ಉತ್ತರ ಕರ್ನಾಟಕ ರಾಜ್ಯದ ಪರ ಬಾಲಚಂದ್ರ ಜಾರಕಿಹೊಳಿ ಕೂಗು

Published : Nov 26, 2026, 06:58 AM IST
Balachandra Jarkiholi

ಸಾರಾಂಶ

ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ನಿರೀಕ್ಷಿತ ಪ್ರಗತಿಯಾಗುತ್ತಿಲ್ಲ. ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕ ಭಾಗ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಹೀಗಾಗಿ ಭವಿಷ್ಯದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುವುದು ಅನಿವಾರ್ಯವಾಗಬಹುದು

ಬೆಳಗಾವಿ : ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ನಿರೀಕ್ಷಿತ ಪ್ರಗತಿಯಾಗುತ್ತಿಲ್ಲ. ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕ ಭಾಗ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಹೀಗಾಗಿ ಭವಿಷ್ಯದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುವುದು ಅನಿವಾರ್ಯವಾಗಬಹುದು. ಇಂದಲ್ಲ, ನಾಳೆ, 5 ಅಥವಾ 10 ವರ್ಷದ ನಂತರವಾದರೂ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುತ್ತದೆ. ಪ್ರತ್ಯೇಕ ರಾಜ್ಯ ರಚನೆಯಾದರೆ ನಮ್ಮ ಬೆಂಬಲವಿದೆ ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಅಭಿವೃದ್ಧಿಯ ತಾರತಮ್ಯದ ಕುರಿತು ಅಸಮಾಧಾನ

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಅಭಿವೃದ್ಧಿಯ ತಾರತಮ್ಯದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ದಿ। ಮಾಜಿ ಸಚಿವ, ಉಮೇಶ ಕತ್ತಿ ಅವರನ್ನು ಸ್ಮರಿಸಿದ ಅವರು, ಉಮೇಶ ಕತ್ತಿ ಅವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂಬ ಕೂಗು ಹಲವು ಬಾರಿ ಎತ್ತಿದ್ದರು. ಪ್ರತ್ಯೇಕ ರಾಜ್ಯವಾದರೆ ಬೆಳಗಾವಿ ರಾಜಧಾನಿಯಾಗಲಿದ್ದು, ಇದರಿಂದ ಉತ್ತರ ಕರ್ನಾಟಕದ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದು ಅವರು ಪ್ರತಿಪಾದಿಸುತ್ತಿದ್ದರು ಎಂದರು.

ಅಭಿವೃದ್ಧಿ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ

ಉತ್ತರ ಕರ್ನಾಟಕದ ಅಭಿವೃದ್ಧಿ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ ಎಂಬುವುದು ವಾಸ್ತವ. ದಕ್ಷಿಣ ಕರ್ನಾಟಕದಷ್ಟು ಅಭಿವೃದ್ಧಿ ಈ ಭಾಗದಲ್ಲಿ ಕಾಣಿಸುತ್ತಿಲ್ಲ. ಹೀಗಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ ಮತ್ತೆ ಮುನ್ನೆಲೆಗೆ ಬರಬೇಕಿದೆ. ಇಂದಲ್ಲ, ನಾಳೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಿಯೇ ಆಗುತ್ತದೆ. ಐದು ಅಥವಾ ಹತ್ತು ವರ್ಷಗಳ ನಂತರವಾದರೂ ಪ್ರತ್ಯೇಕ ರಾಜ್ಯ ರಚನೆಯಾಗಬಹುದು. ಆಗ ನಮ್ಮ ಬೆಂಬಲ ಇರಲಿದೆ ಎಂದು ಅವರು ಸ್ಪಷ್ಟಪಡಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ವಾಲ್ಮೀಕಿ ನಿಗಮ ಅಕ್ರಮ : ನಾಗೇಂದ್ರಗೆ ಕ್ಲೀನ್‌ಚಿಟ್‌?
14 ಬಾಂಗ್ಲಾದೇಶಿ ಪ್ರಜೆಗಳ ವಿಳಾಸ ದೃಢೀಕರಣಕ್ಕೆ ವೈದ್ಯನ ಅಕ್ರಮ ಸಹಿ