10 ದಿನದಲ್ಲಿ 2 ವಾಯುಭಾರ ಕುಸಿತ ರಾಜ್ಯದಲ್ಲೂ ಮಳೆಯಾಗೋ ಸಾಧ್ಯತೆ : ಹವಾಮಾನ ತಜ್ಞರು

Published : Dec 08, 2024, 11:22 AM IST
Karnataka Rain

ಸಾರಾಂಶ

ಮುಂದಿನ 10 ದಿನದಲ್ಲಿ ಬಂಗಾಳಕೊಲ್ಲಿಯಲ್ಲಿ ಎರಡು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ಇದರ ಪ್ರಭಾವದಿಂದ ರಾಜ್ಯದಲ್ಲೂ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಬೆಂಗಳೂರು: ಮುಂದಿನ 10 ದಿನದಲ್ಲಿ ಬಂಗಾಳಕೊಲ್ಲಿಯಲ್ಲಿ ಎರಡು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ಇದರ ಪ್ರಭಾವದಿಂದ ರಾಜ್ಯದಲ್ಲೂ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

 ಫೆಂಗಲ್‌ ಚಂಡಮಾರುತದ ಹಾನಿಯಿಂದ ಇದೀಗ ಸುಧಾರಿಸಿಕೊಳ್ಳುತ್ತಿರುವಾಗಲೇ ಮತ್ತೆರಡು ವಾಯುಭಾರ ಕುಸಿತ ಸೃಷ್ಟಿಯಾಗುವ ಲಕ್ಷಣ ಬಂಗಾಳಕೊಲ್ಲಿ ಸಾಗರದಲ್ಲಿ ಕಂಡು ಬರುತ್ತಿದೆ. ಮೊದಲ ವಾಯುಭಾರ ಕುಸಿತ ಒಂದೆರಡು ದಿನದಲ್ಲಿ ತೀವ್ರ ಸ್ವರೂಪ ಪಡೆದು ಕಾಣಿಸಿಕೊಳ್ಳಲಿದ್ದು, ಇದರ ಪ್ರಭಾವದಿಂದ ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಡಿ.14-15ಕ್ಕೆ ಮಳೆಯಾಗಲಿದೆ.

 2ನೇ ವಾಯುಭಾರ ಕುಸಿತ ಡಿ.16ರ ಬಳಿಕ ರೂಪುಗೊಳ್ಳಲಿದ್ದು, ಇದರಿಂದ ಡಿ.17-18ಕ್ಕೆ ರಾಜ್ಯದಲ್ಲಿ ಮಳೆಯಾಗಲಿದೆ. ರಾಜ್ಯದಲ್ಲಿ ಬಹುತೇಕ ಬೆಳೆಗಳು ಕಟಾವಿಗೆ ಬಂದಿದ್ದು, ರೈತರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದು ಹವಾಮಾನ ತಜ್ಞ ಶ್ರೀನಿವಾಸ್‌ ರೆಡ್ಡಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

PREV

Recommended Stories

ಸಹಕಾರ ಸಂಘದ ಸೌಲಭ್ಯಗಳನ್ನು ಸದ್ಬಳಸಿಕೊಳ್ಳಿ
ರೈತ ಕುಟುಂಬಗಳ ಆರ್ಥಿಕ ಸುಧಾರಣೆಗೆ ಕ್ರಮ: ಶರತ್‌