ಬಿಎಂಟಿಸಿ ಬಸ್‌ಗೆ 3 ವರ್ಷದಲ್ಲಿ 150 ಜನ ಬಲಿ : 18 ವರ್ಷದಲ್ಲಿ ಬೆಂಗಳೂರಲ್ಲಿ 1142 ಜನ ಸಾವು

Published : Jul 06, 2026, 10:21 AM IST
BMTC Bus Accident

ಸಾರಾಂಶ

ನಗರದಲ್ಲಿ ಬಿಎಂಟಿಸಿ ಬಸ್‌ಗಳಿಂದ ಅಪಘಾತಕ್ಕೊಳಗಾಗಿ ಕಳೆದ 3 ವರ್ಷಗಳ ಅವಧಿಯಲ್ಲಿ ನಗರದ 150ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 18 ವರ್ಷಗಳಲ್ಲಿ 1,142 ಜನರು ಬಿಎಂಟಿಸಿ ಬಸ್‌ ಅಪಘಾತದಿಂದ ಮೃತಪಟ್ಟಿದ್ದಾರೆ.

 ಬೆಂಗಳೂರು :  ನಗರದಲ್ಲಿ ಬಿಎಂಟಿಸಿ ಬಸ್‌ಗಳಿಂದ ಅಪಘಾತಕ್ಕೊಳಗಾಗಿ ಕಳೆದ 3 ವರ್ಷಗಳ ಅವಧಿಯಲ್ಲಿ ನಗರದ 150ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 18 ವರ್ಷಗಳಲ್ಲಿ 1,142 ಜನರು ಬಿಎಂಟಿಸಿ ಬಸ್‌ ಅಪಘಾತದಿಂದ ಮೃತಪಟ್ಟಿದ್ದಾರೆ.

ಹತ್ತು ವರ್ಷಗಳ ಹಿಂದಿನ ಅಂಕಿ-ಅಂಶ ಗಮನಿಸಿದರೆ ಕಳೆದ ಏಳೆಂಟು ವರ್ಷಗಳಿಂದ ಈಚೆಗೆ ಬಿಎಂಟಿಸಿ ಬಸ್‌ ಅಪಘಾತದಿಂದ ಸಾವಿಗೀಡಾಗುವವರ ಸಂಖ್ಯೆ ಕಡಿಮೆಯಾಗಿದೆ. ಬಹುತೇಕ ರಸ್ತೆಗಳನ್ನು ಏಕಮುಖ ರಸ್ತೆ ಮಾಡಿರುವುದು. ಕಠಿಣ ಸಂಚಾರಿ ನಿಯಮಗಳ ಜಾರಿ, ಅನುಭವಿ ಚಾಲಕರ ನೇಮಕ ಸೇರಿದಂತೆ ವಿವಿಧ ಕ್ರಮಗಳಿಂದಾಗಿ ಬಿಎಂಟಿಸಿ ಬಸ್‌ಗಳಿಂದಾಗುತ್ತಿದ್ದ ಅವಘಡಗಳ ಸಂಖ್ಯೆ ಇಳಿಮುಖವಾಗಿದೆ. 2008ರಿಂದ 2014ರವರೆಗೆ ವರ್ಷದಲ್ಲಿ ಸರಾಸರಿ 90ಕ್ಕಿಂತ ಹೆಚ್ಚು ಜನರು ಬಿಎಂಟಿಸಿ ಬಸ್‌ಗಳಿಂದ ಸಾವಿಗೀಡಾಗುತ್ತಿದ್ದರು. ಆದರೆ ಕಳೆದ ಐದಾರು ವರ್ಷಗಳಲ್ಲಿ ಈ ಸಂಖ್ಯೆ ಸರಾಸರಿ 50ಕ್ಕೆ ಇಳಿದಿದೆ.

18 ವರ್ಷದಲ್ಲಿ 5864 ಅಪಘಾತ:

ಕಳೆದ 18 ವರ್ಷಗಳ ಅವಧಿಯಲ್ಲಿ 5,864 ಬಾರಿ ಬಿಎಂಟಿಸಿ ಬಸ್​ಗಳಿಂದ​ ಅಪಘಾತಗಳು ಸಂಭವಿಸಿವೆ. ಇದರಿಂದ1,142 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 3 ವರ್ಷಗಳಲ್ಲಿ ಎಲೆಕ್ಟ್ರಿಕ್​​ ಬಸ್​​ಗಳ ಅಪಘಾತದಿಂದಾಗಿ 40ಕ್ಕೂ ಹೆಚ್ಚು ಮತ್ತು ಸಾಮಾನ್ಯ ಬಸ್​​ಗಳಿಂದಾಗಿ 100ಕ್ಕೂ ಹೆಚ್ಚು ಜನರ ಜೀವ ಹಾನಿಯಾಗಿದೆ. ಕಳೆದ 1 ವರ್ಷದಲ್ಲಿ ನಡೆದಿರುವ ಸಾಮಾನ್ಯ​​ ಬಿಎಂಟಿಸಿ ಬಸ್​​ಗಳ 104 ಅಪಘಾತಗಳಿಂದಲೇ 31 ಜನ ಪ್ರಾಣ ಕಳೆದುಕೊಂಡಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಒತ್ತಡದಲ್ಲಿ ಕೆಲಸವೇ ಘಟನೆಗೆ ಕಾರಣ?

ಬಿಎಂಟಿಸಿ ಸಿಬ್ಬಂದಿ ಅತ್ಯಂತ ಒತ್ತಡದಲ್ಲಿ ಕೆಲಸ ಮಾಡುತ್ತಿರುವುದೇ ಇಂತಹ ಘಟನೆಗಳ ಹೆಚ್ಚಳಕ್ಕೆ ಕಾರಣ ಎಂಬ ಮಾತು ಮೊದಲಿನಿಂದಲೂ ಕೇಳಿ ಬರುತ್ತಿವೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ರೂಟ್‌ಗ​​ಳನ್ನು ಕ್ಲಿಯರ್ ಮಾಡಲು ಸಿಬ್ಬಂದಿಗೆ ಟಾರ್ಗೆಟ್​​ ನೀಡಲಾಗುತ್ತದೆ. 1991-95ರ ನಿಯಮಗಳನ್ನೇ ಇನ್ನೂ ಅನುಸರಿಸುತ್ತಿದ್ದಾರೆ. ಪ್ರತಿದಿನ 250 ರಿಂದ 300 ಕಿ.ಮೀ. ಬಸ್ ಓಡಿಸಲು ಅಧಿಕಾರಿಗಳು ಹೇಳುತ್ತಿದ್ದಾರೆ ಎನ್ನಲಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಓಸಿ ವಿನಾಯ್ತಿ: ವಿದ್ಯುತ್‌ ಸಂಪರ್ಕಕ್ಕೆ ಅರ್ಜಿಗೆ ಆ.15ರವರೆಗೆ ಅವಕಾಶ
ಆ್ಯಂಬುಲೆನ್ಸ್‌ ಚಾಲಕರಿಗೆ 15 ನಿಮಿಷಗಳ ‘ಡೆಡ್‌ಲೈನ್‌!’