : 10 ಲಕ್ಷ ದತ್ತ ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಳ

KannadaprabhaNewsNetwork |  
Published : Jul 29, 2024, 01:50 AM ISTUpdated : Jul 29, 2024, 05:29 AM IST
ನಮ್ಮ ಮೆಟ್ರೋ | Kannada Prabha

ಸಾರಾಂಶ

ಪ್ರತಿ ನಿತ್ಯ ಮೆಟ್ರೋ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರುತ್ತಿದ್ದು, ಸದ್ಯ ಸರಾಸರಿ 7.45 ಲಕ್ಷ ಇರುವ ಪ್ರಯಾಣಿಕರ ಸಂಖ್ಯೆ ವರ್ಷಾಂತ್ಯಕ್ಕೆ ಹಳದಿ ಮಾರ್ಗ ತೆರೆದುಕೊಂಡ ಬಳಿಕ 10ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.

 ಬೆಂಗಳೂರು : ಪ್ರತಿ ನಿತ್ಯ ಮೆಟ್ರೋ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರುತ್ತಿದ್ದು, ಸದ್ಯ ಸರಾಸರಿ 7.45 ಲಕ್ಷ ಇರುವ ಪ್ರಯಾಣಿಕರ ಸಂಖ್ಯೆ ವರ್ಷಾಂತ್ಯಕ್ಕೆ ಹಳದಿ ಮಾರ್ಗ ತೆರೆದುಕೊಂಡ ಬಳಿಕ 10ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.

ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ನಮ್ಮ ಮೆಟ್ರೋ ಮಾರ್ಗದಿಂದ 4 ಲಕ್ಷ ಪ್ರಯಾಣಿಕರಿಗೆ ಪ್ರಯೋಜನ ಕಲ್ಪಿಸುವ ಗುರಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ಹೊಂದಿದೆ. ಆರಂಭಿಕವಾಗಿ ಕನಿಷ್ಠ ಎರಡು ಲಕ್ಷ ಜನತೆ ಪ್ರತಿ ದಿನ ಈ ಮಾರ್ಗದಲ್ಲಿ ಸಂಚರಿಸುವ ಸಾಧ್ಯತೆ ಇದೆ. ಆರ್‌.ವಿ.ರಸ್ತೆ- ಬೊಮ್ಮಸಂದ್ರ ನಡುವಿನ ಈ ಮಾರ್ಗ ಹೆಚ್ಚಾಗಿ ಟೆಕ್ಕಿಗಳಿಗೆ ಪ್ರಯೋಜನ ಆಗಲಿದೆ. ಪ್ರಮುಖವಾಗಿ ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸಿಲ್ಕ್‌ಬೋರ್ಡ್‌ ಜಂಕ್ಷನ್‌ ಹಾಗೂ ಎಲೆಕ್ಟ್ರಾನಿಕ್‌ ಸಿಟಿ ಈ ಮಾರ್ಗದ ಪ್ರಮುಖ ನಿಲ್ದಾಣಗಳು. ಸದ್ಯ ಇಲ್ಲಿ ಚೀನಾದಿಂದ ಬಂದಿರುವ ಒಂದು ಚಾಲಕರಹಿತ ರೈಲಿನ ತಪಾಸಣಾ ಸಂಚಾರ ನಡೆಯುತ್ತಿದೆ.

ಕಾಳೇನ ಅಗ್ರಹಾರ- ನಾಗವಾರ ಸಂಪರ್ಕಿಸುವ ಗುಲಾಬಿ ಮೆಟ್ರೋ 2025ರ ಮಾರ್ಚ್‌, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ ಮಾರ್ಗ 2026ರ ಏಫ್ರಿಲ್‌ಗೆ ಚಾಲನೆಯಾಗುವ ನಿರೀಕ್ಷೆಯಿದೆ. ಇವೆರಡು ಮಾರ್ಗದ ಆರಂಭವಾದ ಬಳಿಕ ಮೆಟ್ರೋ ಪ್ರಮಾಣಿಕರ ಸಂಖ್ಯೆ 20 ಲಕ್ಷ ದಾಟುವ ನಿರೀಕ್ಷೆಯಿದೆ.

ಕಳೆದ ಜೂನ್‌ನಲ್ಲಿ ಸರಾಸರಿ 7,45,659 ಮಂದಿ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸಿದ್ದಾರೆ. ಜೂ.19ರಂದು ಗರಿಷ್ಠ 8,080,71 ಪ್ರಯಾಣಿಕರು ಸಂಚರಿಸಿದ್ದಾರೆ. ಒಟ್ಟಾರೆ ಈ ತಿಂಗಳಲ್ಲಿ 2,22,63,299 ಜನರು ಮೆಟ್ರೋ ಬಳಸಿದ್ದು, ಒಟ್ಟು ₹ 58.23 ಕೋಟಿ ರುಪಾಯಿ ಆದಾಯ ಸಂಗ್ರಹವಾಗಿದೆ. ಜೂ.3ರಂದು ಗರಿಷ್ಠ 2,51,47,872 ಆದಾಯ ಬಂದಿದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆ ತಿಳಿಸಿದೆ.ಜೂನ್ ತಿಂಗಳಿಗೂ ಮೊದಲು ನಮ್ಮ ಮೆಟ್ರೋದ ದೈನಂದಿನ ಗರಿಷ್ಠ ಸರಾಸರಿ ಪ್ರಯಾಣಿಕರ ಸಂಖ್ಯೆ 7.18 ಲಕ್ಷದಷ್ಟಿತ್ತು. ಫೆಬ್ರವರಿಯಲ್ಲಿ 7.05 ಲಕ್ಷ, ಜನವರಿಯಲ್ಲಿ 7.01 ಲಕ್ಷ ಹಾಗೂ ಕಳೆದ ವರ್ಷ 2023ರ ಡಿಸೆಂಬರ್ ನಲ್ಲಿ 6.88 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!