ಬೆಂಗಳೂರು: ಹಿರಿಯ ಲೇಖಕಿ ಕಮಲಾ ಹಂಪನಾ ನಿಧನ

ಸಾರಾಂಶ

ಹಿರಿಯ ಲೇಖಕಿ ಕಮಲಾ ಹಂಪನಾ(89) ಹೃದಯಾಘಾತದಿಂದ ನಿಧನರಾಗಿದ್ದಾರೆ. ಶುಕ್ರವಾರ ರಾತ್ರಿ ನಿದ್ದೆಯಲ್ಲೇ ಹೃದಯಾಘಾತದಿಂದ ಕಮಲಾ ಹಂಪನಾ ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು : ಹಿರಿಯ ಲೇಖಕಿ ಕಮಲಾ ಹಂಪನಾ(89) ಹೃದಯಾಘಾತದಿಂದ ನಿಧನರಾಗಿದ್ದಾರೆ.  ಶುಕ್ರವಾರ  ರಾತ್ರಿ ನಿದ್ದೆಯಲ್ಲೇ ಹೃದಯಾಘಾತದಿಂದ ಕಮಲಾ ಹಂಪನಾ ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಮಲಾ ಹಂಪನಾ ಅವರು ಬೆಂಗಳೂರಿನ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ವಿಮರ್ಶೆ, ಸಂಶೋಧನೆಗಳಲ್ಲಿ ಹೆಸರಾಗಿದ್ದ ಕಮಲಾ ಹಂಪನಾ, ಮೂಡುಬಿದಿರೆಯಲ್ಲಿ ನಡೆದಿದ್ದ 71ನೇ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷರಾಗಿದ್ದರು.

ಕಮಲಾ ಹಂಪನಾ ಅವರ ಪತಿ ಹಿರಿಯ ಲೇಖಕ ಹಂ.ಪ. ನಾಗರಾಜಯ್ಯ. 

ರಾಜಾಜಿನಗರದ ಮನೆಯಲ್ಲೇ ಕಮಲಾ ಹಂಪನಾ ಅವರ ಅಂತಿಮ ದರ್ಶನ ನಡೆದಿದೆ. ಕಮಲಾ ಹಂಪನಾ ಅವರ ದೇಹದಾನ ಮಾಡಲಾಗಿದೆ. ರಾಮಯ್ಯ ಮೆಡಿಕಲ್​​ ಕಾಲೇಜಿಗೆ ಕಮಲಾ ದೇಹದಾನ. 

ಹಿರಿಯ ಲೇಖಕಿ ಕಮಲಾ ಹಂಪನಾ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Share this article