41 ಶಿಕ್ಷಕರು, ಉಪನ್ಯಾಸಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ

Published : Sep 05, 2026, 12:15 PM IST
Teachers Day

ಸಾರಾಂಶ

ಶಾಲಾ ಶಿಕ್ಷಣ ಇಲಾಖೆಯು 2026ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ. 20 ಪ್ರಾಥಮಿಕ, 11 ಪ್ರೌಢ ಶಾಲೆ. ಮತ್ತು ಇಬ್ಬರು ಪಿಯು ಕಾಲೇಜು ಪ್ರಾಂಶುಪಾಲರು, ಎಂಟು ಉಪನ್ಯಾಸಕರು ಸೇರಿ ಒಟ್ಟು 41 ಬೋಧಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಂಗಳೂರು : ಶಾಲಾ ಶಿಕ್ಷಣ ಇಲಾಖೆಯು 2026ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ. 20 ಪ್ರಾಥಮಿಕ, 11 ಪ್ರೌಢ ಶಾಲೆ. ಮತ್ತು ಇಬ್ಬರು ಪಿಯು ಕಾಲೇಜು ಪ್ರಾಂಶುಪಾಲರು, ಎಂಟು ಉಪನ್ಯಾಸಕರು ಸೇರಿ ಒಟ್ಟು 41 ಬೋಧಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದೇ ವೇಳೆ ಇಬ್ಬರು ಖಾಸಗಿ ಶಾಲಾ ಶಿಕ್ಷಕರನ್ನು ಹಾಗೂ ಎರಡು ಶಾಲೆಗಳನ್ನು ಉತ್ತಮ ಶಾಲೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶನಿವಾರ ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಉತ್ತಮ ಶಿಕ್ಷಕ ಪ್ರಶಸ್ತಿ ಗೌರವ ನೀಡಿ ಸನ್ಮಾನಿಸಲಿದ್ದಾರೆ.

ಶಿಕ್ಷಕರು, ಉಪನ್ಯಾಸಕರು ತಮ್ಮ ಶಾಲೆ, ಕಾಲೇಜಿನಲ್ಲಿ ತರಗತಿ ಚಟುವಟಿಕೆ, ಪರೀಕ್ಷೆ, ಮೌಲ್ಯಮಾಪನ ಸೇರಿ ಇತರೆ ದೈನಂದಿನ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ, ಬೌದ್ಧಿಕ, ದೈಹಿಕ ಬೆಳವಣಿಗೆಯಲ್ಲಿ ತಮ್ಮದೇ ಆದ ವಿಶೇಷ ಕೊಡುಗೆ ನೀಡಿರುವುದು, ಸ್ವಯಂ ಸೇವಾ ಸಂಸ್ಥೆಗಳ ಒಡನಾಟದೊಂದಿಗೆ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ, ಇಲಾಖೆಯ ಕಾರ್ಯಗಳಲ್ಲಿ ನೆರವಾಗಿರುವುದು ಸೇರಿ ಹಲವು ಅಂಶಗಳನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

20 ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು:

ಸಿ.ಉಮಾ- ಕೆಂಪತಿಮ್ಮನಹಳ್ಳಿ ಶಾಲೆ, ದೇವನಹಳ್ಳಿ ತಾಲೂಕು, ಬಸಪ್ಪ ಪರಪ್ಪ ಪಾಟೀಲ- ಕೆಎಚ್‌ಪಿಎಸ್‌, ಹಲ್ಲೂರು ಕ್ರಾಸ್‌, ಹಿರೇಕೆರೂರು ತಾಲೂಕು, ಅಶೋಕ್- ಹೆಸಕುತ್ತೂರು ಶಾಲೆ, ಕುಂದಾಪುರ ತಾ., ಕೆ.ಸುರೇಶ್- ಗುಂಡರದೊಡ್ಡಿ ಶಾಲೆ, ದೇವದುರ್ಗ ತಾ., ಹಣಮಂತಪ್ಪ ಕಾತರಕಿ- ಕೆಂಗಲಗುತ್ತಿ ಶಾಲೆ, ವಿಜಯಪುರ ಗ್ರಾಮಾಂತರ, ಉಷಾ ವಿ.ನಾಯಕ- ಹೊನ್ನಾವರ ಶಾಲೆ, ಹೊನ್ನಾವರ ತಾ., ಮಸ್ತಾನ್ ವಲಿ- ಗುಟ್ಟಹಳ್ಳಿ ಶಾಲೆ, ಚಿಂತಾಮಣಿ ತಾಲೂಕು.

ಪ್ರಭಾವತಿ ಹಾಲೆನ್ನವರ (ಮುಖ್ಯಶಿಕ್ಷಕಿ)- ಮರಾಠಿ ಪ್ರಾಥಮಿಕ ಶಾಲೆ, ಜಾಫರವಾಡಿ, ಬೆಳಗಾವಿ ಗ್ರಾಮಾಂತರ, ಸರೋಜಮ್ಮ- ಸತ್ತೇಗಾಲ ಅಗ್ರಹಾರ ಶಾಲೆ, ಕೊಳ್ಳೇಗಾಲ ತಾ. ನಿಂಗಪ್ಪ(ಮುಖ್ಯ ಶಿಕ್ಷಕ)- ಗುಂಜಬಬಲಾದ ಶಾಲೆ, ಆಲಂದ ತಾ., ಎನ್.ಎಂ. ರತ್ನಮ್ಮ- ಕೆಂಬತ್ತಳ್ಳಿ ಶಾಲೆ, ಬೆಂಗಳೂರು, ನೇಮಣ್ಣ ಬಮ್ಮಣ್ಣ- ಜಿನಸೇನಾಚಾರ್ಯ ಪ್ರಾಥಮಿಕ ಶಾಲೆ, ತೇರದಾಳ, ಜಮಖಂಡಿ ತಾ., ರಾಮಚಂದ್ರ ಈ ನಾಯ್ಕ- ಗಣಪತಿ ಗಲ್ಲಿ ಶಾಲೆ, ಯಲ್ಲಾಪುರ ತಾಲೂಕು.

ಎಂ.ಮಾಲಿನಿ- ಮುದಿಗೌಡನಹಟ್ಟಿ ಶಾಲೆ, ಕೊರಟಗೆರೆ ತಾ., ಬಿ.ಡಿ. ಕುಮಾರನಾಯ್ಕ- ಚಿಕ್ಕಮಾಗಡಿ ತಾಂಡಾ ಶಾಲೆ, ಶಿಕಾರಿಪುರ ತಾ., ಕೆ.ಎಸ್. ಕೃಷ್ಣಮೂರ್ತಿ- ಗೃಹಲಕ್ಷ್ಮೀ ಲೇಔಟ್ ಶಾಲೆ, ಬೆಂ.ಉತ್ತರ, ಮಲ್ಲಿಕಾರ್ಜುನ ಬಡಿಗೇರ- ಸದಾಶಿವಪುರ ಶಾಲೆ, ಹೊನ್ನಾಳಿ ತಾಲೂಕು, ವಿ.ಎಸ್. ಪ್ರೇಮಕುಮಾರ್- ಹೆಗ್ಗೆರೆ, ತುರುವೇಕೆರೆ ತಾ., ಎಚ್. ದುರಗಪ್ಪ-ಕೊಂಚಿಗೇರಿ ಶಾಲೆ, ಸಿರಗುಪ್ಪ ತಾ., ಮೈಲಾರಪ್ಪ ಬೂದಿಹಾಳ-ಹನವಾಳ ಶಾಲೆ, ಗಂಗಾವತಿ ತಾಲೂಕು

10 ಮಂದಿ ಪ್ರೌಢ ಶಾಲಾ ಶಿಕ್ಷಕರು:

ಸಿದ್ದಪ್ಪ ವೀರಭದ್ರಪ್ಪ ಬಿರಾದಾರ- ಚಿಬ್ಬಲಗೇರಿ ಶಾಲೆ, ಹಳಿಯಾಳ ತಾ., ಎಂ. ಶೈನಾಕುಮಾರಿ- ಕೆಪಿಎಸ್‌ ಜೀವನಬಿಮಾನಗರ, ಬೆಂಗಳೂರು, ಕುಬೇರನಾಯ್ಕ ಬಿ.- ತಮ್ಮಡಿಹಳ್ಳಿ, ಶಿವಮೊಗ್ಗ ತಾ., ನೀಲಕಂಠ ಗಾವಂಕರ್‌(ಮುಖ್ಯಶಿಕ್ಷಕ)- ದೇವನಹಳ್ಳಿ ಶಾಲೆ, ದೇವನಹಳ್ಳಿ ತಾ., ವಿ.ವೆಂಕಟೇಶ(ಮುಖ್ಯ ಶಿಕ್ಷಕರು)-ಗೂಳೂರು ಶಾಲೆ, ಬಾಗೇಪಲ್ಲಿ ತಾ., ಮಮತಾ ಆರ್. ನಾಯ್ಕ(ಮುಖ್ಯ ಶಿಕ್ಷಕಿ)- ಆರ್‌ಎಂಎಸ್‌ಎ ಅಗನಾಶಿನಿ, ಕುಮಟಾ ತಾ., ರೋಶನ್ ಅಲೆಗ್ಸಾಂಡರ್‌ ಪಿಂಟೊ- ಕಾರ್ಮಲ್‌ ಹೈಸ್ಕೂಲ್‌, ಮೋದನಕಾಂಪು, ಬಂಟ್ವಾಳ ತಾ., ಜಯಶೀಲ- ಆದರ್ಶ ವಿದ್ಯಾಲಯ, ಮೈಸೂರು ದಕ್ಷಿಣ, ಟಿ.ಮಥಾಯಿ,-ಮುತ್ತಿನಕೊಪ್ಪ ಶಾಲೆ, ನರಸಿಂಹರಾಜ ತಾ., ಕೆ.ಟಿ. ಜಯಪ್ಪ- ಆರ್‌ಎಂಎಸ್‌ಐ ನಿಟ್ಟುವಳ್ಳಿ, ದಾವಣಗೆರೆ ತಾ., ಆನಂದ ಮಾದೇವ ಝುಂಡೆ- ಟಕ್ಕಲಕಿ ಶಾಲೆ, ವಿಜಯಪುರ ಗ್ರಾಮಾಂತರ ತಾ.

ಪಿಯು ಪ್ರಾಂಶುಪಾಲರು, ಉಪನ್ಯಾಸಕರು:

ಶ್ರೀನಿವಾಸ ಡಿ.- ಕೆ.ಆರ್.ನಗರ ಕಾಲೇಜು, ಮೈಸೂರು, ಎಲ್. ಸೌಮ್ಯ- ಮಲ್ಲೇಶ್ವರಂ ಕಾಲೇಜು, ಬೆಂಗಳೂರು, ಶ್ರೀಕಂಠಯ್ಯ(ಪ್ರಾಂಶುಪಾಲ)- ರಾಜಾಜಿನಗರ ಪಿಯು ಕಾಲೇಜು, ಬೆಂಗಳೂರು, ಬಿ.ಜೈರಾಮ್(ಪ್ರಾಂಶುಪಾಲ)- ಚಿಕ್ಕನಹಳ್ಳಿ ಪಿಯು ಕಾಲೇಜು,ಶಿರಾ ತಾ., ಎಚ್.ಪ್ರಮೀಳಾ- ವಾಣಿವಿಲಾಸ ಕಾಲೇಜು, ಬೆಂಗಳೂರು, ಎಚ್.ವಿ. ವಾಸು- ಕುವೆಂಪು ನಗರ ಕಾಲೇಜು, ಮೈಸೂರು, ನಜೀಮಾ ಪಠಾಣ್- ನವರಸಪುರ ಕಾಲೇಜು, ವಿಜಯಪುರ, ನಿಂಗಪ್ಪ ಕುರುಬರ- ಚಿಕ್ಕೋಡಿ ಕಾಲೇಜು, ಬೆಳಗಾವಿ, ಎಂ. ಇಬ್ರಾಹಿಂ- ಉಪ್ಪಿನಂಗಡಿ ಕಾಲೇಜು, ದ.ಕನ್ನಡ, ಸವಿತಾ ಬಿ.- ಜೇವರ್ಗಿ ಕಾಲೇಜು, ಕಲಬುರಗಿ.

ಉತ್ತಮ ಶಾಲೆ ಪ್ರಶಸ್ತಿ

ಶಾಸಕರ ಸರ್ಕಾರಿ ಮಾದರಿ ಶಾಲೆ, ನಂ.1, ಹಳಿಯಾಳ

ಸರ್ಕಾರಿ ಪ್ರೌಢಶಾಲೆ, ಕರಿಕಟ್ಟಿ, ತಾ.ಸವದತ್ತಿ, ಬೆಳಗಾವಿ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕಂಬಳಕ್ಕೆ 5 ಕೋಟಿ ರು. ವಿಶೇಷ ಅನುದಾನ: ಸಿಎಂ ಡಿಕೆಶಿ ಭರವಸೆ
ಕನ್ನಾಳೆ, ಜ್ಞಾನೇಂದ್ರನಿಗೆ ದಿಲ್ಲೀಲೇ ದೋಸ್ತಿ!