ತಿಮ್ಮಪ್ಪನಿಗೆ ₹208 ಕೋಟಿಯ 121 ಕೆ.ಜಿ. ಚಿನ್ನ, ವಜ್ರ ಕಾಣಿಕೆ

Published : Nov 27, 2026, 07:56 AM IST
Tirupati temple gets 121 kg gold donation worth Rs 206 crore

ಸಾರಾಂಶ

ಚೆನ್ನೈ ಮೂಲದ ಉದ್ಯಮಿ ವರ್ಧಮಾನ್‌ ಜೈನ್‌, ತಿರುಪತಿ ತಿಮ್ಮಪ್ಪನಿಗೆ 208 ಕೋಟಿ ರು. ಮೌಲ್ಯದ 121 ಕೆ.ಜಿ. ಚಿನ್ನ ಹಾಗೂ ವಜ್ರಾಭರಣಗಳನ್ನು ಕಾಣಿಕೆಯಾಗಿ ನೀಡಿದ್ದಾರೆ. ಈವರೆಗೆ ತಿಮ್ಮಪ್ಪನಿಗೆ ವ್ಯಕ್ತಿಯೊಬ್ಬರು ನೀಡಿದ ಅತಿಹೆಚ್ಚು ಮೌಲ್ಯದ ದೇಣಿಗೆ.

ತಿರುಪತಿ: ಚೆನ್ನೈ ಮೂಲದ ಉದ್ಯಮಿ ವರ್ಧಮಾನ್‌ ಜೈನ್‌, ತಿರುಪತಿ ತಿಮ್ಮಪ್ಪನಿಗೆ 208 ಕೋಟಿ ರು. ಮೌಲ್ಯದ 121 ಕೆ.ಜಿ. ಚಿನ್ನ ಹಾಗೂ ವಜ್ರಾಭರಣಗಳನ್ನು ಕಾಣಿಕೆಯಾಗಿ ನೀಡಿದ್ದಾರೆ.

ಜೈನ್‌ ತಮ್ಮ ಪತ್ನಿ ರಾಧಿಕಾ ಜೈನ್‌ ಜೊತೆಗೂಡಿ ಈ ಆಭರಣಗಳನ್ನು ದೇವಸ್ಥಾನದ ಆಡಳಿತ ಮಂಡಳಿಯಾದ ಟಿಟಿಡಿಗೆ ಸಿಎಂ ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ಗುರುವಾರ ಹಸ್ತಾಂತರಿಸಿದ್ದಾರೆ. ಇದು, ಈವರೆಗೆ ತಿಮ್ಮಪ್ಪನಿಗೆ ವ್ಯಕ್ತಿಯೊಬ್ಬರು ನೀಡಿದ ಅತಿಹೆಚ್ಚು ಮೌಲ್ಯದ ದೇಣಿಗೆಯಾಗಿದೆ ಎಂದು ಟಿಟಿಡಿ ಹೇಳಿದೆ. ಜೈನ್‌ ಇದೇ ವರ್ಷ ಮೇನಲ್ಲಿ ಟಿಟಿಡಿಗೆ ವಿದ್ಯುತ್‌ ಚಾಲಿತ ಬಸ್‌ಗಳನ್ನೂ ಕಾಣಿಕೆಯಾಗಿ ನೀಡಿದ್ದರು. ಶ್ರೀ ವೆಂಕಟೇಶ್ವರ ಭಕ್ತಿ ಚಾನಲ್‌ ಅಭಿವೃದ್ಧಿಗೆ 7 ಕೋಟಿ ರು., ನಾಣ್ಯ ಸಂಗ್ರಹಿಸುವ ಯಂತ್ರ ಖರೀದಿಗೆ 1 ಕೋಟಿ ರು. ಕೊಟ್ಟಿದ್ದರು.

ಏನೇನು ದಾನ?:

ಜೈನ್‌ ದಂಪತಿ, 46 ಆಭರಣಗಳ 9 ಸೆಟ್‌ ನೀಡಿದ್ದಾರೆ. ಇವುಗಳಲ್ಲಿ ಶ್ರೀವಾರಿ ಕಿರೀಟ, ಪದ್ಮ ಪಾದಗಳು (ಪಾದಗಳಿಗೆ ಧರಿಸುವ ಆಭರಣಗಳು), 238.2 ಕ್ಯಾರಟ್ ವಜ್ರಗಳು, ಚಿನ್ನದ ಹುಲಿ ಉಗುರು, ನಾನಾ ಬಗೆಯ ಸರ, ಕಿರೀಟ, ರತ್ನಗಳು, ಇತರೆ ಹಲವಾರು ಬಗೆಯ ಆಭರಣಗಳು ಸೇರಿದಂತೆ ಇನ್ನಿತರ ಆಭರಣಗಳಿವೆ. ರತ್ನಗಳು ಮತ್ತು ಆಭರಣಗಳ ಪೈಕಿ, ತಿಮ್ಮಪ್ಪನಿಗೆ 106 ಕೆ.ಜಿ. ಹಾಗೂ ಶ್ರೀ ಪದ್ಮಾವತಿ ಅಮ್ಮನವರಿಗೆ 15 ಕೆ.ಜಿ. ತೂಕದ ಚಿನ್ನಾಭರಣಗಳನ್ನು ಅರ್ಪಿಸಲಾಗಿದೆ.

ದಾನಿ ವರ್ಧಮಾನ್‌ ಯಾರು?:

ತಿರುಮಲಕ್ಕೆ ಬೃಹತ್‌ ದೇಣಿಗೆ ನೀಡಿದ ವರ್ಧಮಾನ್‌ ಜೈನ್‌ ಅವರು ಚೆನ್ನೈ ಮೂಲದ ಕೈಗಾರಿಕೋದ್ಯಮಿ. ಆಕ್ಸೆಸ್ ಹೆಲ್ತ್‌ಕೇರ್‌ನ ಸಹ-ಸಂಸ್ಥಾಪಕ ಮತ್ತು ಉಪಾಧ್ಯಕ್ಷರಾದ ಇವರು, ಟೆಕ್ಸಾಸ್ ವಿಶ್ವವಿದ್ಯಾಲಯದ ಪದವೀಧರರು. ಜೈನ್, ಕಂಚಿ ಕಾಮಕೋಟಿ ಮಕ್ಕಳ ಟ್ರಸ್ಟ್ ಆಸ್ಪತ್ರೆಯ ವ್ಯವಸ್ಥಾಪಕ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಇಷ್ಟು ದಾನ ಏಕೆ?:

ವರ್ಧಮಾನ್ ಕಳೆದ ವರ್ಷ ತಮ್ಮ ಕಂಪನಿಯಲ್ಲಿನ ಶೇ.60ರಷ್ಟು ಷೇರುಗಳನ್ನು ಭರ್ಜರಿ 6000 ಕೋಟಿ ರು.ಗೆ ಮಾರಾಟ ಮಾಡಿದ್ದರು. ಈ ವೇಳೆ ತಾವು ಆರಾಧಿಸುವ ತಿಮ್ಮಪ್ಪನಿಗೆ ಕಾಣಿಕೆ ನೀಡುವ ವಾಗ್ದಾನ ಮಾಡಿ ಅದನ್ನು ಇದೀಗ ನೆರವೇರಿಸಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಶಾಲೆ, ಕಾಲೇಜಲ್ಲೂ ಇನ್ನು ಸಂವಿಧಾನ ದಿನಾಚರಣೆ
ಕೆಎಎಸ್ ಪರೀಕ್ಷೆಯ 11 ದಿನದಲ್ಲೇ ರಿಸಲ್ಟ್‌, ಎಲ್ಲರ ಅಂಕ ಬಹಿರಂಗ!