ಬನ್ನೇರುಘಟ್ಟ ಸಫಾರಿಯಲ್ಲಿ ನಡುರಸ್ತೆಯಲ್ಲಿ ನಿಂತು ಬಸ್‌ ಅಡ್ಡಗಟ್ಟಿದ ಸಾಕಾನೆ : ಆತಂಕ

Published : Apr 18, 2025, 07:49 AM IST
wild elephants

ಸಾರಾಂಶ

ಬನ್ನೇರುಘಟ್ಟ ಸಫಾರಿಯಲ್ಲಿರುವ ಸಾಕಾನೆಯೊಂದು ನಡುರಸ್ತೆಯಲ್ಲಿ ನಿಂತು ಸುಮಾರು ಒಂದು ಗಂಟೆಗೂ ಅಧಿಕ ಸಮಯ ಬಸ್ ಅಡ್ಡಗಟ್ಟಿ ಪ್ರಯಾಣಿಕರಿಗೆ ಆತಂಕದ ವಾತಾವರಣ ಸೃಷ್ಠಿಸಿದ ಘಟನೆ ನಡೆದಿದೆ.

ಬೆಂಗಳೂರು ದಕ್ಷಿಣ: ಬನ್ನೇರುಘಟ್ಟ ಸಫಾರಿಯಲ್ಲಿರುವ ಸಾಕಾನೆಯೊಂದು ನಡುರಸ್ತೆಯಲ್ಲಿ ನಿಂತು ಸುಮಾರು ಒಂದು ಗಂಟೆಗೂ ಅಧಿಕ ಸಮಯ ಬಸ್ ಅಡ್ಡಗಟ್ಟಿ ಪ್ರಯಾಣಿಕರಿಗೆ ಆತಂಕದ ವಾತಾವರಣ ಸೃಷ್ಠಿಸಿದ ಘಟನೆ ನಡೆದಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಎಂಟು ಸಾಕಾನೆಗಳು ಮಿಲ್ಟ್ರಿ ಗುಡ್ಡೆ ಬಯಲು ಬಳಿಯ ಕೆರೆಗೆ ನೀರು ಕುಡಿಯಲು ಬಂದಿರುವ ಸಂದರ್ಭದಲ್ಲಿ ವನರಾಜ ಎಂಬ ಆನೆಯೊಂದು ಮುನಿನಗರದ ಗುಲ್ಲಹಟ್ಟಿ ಕಾವಲ್ ಬಳಿ ರಸ್ತೆಯಲ್ಲಿ ಬಿಎಂಟಿಸ್ ಬಸ್ ಅಡ್ಡಗಟ್ಟಿದೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಬನ್ನೇರುಘಟ್ಟ ವಲಯ ಅರಣ್ಯ ಅಧಿಕಾರಿ ಶಂಕರ್ ಡಿ.ಅಂತರಗಟ್ಟಿ ಹಾಗೂ ಉದ್ಯಾನವನದ ಸಿಬ್ಬಂದಿ ಸಾಕಾನೆಯನ್ನು ಕಾಡಿನತ್ತ ಓಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು. 

ನಂತರ‌ ಮಾತನಾಡಿದ ಬನ್ನೇರುಘಟ್ಟ ವಲಯ ಅರಣ್ಯ ಅಧಿಕಾರಿ ಶಂಕರ್.ಡಿ. ಅಂತರಗಟ್ಟಿ, ಐದಾರು ತಿಂಗಳಿಗೊಮ್ಮೆ ಇಂತಹ ಘಟನೆಗಳು‌ ನಡೆಯುತ್ತವೆ. ಸಾಕಾನೆಗಳು ರಾತ್ರಿ ಕಾಡಿಗೆ ತೆರಳಿ ಆಹಾರಕ್ಕಾಗಿ 20 ರಿಂದ 30 ಕಿಲೋಮೀಟರ್ ಪ್ರಯಾಣಿಸುತ್ತವೆ. ಇಲ್ಲಿಯವರೆಗೆ ಯಾರಿಗೂ ತೊಂದರೆ ನೀಡಿಲ್ಲ ಎಂದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...