ಬೆಂಗಳೂರು : ಕಳೆದ ಲೋಕಸಭಾ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಸಂಬಂಧ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಆ.5ರಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಬಂದೋಬಸ್ತ್ ಕರ್ತವ್ಯಕ್ಕೆ 4,459 ಪೊಲೀಸರನ್ನು ನಿಯೋಜಿಸಲಾಗಿದೆ.
12 ಡಿಸಿಪಿ, 45 ಎಸಿಪಿ, 128 ಪಿಐ, 421 ಎಎಸ್‌ಐ/ಪಿಎಸ್‌ಐ, 3,272 ಪಿಸಿ/ಹೆಚ್‌ಸಿ, 591 ಮಹಿಳಾ ಸಿಬ್ಬಂದಿಯನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅಂತೆಯೆ ಸಂಚಾರ ವಿಭಾಗದ ಬಂದೋಬಸ್ತ್ ಕರ್ತವ್ಯಕ್ಕೆ ಇಬ್ಬರು ಡಿಸಿಪಿಗಳಿಗೆ ಹೊಣೆ ನೀಡಲಾಗಿದೆ.
ಇದರೊಂದಿಗೆ 14 ಪುರುಷ ಕೆಎಸ್‌ಆರ್‌ಪಿ, 2 ಮಹಿಳಾ ಕೆಎಸ್ಆರ್‌ಪಿ, 3 ವಾಟರ್ ಜೆಟ್ ವಾಹನ, 4 ಅಗ್ನಿಶಾಮಕ ವಾಹನ, 6 ಆ್ಯಂಬುಲೆನ್ಸ್, 15 ಡಿಎಸ್‌ಎಂಡಿ/ಎಚ್‌ಎಚ್‌ಎಂಡಿ, 1 ಡಿ ಸ್ಕ್ವಾಡ್, 1 ಗರುಡಾ ಪಡೆ, 1 ಆ್ಯಂಟಿ ಸ್ಟ್ಯಾಂಪೆಡ್ ಸ್ಕ್ವಾಡ್, 1 ಕ್ಯೂಆರ್‌ಟಿ ತಂಡ, 1 ಕಬ್ಬಡಿ ತಂಡ ಸೇರಿದಂತೆ ವಿಶೇಷ ಪಡೆಗಳನ್ನು ಪ್ರತಿಭಟನೆಯ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.