ಬೆಂಗಳೂರು : ನಗರದ ಕೋರಮಂಗಲದ ಕೃಪಾ ನದಿ ಕಾಲೇಜು ಸಿಗ್ನಲ್ ಬಳಿ ಮರದ ಕೊಂಬೆ ಮುರಿದು ಓಎಫ್‌ಸಿ ಕೇಬಲ್‌ನಲ್ಲಿ ನೇತಾಡುತ್ತಾ ಅಪಾಯ ಉಂಟು ಮಾಡುವ ಸ್ಥಿತಿಯಲ್ಲಿ ಇರುವುದನ್ನು ಕಂಡು ಮಂಗಳಮುಖಿ ಹಾಗೂ ಆಟೋ ಚಾಲಕ ಸೇರಿ ತೆಗೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೇಬಲ್ ಮೇಲೆ ಒಣಗಿದ ಕೊಂಬೆ ನೇತಾಡುತ್ತಿರುವುದನ್ನು ಗಮನಿಸಿದ ಮಂಗಳಮುಖಿ ಆಟೋ ನಿಲ್ಲಿಸಿ, ಆಟೋದ ಮೇಲೇರಿ ಕೊಂಬೆ ತೆರವು ಮಾಡುತ್ತೇನೆ ಸಹಾಯ ಮಾಡಿ ಎಂದು ಚಾಲಕನನ್ನು ಕೇಳಿಕೊಂಡಿದ್ದಾರೆ. ಆಗ ಚಾಲಕ ತಾನೇ ಆಟೋ ಮೇಲೇರಿ ಕೊಂಬೆಯನ್ನು ಕೆಳಗೆ ತೆಗೆದು ಹಾಕಿದ್ದಾನೆ. ಕೆಳಗೆ ಹಾಕಿದ ಕೊಂಬೆಯನ್ನು ಮಂಗಳಮುಖಿ ರಸ್ತೆಯ ಪಕ್ಕಕ್ಕೆ ಹಾಕಿ ಹೋಗಿದ್ದಾರೆ.
ಚಾಲಕ ಚಲಾಯಿಸುತ್ತಿದ್ದ ಆಟೋ ಸಂಖ್ಯೆ ಕೆ.ಎ.01ಎಎಫ್5126 ಆಗಿದೆ. ಮಂಗಳಮುಖಿಯ ವಿವರ ತಿಳಿದು ಬಂದಿಲ್ಲ. ಈ ಇಬ್ಬರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.