ಬೆಂಗಳೂರು ಪೊಲೀಸ್‌ ಆಯುಕ್ತ ಸೇರಿ 32 ಐಪಿಎಸ್‌ಗಳ ವರ್ಗಾವಣೆ

Published : Nov 19, 2026, 11:57 AM IST
police

ಸಾರಾಂಶ

ರಾಜ್ಯ ಪೊಲೀಸ್ ಇಲಾಖೆಯ ಆಡಳಿತದಲ್ಲಿ ಸರ್ಕಾರ ದೊಡ್ಡಮಟ್ಟದ ಬದಲಾವಣೆ ಮಾಡಿದ್ದು, ಬೆಂಗಳೂರು ಪೊಲೀಸ್ ಆಯುಕ್ತ ಸೇರಿ 32 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಮಂಗಳವಾರ ಆದೇಶ ಹೊರಡಿಸಿದೆ.

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯ ಆಡಳಿತದಲ್ಲಿ ಸರ್ಕಾರ ದೊಡ್ಡಮಟ್ಟದ ಬದಲಾವಣೆ ಮಾಡಿದ್ದು, ಬೆಂಗಳೂರು ಪೊಲೀಸ್ ಆಯುಕ್ತ ಸೇರಿ 32 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಮಂಗಳವಾರ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ನಡೆದಿದೆ.

ಸೀಮಂತ್ ಕುಮಾರ್ ಸಿಂಗ್ ಅವರಿಗೆ ರಾಜ್ಯ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆ ಎಡಿಜಿಪಿ ಹುದ್ದೆ

ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಸೀಮಂತ್ ಕುಮಾರ್ ಸಿಂಗ್ ಅವರಿಗೆ ರಾಜ್ಯ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆಯ ಎಡಿಜಿಪಿ ಹುದ್ದೆ ನೀಡಲಾಗಿದೆ. ಅವಿಭಜಿತ ಬೆಂಗಳೂರಿಗೆ ಸಿಂಗ್ ಅವರು ಕೊನೆ ಆಯುಕ್ತರಾಗಿದ್ದಾರೆ.

ಇನ್ನು ನೂತನವಾಗಿ ಸೃಜಿಸಲಾದ ಬೆಂಗಳೂರು ಮುಖ್ಯ ಪೊಲೀಸ್ ಆಯುಕ್ತರಾಗಿ ಎಡಿಜಿಪಿ ಹಿತೇಂದ್ರ ಹಾಗೂ ಸಂಚಾರ ಆಯುಕ್ತರಾಗಿ ಹೇಮಂತ್ ನಿಂಬಾಳ್ಕರ್ ನಿಯೋಜನೆಗೊಂಡಿದ್ದಾರೆ. ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ಸೇರಿ ಮೂರು ಪ್ರಕರಣಗಳ ಎಸ್ಐಟಿ ಮುಖ್ಯಸ್ಥರಾಗಿದ್ದ ಸಿಐಡಿ ಎಡಿಜಿಪಿ ಬಿಜಯ್ ಕುಮಾರ್ ಸಿಂಗ್ ಅವರಿಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೊಣೆ ನೀಡಲಾಗಿದೆ. ಅದೇ ಹೊಸದಾಗಿ ರಚಿಸಲಾದ ಐದು ಕಮಿಷನರೇಟ್‌ಗಳಿಗೆ ನಾಲ್ವರು ಐಜಿಗಳು ಹಾಗೂ ಓರ್ವ ಡಿಐಜಿ ಅಧಿಕಾರಿಯನ್ನು ಸರ್ಕಾರ ನೇಮಿಸಿದೆ.

ವರ್ಗಾವಣೆ ಪಟ್ಟಿ ಹೀಗಿದೆ:

ಎಡಿಜಿಪಿಗಳಾದ ಸೀಮಂತ್ ಕುಮಾರ್ ಸಿಂಗ್ (ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ), ಆರ್‌.ಹಿತೇಂದ್ರ (ಮುಖ್ಯ ಪೊಲೀಸ್ ಆಯುಕ್ತ ಬೆಂಗಳೂರು), ಬಿ.ಕೆ.ಸಿಂಗ್ (ಕಾನೂನು ಮತ್ತು ಸುವ್ಯವಸ್ಥೆ), ಎಸ್‌.ಮುರುಗನ್ (ಲೋಕಾಯುಕ್ತ), ಹೇಮಂತ್.ಎಂ.ನಿಂಬಾಳ್ಕರ್‌ (ಆಯುಕ್ತ, ಸಂಚಾರ ಮತ್ತು ರೌಡಿ ನಿಗ್ರಹ ದಳ), ಮನೀಷ್ ಕರ್ಬಿಕರ್ (ಸಂವಹನ ಹಾಗೂ ಆಧುನೀಕರಣ ವಿಭಾಗ). ಐಜಿಪಿಗಳಾದ ಲಾಬೂರಾಮ್ (ಆಯುಕ್ತ, ಬೆಂಗಳೂರು ಕೇಂದ್ರ), ಡಾ.ಪಿ.ಎಸ್.ಹರ್ಷ (ಆಯುಕ್ತ, ಬೆಂಗಳೂರು ಪೂರ್ವ), ವಿಕಾಸ್ ಕುಮಾರ್ ವಿಕಾಸ್‌ (ಆಯುಕ್ತ, ಬೆಂಗಳೂರು ಪಶ್ಚಿಮ), ಎನ್‌.ಶಶಿಕುಮಾರ್ (ಪಶ್ಚಿಮ ವಲಯ), ಡಾ.ಎಂ.ಬಿ.ಬೋರಲಿಂಗಯ್ಯ (ಆಯುಕ್ತ, ಬೆಂಗಳೂರು ಉತ್ತರ), ಅನುಪಮ್ ಅಗರ್ವಾಲ್‌ (ಕೆಎಸ್‌ಆರ್‌ಪಿ), ಡಿಐಜಿಗಳಾದ ಡಾ.ಎಸ್‌.ಡಿ.ಶರಣಪ್ಪ (ರೈಲ್ವೆ ಪೊಲೀಸ್), ಸಿ.ವಂಶಿಕೃಷ್ಣ (ಆಯುಕ್ತ, ಬೆಂಗಳೂರು ದಕ್ಷಿಣ), ಕುಲದೀಪ್ ಕುಮಾರ್ ಜೈನ್‌ (ಕಲುಬರಗಿ ಆಯುಕ್ತ), ಎಂ.ಪುಟ್ಟಮಾದಯ್ಯ (ದಕ್ಷಿಣ ವಲಯ), ಡಾ.ಎಂ.ಅಶ್ವಿನಿ (ನೇಮಕಾತಿ), ಜಿ.ಕೆ.ರಶ್ಮಿ (ವಿಚಕ್ಷಣಾ ದಳ ಜಲಸಂಪನ್ಮೂಲ ಇಲಾಖೆ), ಡಾ.ಅನೂಪ್.ಎ.ಶೆಟ್ಟಿ (ಡಿಸಿಪಿ ಸಂಚಾರ ಪೂರ್ವ), ಲಕ್ಷ್ಮಣ್ ನಿಂಬರಗಿ (ಡಿಸಿಪಿ ಸಿಎಆರ್‌), ಚನ್ನಬಸವ ಲಂಗೋಟಿ (ಡಿಸಿಪಿ ಇಂದಿರಾನಗರ), ಡಿ.ಎಲ್.ನಾಗೇಶ್ (ಡಿಸಿಪಿ ಯಶವಂತಪುರ), ಲೋಕೇಶ್ ಭರಮಪ್ಪ ಜಗಲಾಸರ್‌ (ಡಿಸಿಪಿ ಸಂಚಾರ ಕೇಂದ್ರ), ಎನ್‌.ಯತೀಶ್ (ಡಿಸಿಪಿ ಕೆಂಗೇರಿ), ಸೈದುಲು ಅಡಾವತ್‌ (ಎಸ್ಪಿ ಐಎಸ್‌ಡಿ), ಬಿ.ಎಲ್‌.ಶ್ರೀಹರಿಬಾಬು (ಡಿಸಿಪಿ ವೈಟ್‌ಫೀಲ್ಡ್‌), ಡಾ.ಎಂ.ಎಸ್‌.ಗೀತಾ (ಡಿಸಿಪಿ ಪೂರ್ವ), ರಂಜಿತ್ ಕುಮಾರ್ ಭಂಡಾರು (ಡಿಸಿಪಿ ಆಡಳಿತ ಬೆಂಗಳೂರು), ಕೆ.ವಿ.ಅಶೋಕ್ (ಡಿಸಿಪಿ ಪೀಣ್ಯ), ವಿಕ್ರಂ ಅಮಟೆ (ಡಿಸಿಪಿ ಉತ್ತರ), ಕೆ.ಲಕ್ಷ್ಮೀ ಗಣೇಶ್ (ಡಿಸಿಪಿ ಗಾಂಧಿನಗರ) ಹಾಗೂ ಪಿ.ವಿ.ಸ್ನೇಹ (ಡಿಸಿಪಿ, ಪಶ್ಚಿಮ ಸಂಚಾರ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

1000 ಎಕ್ರೇಲಿ ಸ್ಟಾರ್ಟ್‌ಅಪ್‌ ಪಾರ್ಕ್‌ ಗುರಿ: ಎಂಬಿಪಾ
ಬೆಂಗಳೂರು : 5 ಪೊಲೀಸ್‌ ಆಯುಕ್ತರ ನೇಮಕ - ಒಕ್ಕಲಿಗ ಹಿತೇಂದ್ರಗೆ ಮುಖ್ಯ ಆಯುಕ್ತ ಹುದ್ದೆ